ವೀರಾಜಪೇಟೆ, ಏ. ೨೪: ವೀರಾಜಪೇಟೆ ಕಾವೇರಿ ಕಾಲೇಜು ಹಾಗೂ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಅಣಬೆ ಬೇಸಾಯದ ಕುರಿತು ಕಾರ್ಯಾಗಾರವು ಕಾಲೇಜಿನ ಕೌಸ್ತುಭ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಬೆನೆಡಿಕ್ಟ್ ಆರ್. ಸಲ್ದಾನ, ಪ್ರತಿಯೊಬ್ಬ ಮನುಷ್ಯನಿಗೂ ಸಾಧಿಸುವ ಛಲವಿದ್ದರೆ ಹಲವಾರು ಅವಕಾಶಗಳಿವೆ. ಆರ್ಥಿಕವಾಗಿ ಸಬಲರಾಗಲು ವಿವಿಧ ಮಾರ್ಗಗಳಿದ್ದು, ಅದರಲ್ಲಿ ಅಣಬೆ ಬೇಸಾಯ ಕೂಡ ಒಂದು ಎಂದರು.

ಸAಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಲಕ್ಷಿö್ಮ ಸಾಗರ್ ಮಾತನಾಡಿ, ಅಣಬೆ ಬೇಸಾಯವನ್ನು ಪೂರ್ಣಕಾಲಿಕ ಹಾಗೂ ಅರೆಕಾಲಿಕ ವೃತ್ತಿಯಾಗಿ ತೆಗೆದುಕೊಳ್ಳಬಹುದು. ಇದರಲ್ಲಿ ನಾವು ನೂರು ರೂಪಾಯಿಯನ್ನು ಹೂಡಿಕೆ ಮಾಡಿದರೆ ೫೦೦ ರೂಪಾಯಿ ಲಾಭವನ್ನು ಗಳಿಸಬಹುದು ಎಂದರು.

ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಅಣಬೆ ಬೇಸಾಯ ವಿಭಾಗದ ಪ್ರಯೋಗಾಲಯ ಸಹಾಯಕಿ ವೀಣಾ ಅಶೋಕ್ ಮಾತನಾಡಿ, ಅಣಬೆ ಬೇಸಾಯದಲ್ಲಿ ಅನುಸರಿಸಬೇಕಾದ ಕ್ರಮಗಳು ಹಾಗೂ ಅಣಬೆಯನ್ನು ಸೇವಿಸುವುದರಿಂದ ಆಗುವಂತಹ ಆರೋಗ್ಯಕರ ಉಪಯೋಗಗಳೊಂದಿಗೆ ಬೆಳೆದಂತಹ ಅಣಬೆಗಳನ್ನು ಹೇಗೆ ಮೌಲ್ಯಯುತ ವಸ್ತುಗಳಾಗಿ ಬದಲಾವಣೆ ಮಾಡಬೇಕೆಂಬುದರ ಕುರಿತು ತಿಳಿಸಿದರು.

ವೇದಿಕೆಯ ಕಾರ್ಯಕ್ರಮದ ನಂತರ ಅಣಬೆ ಬೆಳೆಗಾರರಾದಂತಹ ಸಿ.ಎ. ಮಾದಪ್ಪ ಹಾಗೂ ಆಶಾ ಮಾದಯ್ಯ ಅವರು ವಿದ್ಯಾರ್ಥಿಗಳಿಗೆ ಅಣಬೆ ಬೇಸಾಯದ ವಿಧಾನವನ್ನು ಪ್ರಾತ್ಯಕ್ಷಿಕೆಯೊಂದಿಗೆ ತಿಳಿಸಿಕೊಟ್ಟು ನಂತರ ವಿದ್ಯಾರ್ಥಿಗಳಿಂದ ಪ್ರಯೋಗಾತ್ಮಕವಾಗಿ ಅಣಬೆ ಬೇಸಾಯವನ್ನು ಮಾಡಿಸಲಾಯಿತು.

ವೇದಿಕೆಯ ಮೇಲೆ ಐಕ್ಯೂಎಸಿ ಸಂಚಾಲಕಿ ಪ್ರಿಯ, ವಿದ್ಯಾರ್ಥಿ ಕ್ಷೇಮ ಪಾಲನ ಸಮಿತಿ ಸಂಚಾಲಕ ನಾಗರಾಜು ಇದ್ದರು. ಕಾಲೇಜಿನ ಉಪನ್ಯಾಸಕರಾದ ನಿರ್ಮಿತ, ಬೋಜಮ್ಮ, ಸುನಿಲ್ ಕುಮಾರ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.