ಕುಶಾಲನಗರ, ಏ. ೨೫ : ಕೊಡಗು ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆ, ಒಕ್ಕಲಿಗರ ಯುವ ವೇದಿಕೆ, ಕುಶಾಲನಗರ ತಾಲ್ಲೂಕು ಹಾಗೂ ಒಕ್ಕಲಿಗರ ರಿಕ್ರಿಯೇಶನ್ ಸ್ಪೋರ್ಟ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಒಕ್ಕಲಿಗ ಕ್ರೀಡೋತ್ಸವಕ್ಕೆ ಕುಶಾಲನಗರ ಸರಕಾರಿ ಪದವಿ ಪೂರ್ವ ಕಾಲೇಜಿನ ಮೈದಾನ ದಲ್ಲಿ ಚಾಲನೆ ನೀಡಲಾಯಿತು.

ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಒಕ್ಕಲಿಗ ಗೌಡ ಯುವವೇದಿಕೆ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ ಅವರು ಕ್ರೀಡಾ ಚಟುವಟಿಕೆಗಳಿಗೆ ಚಾಲನೆ ನೀಡಿದರು.

ಶುಕ್ರವಾರ ಕ್ರಿಕೆಟ್ ಪಂದ್ಯಾಟ ನಡೆಯಿತು. ಜಿಲ್ಲೆಯಿಂದ ಸುಮಾರು ೧೦ ತಂಡಗಳು ಕ್ರಿಕೆಟ್ ಪಂದ್ಯಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಎಂಬಿ ಕೃಷ್ಣಪ್ಪ ತಿಳಿಸಿದ್ದಾರೆ.

ಭಾನುವಾರ ಪುರುಷರ ವಾಲಿಬಾಲ್, ಮಹಿಳೆಯರ ಥ್ರೋಬಾಲ್, ಮಹಿಳೆಯರಿಗೆ ಮತ್ತು ಪುರುಷರಿಗೆ ಹಗ್ಗ ಜಗ್ಗಾಟ, ಮಹಿಳೆಯರಿಗೆ ಮತ್ತು ಪುರುಷರಿಗೆ ಶಾಟ್‌ಪುಟ್, ವಯಸ್ಕರಿಗೆ ಹಾಗೂ ಮಕ್ಕಳಿಗೆ ಆಟೋಟ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದರು.

ಈ ಸಂದರ್ಭ ಸ್ಥಳೀಯ ಉದ್ಯಮಿಗಳಾದ ನಾಗೇಶ್ ಎಂ.ಕೆ. ಮಂಜುನಾಥ್ ಕಿಕ್ ಬಾಕ್ಸಿಂಗ್ ರಸ್ತೆಯ ಚಾಂಪಿಯನ್ ಅಮಿತ್ ವೇದಿಕೆಯ ತಾಲೂಕು ಅಧ್ಯಕ್ಷ ಜಯರಾಜ್, ಪ್ರೊ. ಕಬಡ್ಡಿ ಆಟಗಾರ ಅವಿನಾಶ್ ನಿರ್ದೇಶಕ ರಾದ ಎಂ.ಹೆಚ್. ಕಿರಣ್, ಚಂದ್ರಶೇಖರ್ ಹೇರೂರು ಮತ್ತಿತರರು ಇದ್ದರು.