ಚೆಂಬೆಬೆಳ್ಳೂರಿನ ಬೋಡ್‌ನಮ್ಮೆ ವೈಭವದ ವಿಶೇಷ

ಚೆಟ್ಟಳ್ಳಿ-ಚೆಂಬೆಬೆಳ್ಳೂರ್, ಏ. ೨೫: ಹುಲಿವೇಷ, ಪೀಲ್ಲ್ ಭೂತ, ಬಂಡ್‌ಕಳಿ, ಜೋಯಿ ಚೂಳೆ, ಕೋಡಂಗಿ, ಬುಡ್‌ಬುಡ್‌ಕೆ, ಪುರುಷರು - ಮಹಿಳೆಯರ ವೇಷ, ತಾಲಿಪಾಟ್, ರಾಜಕಾರಣಿಯರು... ಹೀಗೆ ವಿವಿಧ ವೇಷಭೂಷಣದೊಂದಿಗೆ ಆಕರ್ಷಣೀಯ ವಿನೋದ, ಉಲ್ಲಾಸ, ಭಕ್ತಿಯ ಹೆಗ್ಗುರುತಿನ ಕೊಡಗಿನ ಚೆಂಬೆಬೆಳ್ಳೂರ್ ಬೋಡ್ ನಮ್ಮೆಯ ಸಾಂಪ್ರದಾಯಿಕ ವೈಭವದ ಆಚರಣೆ ಈ ಬಾರಿಯೂ ಮೆರಗು ನೀಡಿತ್ತು.

ಕೊಡಗಿನ ಎಲ್ಲೆಡೆ ದೇವರ ಉತ್ಸವದ ಆಚರಣೆ ಸಡಗರ. ತಮ್ಮ ಕೆಲಸ ಕಾರ್ಯವನ್ನೆಲ್ಲ ಬದಿಗಿಟ್ಟು ಊರಿನ ದೇವಾಲಯದ ಹಲವು ಕಟ್ಟುಪಾಡಿನಂತೆ ನಡೆಯುತ್ತಾ ಉತ್ಸವದಲ್ಲಿ ತೊಡಗಿಸಿಕೊಳ್ಳುವ ಸಮಯ. ಊರಿನ ಹಲವು ಬಗೆಯ ಉತ್ಸವದೊಂದಿಗೆ ಸಾಂಪ್ರದಾಯಿಕ ಬೋಡ್‌ನಮ್ಮೆಯೂ ಒಂದಾಗಿದೆ.

ಉತ್ತರ ಕೊಡಗಿನಲ್ಲಿ ಜಿಂಕೆಕೊAಬಿನ ಕೊಂಬಾಟ್, ಪೀಲಿಯಾಟ್, ಬೊಳಕಾಟ್, ಚೌರಿಯಾಟ್ ಉತ್ಸವದಲ್ಲಿ ಮರೆಗು ನೀಡಿದರೆ. ದಕ್ಷಿಣ ಕೊಡಗಿನಲ್ಲಿ ಬೋಡ್ ನಮ್ಮೆಯದೇ ಮತ್ತೊಂದು ವಿಶೇಷ. ಬಗೆಬಗೆಯ ವೇಷಧಾರಿಗಳು ವಿಭಿನ್ನ ಹಾಡು, ನೃತ್ಯ, ದುಡಿಕೊಟ್ಟ್, ದೋಳ್, ತಾಲಿಪಾಟ್ ವಾಲಗ... ಇತ್ಯಾದಿ ಸಂಭ್ರಮೊಲ್ಲಾಸದೊAದಿಗೆ ಜರುಗಿದೆ.

