ಗೋಣಿಕೊಪ್ಪಲು, ಏ. ೨೬: ಹುದಿಕೇರಿಯಲ್ಲಿ ನಡೆಯುತ್ತಿರುವ ಚೆಕ್ಕೇರ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ೨೦ನೇ ದಿನ ೭ ತಂಡಗಳು ಮುನ್ನಡೆ ಸಾಧಿಸಿದವು.
ಚಿಮ್ಮಣಮಾಡ ವಿರುದ್ಧ ಚೀಯಣಮಾಡ ಗೆಲುವು ಪಡೆಯಿತು. ಚಿಮ್ಮಣಮಾಡ ೬ ವಿಕೆಟ್ ಕಳೆದುಕೊಂಡು ೬೩ ರನ್ ಗಳಿಸಿತು. ಚೀಯಣಮಾಡ ತಂಡ ತನ್ನ ೪ ವಿಕೆಟ್ ಕಳೆದುಕೊಂಡು ೩೦ ರನ್ ಗಳಿಸಲಷ್ಟೆ ಶಕ್ತವಾಯಿತು.
ಕರ್ತಮಾಡ ವಿರುದ್ಧ ಪೂಳಂಡ ಪರಾಭವಗೊಂಡಿತು. ಮೊದಲು ಬ್ಯಾಟ್ ಮಾಡಿದ ಕರ್ತಮಾಡ ೪ ವಿಕೆಟ್ ಕಳೆದುಕೊಂಡು ೭೫ ರನ್ ಗಳಿಸಿತು. ಪೂಳಂಡ, ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ ೩೮ ರನ್ ಗಳಿಸಿ ಪರಾಜಿತಗೊಂಡಿತು.
ಕೋಟ್ರಂಗಡ ವಿರುದ್ಧ ತೀತಿರ (ಹುದಿಕೇರಿ) ೧ ರನ್ ಅಂತರದಲ್ಲಿ ಸೋಲಿಗೆ ಶರಣಾಯಿತು. ಕೋಟ್ರಂಗಡ ೩ ವಿಕೆಟ್ ಕಳೆದುಕೊಂಡು ೫೯ ರನ್ ಗಳಿಸಿತು. ನಿಗದಿತ ರನ್ ಅನ್ನು ಬೆನ್ನತ್ತಿದ ತೀತಿರ ೫ ವಿಕೆಟ್ ಕಳೆದುಕೊಂಡು ೫೮ ರನ್ ಗಳಿಸಿತಾದರೂ ಗೆಲುವು ಪಡೆಯಲು ಸಾಧ್ಯವಾಗಲಿಲ್ಲ.
ಅಮ್ಮುಣಿಚಂಡ ವಿರುದ್ಧ ಕಾಳಿಮಾಡ ಗೆಲುವಿನ ನಗೆ ಬೀರಿತು. ಕಾಳಿಮಾಡ ಯಾವುದೇ ವಿಕೆಟ್ ಕಳೆದುಕೊಳ್ಳದೆ ೩೭ ರನ್ ಗಳಿಸಿತು. ಅಮ್ಮುಣಿಚಂಡ ೫ ವಿಕೆಟ್ ಕಳೆದುಕೊಂಡು ೩೬ ರನ್ ಗಳಿಸುವ ಮೂಲಕ ಸೋಲನ್ನು ಕಾಣುವಂತಾಯಿತು.
ಕರವಂಡ ವಿರುದ್ಧ ಮಚ್ಚಮಾಡ ಗೆಲುವು ದಾಖಲಿಸಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಮಚ್ಚಮಾಡ ೯ ವಿಕೆಟ್ ಕಳೆದುಕೊಂಡು ೫೧ ರನ್ ಗಳಿಸಿತು. ಕರವಂಡ ೪ ವಿಕೆಟ್ ಕಳೆದುಕೊಂಡು ೩೭ ರನ್ ಸಂಪಾದಿಸಿ ಸೋಲಿಗೊಳಗಾಯಿತು.
ಮಾಚೆಟ್ಟಿರ (ಬಾಳುಗೊಡು) ವಿರುದ್ಧ ಬೊಜ್ಜಂಗಡ ಗೆಲುವು ಪಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಬೊಜ್ಜಂಗಡ ೩ ವಿಕೆಟ್ ಕಳೆದುಕೊಂಡು ೪೭ ರನ್ ಸಂಪಾದಿಸಿತು. ಮಾಚೆಟ್ಟಿರ ೯ ವಿಕೆಟ್ ಕಳೆದುಕೊಂಡು ೪೫ ಗಳಿಸುವ ಮೂಲಕ ಸೋಲನ್ನು ಅನುಭವಿಸಿತು.
ಚೋನಿರ ವಿರುದ್ಧ ಪುಟ್ಟಿಚಂಡ ಸೋಲು ಕಂಡಿತು. ಮೊದಲು ಬ್ಯಾಟಿಂಗ್ ಆಯ್ದುಕೊಂಡ ಚೋನಿರ ೧ ವಿಕೆಟ್ ಕಳೆದುಕೊಂಡು ೫೯ ರನ್ ಗಳಿಸಿತು. ಪುಟ್ಟಿಚಂಡ ೨ ವಿಕೆಟ್ ಕಳೆದುಕೊಂಡು ೫೭ ರನ್ ಗಳಿಸಿ ಸೋಲನ್ನು ಅನುಭವಿಸಿತು.