ಮಡಿಕೇರಿ, ಏ. ೨೫: ಜಿಲ್ಲೆಯ ಹಿರಿಯ ರಾಜಕಾರಣಿ, ಕಾಂಗ್ರೆಸ್ ಮುಖಂಡ, ಉದ್ಯಮದಲ್ಲಿಯೂ ಖ್ಯಾತಿ ಗಳಿಸಿದ್ದ ಬೊಟ್ಟೋಳಂಡ ಜಿ. ಮಿಟ್ಟು ಚಂಗಪ್ಪ ಅವರು ತಾ. ೨೪ ರಂದು ನಿಧನರಾಗಿದ್ದು, ಇಂದು ಅವರ ಅಂತಿಮ ಸಂಸ್ಕಾರ ನೆರವೇರಿತು.

ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದ ಮಿಟ್ಟು ಚಂಗಪ್ಪ ಅವರ ಮೃತ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕಾಗಿ ಮಡಿಕೇರಿಯ ಗಾಂಧಿ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು, ಇಂಧನ ಸಚಿವ ಕೆ.ಜೆ. ಜಾರ್ಜ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ಶಾಸಕರೂ ಆಗಿರುವ ಎ.ಎಸ್. ಪೊನ್ನಣ್ಣ, ಅರಕಲಗೂಡು ಶಾಸಕ ಎ. ಮಂಜು, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ, ಮಾಜಿ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚುರಂಜನ್, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ, ಉಪಾಧ್ಯಕ್ಷ ಕಾಂಗಿರ ಅಶ್ವತ್, ಪ್ರಮುಖರಾದ ಮಹೇಶ್ ಜೈನಿ, ಬಿ.ಎ. ಹರೀಶ್, ಮನು ಮುತ್ತಪ್ಪ, ರಾಜೇಶ್ ಯಲ್ಲಪ್ಪ, ಹಿರಿಯ ವಕೀಲ ಚಂದ್ರಮೌಳಿ, ವಿನೋದ್ ಶಿವಪ್ಪ, ಟಿ.ಪಿ. ರಮೇಶ್, ಅರುಣ್ ಮಾಚಯ್ಯ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯ, ಕೆ.ಎ. ಹಂಸ, ಯಾಕೂಬ್, ನಾಪಂಡ ಮುತ್ತಪ್ಪ, ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಪದಾಧಿಕಾರಿಗಳು, ಸದಸ್ಯರು, ಕುಟುಂಬ ಸದಸ್ಯರು, ಬಂಧುಮಿತ್ರರು ಅಂತಿಮನಮನ ಸಲ್ಲಿಸಿದರು. ಬಳಿಕ ಮಡಿಕೇರಿಯ ಕೊಡವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಗಾಂಧಿ ಮೈದಾನದಲ್ಲಿ ಸರಕಾರದ ಮೂಲಕ ಸಕಲ ವ್ಯವಸ್ಥೆಯೊಂದಿಗೆ, ಪೊಲೀಸ್ ಬಂದೋಬಸ್ತ್ ಕೂಡ ಏರ್ಪಡಿಸಲಾಗಿತ್ತು.