ಮಡಿಕೇರಿ, ಏ. ೨೬: ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಗರದ ಜ. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಗೌಡ ಜನಾಂಗದ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಕೊಡಗು ಜಿಲ್ಲಾ ಒಕ್ಕಲಿಗ ಯುವ ವೇದಿಕೆ ಹಾಗೂ ದಿ ಎಲೈಟ್ ಕ್ರಿಕೆಟ್ ಕ್ಲಬ್ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಕಾಲಿಟ್ಟಿತು.

ಒಕ್ಕಲಿಕ ಯುವ ವೇದಿಕೆ ಮೊದಲು ಬ್ಯಾಟ್ ಮಾಡಿ ೯ ವಿಕೆಟ್ ನಷ್ಟಕ್ಕೆ ೧೫೦ ರನ್ ದಾಖಲಿಸಿತು. ಗುರಿ ಬೆನ್ನತ್ತಿದ ಕೂರ್ಗ್ ಹಾಕ್ಸ್ ಎಲ್ಲಾ ವಿಕೆಟ್ ಕಳೆದುಕೊಂಡು ೧೦೪ ರನ್ ಗಳಿಸಿ ಸೋಲಿಗೆ ಶರಣಾಯಿತು. ಒಕ್ಕಲಿಗ ಯುವ ವೇದಿಕೆ ತಂಡದ ವಿಕ್ರಂ ಸಾಗರ್ ೮೮ ರನ್ ದಾಖಲಿಸುವ ಜೊತೆಗೆ ೩ ವಿಕೆಟ್ ಪಡೆದು ಮಿಂಚಿದರು.

ದಿ ಎಲೈಟ್ ಕ್ಲಬ್ ಸ್ಕಾ÷್ವಡ್ - ೨ ವಿರುದ್ಧ ದಿ ಎಲೈಟ್ ಕ್ರಿಕೆಟ್ ಕ್ಲಬ್ ಗೆಲುವಿನ ನಗೆ ಬೀರಿತು. ಮೊದಲು ಬ್ಯಾಟ್ ಮಾಡಿದ ಎಲೈಟ್ ಕ್ಲಬ್ ೭ ವಿಕೆಟ್ ನಷ್ಟಕ್ಕೆ ೧೮೭ ರನ್ ದಾಖಲಿಸಿತು. ಗುರಿ ಬೆನ್ನತ್ತಿದ ಎಲೈಟ್ ಕ್ಲಬ್ ಸ್ಕಾ÷್ವಡ್-೨ ೭ ವಿಕೆಟ್ ನಷ್ಟಕ್ಕೆ ೧೬೯ ರನ್‌ಗಳನಷ್ಟೇ ದಾಖಲಿಸಲು ಶಕ್ತವಾಗಿ ಸೋಲೊಪ್ಪಿಕೊಂಡಿತು.

ಮಹಿಳಾ ಆಟಗಾರ್ತಿ ಜಾಹ್ನವಿ ಕಟ್ಟೆಮನೆ ದಿ ಎಲೈಟ್ ಕ್ರಿಕೆಟ್ ಕ್ಲಬ್ ಪರ ಆಟವಾಡಿದ್ದು, ವಿಶೇಷವಾಗಿತ್ತು.