ಆಯಾಯ ಊರಿನ ಭದ್ರಕಾಳಿ ದೇವಾಲಯದ ಪುರಾತನ ಧಾರ್ಮಿಕ ಕಟ್ಟುಪಾಡಿಗೆ ಒಳಪಟ್ಟಂತೆ ಸಂಪ್ರದಾಯ ಆಚರಣೆಗಳು ವಿಭಿನ್ನವಾಗಿ ಕಂಡುಬರುತ್ತದೆ.ವಿಭಿನ್ನ ಧಾರ್ಮಿಕ ಬುಡಕಟ್ಟು ಸಂಪ್ರದಾಯದ ಬೋಡ್ ನಮ್ಮೆಯಲ್ಲಿ ಮೈಯೆಲ್ಲ ಬಣ್ಣ ಬಳಿದುಕೊಂಡಿರುವ ಹುಲಿವೇಷಧಾರಿಗಳು, ಕೆಸರನೆಲ್ಲಾ ಮೈಗೆ ಹಚ್ಚಿಕೊಂಡು ಕುಣಿಯುವ ಬಂಡ್‌ಕಳಿ, ಭತ್ತದ ಹುಲ್ಲನ್ನು ಮೈಗೆ ಸುತ್ತಿಕೊಂಡಿರುವ ಪಿಲ್ಲ್ ಭೂತ, ಜೋಯಿ ಚೂಳೆ ಗಮನ ಸೆಳೆದಿವೆ. ಸಾಂಪ್ರದಾಯಿಕ ಡೋಳಿನ ಹಾಡಿನೊಂದಿಗೆ ಚಿಕ್ಕವ್ವ ಜೋಗಿ ಊರಿನಮನೆ ಮನೆಗಳಿಗೆ ತೆರಳಿದ ನಂತರ ವಿವಿಧ ವೇಷಧಾರಿಗಳು ಧನ - ಧಾನ್ಯಗಳನ್ನು ಬೇಡಿ ಪಡೆಯುತ್ತಾ ದೇವನೆಲೆಯಲ್ಲಿ ಅರ್ಪಿಸಿ ಹರಕೆಯನ್ನು ತೀರಿಸುವುದರಿಂದಲೇ ಬೋಡ್‌ನಮ್ಮೆ ಎನಿಸಿಕೊಂಡಿದೆ.

ಕೆಲವೆಡೆ ಬೋಡ್ ಹಬ್ಬದಂದೇ ಶೃಂಗರಿಸಿದ ಬಿದಿರಿನ ಕುದುರೆಯೊಂದಿಗಿನ ವಿಶೇಷ ಆಚರಣೆ ನಡೆದರೆ ಮತ್ತೆ ಕೆಲವೆಡೆ ಒಂದು ದಿನದ ಮುಂಚಿತವಾಗಿ ಬಿದಿರ ಕುದುರೆಯ ಆಚರಣೆ ನಡೆಯುತ್ತದೆ.

ಈಗಾಗಲೇ ಕುತ್ತ್ನಾಡ್, ಕುಟ್ಟಂದಿ, ಬಿ. ಶೆಟ್ಟಿಗೇರಿ, ಚೀಣಿವಾಡದಲ್ಲಿ ಬೋಡ್ ನಮ್ಮೆ ಮುಕ್ತಾಯಗೊಂಡಿದೆ. ಮುಂದಿನ ತಿಂಗಳಲ್ಲಿ ಬರುವ ಬೋಂದತ್ ಬೋಡ್, ನಾಗಾಲ ಬೋಡ್, ಹಳ್ಳಿಗಟ್ಟ್ ಬೋಡ್ ಇನ್ನು ಹಲವೆಡೆ ಬೋಡ್ ನಮ್ಮೆಯ ಧಾರ್ಮಿಕ ಆಚರಣೆಗೂ ತಯಾರಿ ನಡೆಯುತ್ತಿದೆ. ಕೆಲವೆಡೆ ಎರಡು ವರ್ಷಕೊಮ್ಮೆ ನಡೆದರೆ, ಮತ್ತೆ ಕೆಲವೆಡೆ ಮೂರು ವರ್ಷಕೊಮ್ಮೆ ಬೋಡ್‌ನಮ್ಮೆ ನಡೆಯಲಿದೆ.

