ಗೋಣಿಕೊಪ್ಪಲು, ಏ. ೨೬: ಕ್ಯಾಂಟರ್ ಲಾರಿ ಹಾಗೂ ಇನೋವ ಕಾರಿನ ನಡುವೆ ಅಪಘಾತವಾಗಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಮೈಸೂರು ಕಡೆಯಿಂದ ಕೇರಳ ಕಡೆಗೆ ತೆರಳಲು ಕ್ಯಾಂಟರ್ ಲಾರಿ ತಿತಿಮತಿ, ಗೋಣಿಕೊಪ್ಪ ಮಾರ್ಗವಾಗಿ ಆಗಮಿಸುತ್ತಿದ್ದ ವೇಳೆ ಚೆನ್ನಂಗೊಲ್ಲಿ ಬಳಿ ಇಳಿಜಾರಿನಲ್ಲಿ ಗೋಣಿಕೊಪ್ಪದಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಇನೋವ ಕಾರಿಗೆ ಡಿಕ್ಕಿಯಾಗಿದೆ. ಸುದ್ದಿ ತಿಳಿದ ಗೋಣಿಕೊಪ್ಪ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಇನೋವ ಕಾರು ಜಖಂಗೊAಡಿದೆ.