ಐಗೂರು, ಏ. ೨೫: ಬೀಡಿ, ಸಿಗರೇಟು ಮತ್ತು ಗುಟ್ಕಾ ಮಾರಾಟ ಮತ್ತು ನಿಷೇಧದ ಬಗ್ಗೆ ಸಾರ್ವಜನಿಕರಿಗೆ ಅರಿವು ಮತ್ತು ಜಾಗೃತಿ ಮೂಡಿಸಲು ಕೋಟ್ಪಾ ಕಾಯ್ದೆ-೨೦೦೩ರ ಅನುಸಾರ ಜಿಲ್ಲಾದ್ಯಂತ ಅಂಗಡಿ ಮಳಿಗೆಗಳ ಮುಂದೆ ನಾಮಫಲಕಗಳನ್ನು ಅಳವಡಿಸಬೇಕಾಗಿತ್ತು.

ಸೋಮವಾರಪೇಟೆ ಪೊಲೀಸ್ ಠಾಣಾ ಸಿಬ್ಬಂದಿಗಳು ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಅಂಗಡಿ ಮಾಲೀಕರಿಗೆ ತಂಬಾಕು ಪದಾರ್ಥಗಳ ಮಾರಾಟ ನಿಷೇಧದ ಬ್ಯಾನರ್‌ಗಳನ್ನು ವಿತರಿಸಿದರು.