ದೊಡ್ಡದಾದ ಊರಿನ ವ್ಯಾಪ್ತಿ ಹೊಂದಿರುವ ಹೆಚ್ಚಿನ ಜನಾಕರ್ಷಣೆಯ ಚೆಂಬೆಬೆಳ್ಳೂರು ಬೋಡ್‌ನಮ್ಮೆ ಆಚರಣೆಯೇ ಮತ್ತೊಂದು ವಿಶೇಷ. ಊರಿನವರು ಮೊದಲು ಊರಿನ ಅಂಬಲದಲ್ಲಿ ಸೇರಿ ಚೀರುಳ್ಳಿ ಅಂಬಲಕ್ಕೆ ಬಂದು ತೆರೆಕಟ್ಟಿ ದೇವರ ಮೊಗದೊಂದಿಗೆ ದೇವರನೆಲೆಗೆ ತರುವ ಮೂಲಕ ಹಬ್ಬದ ಆಚರಣೆ ಪ್ರಾರಂಭವಾಗುವುದು. ತಾ. ೧೪ ರಂದು ಹಬ್ಬಕಟ್ಟು ಹಾಕಲಾಯಿತು. ತಾ. ೨೨ ರಂದು ಪಟ್ಟಣಿ, ತಾ. ೨೩ ರಂದು ಕುದುರೆ, ತಾ. ೨೪ ರಂದು ಬೋಡ್‌ನಮ್ಮೆ, ತಾ. ೨೫ಕ್ಕೆ ಚೂಳೆನಮ್ಮೆ ನಡೆಯಿತು. ಊರಿನವರಲ್ಲದೆ ಸಾವಿರಾರು ಭಕ್ತರು ಬೋಡ್ ನಮ್ಮೆಗೆ ಪ್ರತೀವರ್ಷ ಸಾಕ್ಷಿಯಾಗುವರು.

ಕೊಡಗಿನಲ್ಲೇ ಪ್ರಸಿದ್ಧಿ ಹೊಂದಿರುವ ವೀರಾಜಪೇಟೆ ಸಮೀಪದ ಚೆಂಬೆಬೆಳ್ಳೂರಿನ ವಾರ್ಷಿಕ ಬೋಡ್‌ನಮ್ಮೆಯು ಶ್ರದ್ಧಾಭಕ್ತಿಯಿಂದ ನೆರವೇರಿತು.

ತಾ. ೧೪ ರಂದು ಹಬ್ಬದಕಟ್ಟು ಬೀಳಲಾಯಿತು. ತಾ. ೨೨ ರಂದು ಪಟ್ಟಣಿಹಬ್ಬ ಆಚರಿಸಲಾಗಿ ಪಣಿಕರ ಡೋಲಿನಕೊಟ್ಟು ಹಾಗೂ ಕೊಂಬು ಊದಿದ ನಂತರ ಊರಿನವರ ಸಂಪ್ರದಾಯದAತೆ ಪಟ್ಟಣಿ ಮುರಿಯಲಾಯಿತು.

ಹಬ್ಬದ ಅಂಗವಾಗಿ ಭದ್ರಕಾಳಿ ದೇವಾಲಯಕ್ಕೆ ತಳಿರು ತೋರಣಗಳಿಂದ ಅಲಂಕರಿಸಿದರೆ, ದೇವರನ್ನು ವಿಶೇಷ ಅಲಂಕಾರದೊAದಿಗೆ ಶೃಂಗರಿಸಲಾಗಿತ್ತು.

ಅAದು ಚೀರುಳಿ ಅಂಬಲದಲ್ಲಿ ಭದ್ರಕಾಳಿಯ ಒಂದುಮುಡಿ ತೆರೆಕಟ್ಟಿ ಪೂಜಿಸಿ ದೇವರನೆಲೆಗೆ ಬಂದು ಕುಣಿಯಲಾಯಿತು.

ತಾ. ೨೩ ರಂದು ಊರಿನ ಮೂರು ಕೇರಿಯಿಂದ ಬೆತ್ತದಿಂದ ಮಾಡಿ ಶೃಂಗರಿಸಿದ ಕೃತಕ ಮೂರು ಕುದುರೆಯೊಂದಿಗೆ ಊರಿನವರ ಸಮ್ಮುಖದಲ್ಲಿ ಅಂಬಲಕ್ಕೆ ಬಂದು ದೇವಾಲಯದಲ್ಲಿ ಸೇರುವ ಮೂಲಕ ಪೂಜಾ ಕೈಂಕರ್ಯವನ್ನು ನೆರವೇರಿಸಲಾಯಿತು. ಬೊಳಕಾಟ್, ತೆಂಗಿನಕಾಯಿ ಎಳೆಯುವ ಸ್ಪರ್ಧೆ, ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ರಾತ್ರಿ ಊರಿನವರು, ಹರಕೆ ಹೊತ್ತವರು ಮೈಯಲ್ಲೆಲ್ಲ ಬಣ್ಣ ಬಳಿದು ಕೆಲವರು ಹುಲಿವೇಷಧಾರಿಗಳಾದರೆ, ವಿವಿಧ ವೇಷಕಟ್ಟಿ ಬೆಳಗಿನವರೆಗೆ ಮನೆಮನೆಗೆ ತೆರಳಿದರು.

ತಾ. ೨೪ ರಂದು ಸಂಜೆ ವೇಷಧಾರಿಗಳು ಅಂಬಲದಲ್ಲಿ ಸೇರಿದರು. ಊರಿನವರು ಹಾಡಿನೊಂದಿಗೆ ಡೋಲನ್ನು ಬಾರಿಸುತ್ತಾ ದೋಳ್‌ಪಾಟ್‌ನೊಂದಿಗೆ ಭದ್ರಕಾಳಿ, ಚಾಮುಂಡಿ ಹಾಗೂ ಮಕ್ಕಾಟ್ ಅಯ್ಯಪ್ಪ ಮೈಗೆ ಬಂದವರು ದೇವರ ಕಡತಲೆಯನ್ನು ಜಳಪಿಸುತ್ತಾ ಭದ್ರಕಾಳಿ ದೇವಾಲಯದೆಡೆಗೆ ನಡೆದರೆ, ಹಲವು ವೇಷಧಾರಿಗಳ ತಂಡ ಡೋಲಿನ ಕೊಟ್ಟಿಗೆ ಹೆಜ್ಜೆ ಹಾಕಿ ಕುಣಿಯತ್ತಾ ದೇವಾಲಯದೊಳಕ್ಕೆ ಪ್ರವೇಶಿಸಿ ದೇವರ ಗರ್ಭಗುಡಿಗೆ ಮೂರು ಪ್ರದಕ್ಷಿಣೆ ಬರಲಾಯಿತು.ತಾ. ೨೫ ರಂದು ಸಾಂಪ್ರದಾಯಿಕ ಚೂಳೆ. ಹೆಣ್ಣಿನ ವೇಷಧಾರಿ ಹಾಗೂ ಹೆಣ್ಣುಮಕ್ಕಳು ಅಂಬಲಕ್ಕೆ ಸೇರಿ ದೇವಾಲಯಕ್ಕೆ ಬರುವದು. ಎತ್ತುಪೋರಾಟ, ತೆಂಗಿನಕಾಯಿ ಎಳೆದರು. ತಾ. ೨೬ ರಂದು ಕಾರಮಡ್‌ಕೋ ಎಂಬ ಸಂಪ್ರದಾಯದAತೆ ದೇವರ ಭಂಡಾರದ ಲೆಕ್ಕಾಚಾರ, ಸಭೆಯೊಂದಿಗೆ ಹಬ್ಬದ ಆಚರಣೆಗೆ ಕೊನೆಯಾಗುವುದು.

ಹಿಂದಿನಿAದಲೇ ನೆರೆಯ ಹಲವು ಊರುಗಳ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಹಬ್ಬ ಆಚರಿಸುತ್ತಾರೆ. ಹಿಂದೊಮ್ಮೆ ಊರಿಗೆ ಸಿಡುಬು ಬಂದಿತAತೆ, ಆ ಸಮಯದಲ್ಲಿ ಕಾಪಾಡೆಂದು ಊರಿನವರು ಕೆಸರನ್ನು ಭದ್ರಕಾಳಿ ದೇವರಿಗೆ ಹರಕೆಹೊತ್ತ ಫಲವಾಗಿ ಸಿಡುಬು ಮಾಯವಾಗಿ ಊರನ್ನೇ ರಕ್ಷಿಸಿದ ಅಪಾರ ಶಕ್ತಿ ದೇವರ ನೆಲೆ ಎಂದು ಹಿರಿಯರು ಹೇಳುತ್ತಾರೆ. ಅದೇರೀತಿ ಹಿಂದಿನಿAದಲೇ ನಡೆದು ಬಂದ ಸಂಪ್ರದಾಯದAತೆ ಊರಿನವರು ದೇವಾಲಯದ ಕಟ್ಟುಪಾಡು ಆಚರಣೆ ಸಂಪ್ರದಾಯವನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಾ ತಮ್ಮ ತಮ್ಮ ಹರಕೆಯನ್ನು ದೇವರಿಗೆ ಅರ್ಪಿಸಿ ಒಳಿತಾಗಲೆಂದು ಬೇಡಿಕೊಳ್ಳುವುದೇ ಈ ಬೋಡ್ ನಮ್ಮೆಯ ವಿಶೇಷ.

- ಪುತ್ತರಿರ ಕರುಣ್ ಕಾಳಯ್ಯ