ಮಡಿಕೇರಿ, ಏ. ೨೪: ದಲಿತ ಸಾಹಿತ್ಯ ಪರಿಷತ್ತು, ಕೊಡಗು ವಿಶ್ವವಿದ್ಯಾಲಯ, ಮಾನವ ಬಂಧುತ್ವ ವೇದಿಕೆ, ಸಹಮತ ವೇದಿಕೆ, ಅಹಿಂದ ಒಕ್ಕೂಟ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೪ನೇ ಜನ್ಮದಿನದ ಅಂಗವಾಗಿ ಸಮಗ್ರ - ಸಮತೆಯೆಡೆಗೆ ಸಾಹಿತ್ಯ ಎಂಬ ವಿಚಾರವಾಗಿ ರಾಷ್ಟಿçÃಯ ಸಂಕಿರಣ ಏರ್ಪಡಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅಹಿಂದ ಒಕ್ಕೂಟದ ಪ್ರಮುಖರಾದ ಟಿ.ಪಿ. ರಮೇಶ್ ಅವರು, ಬುದ್ಧ, ಬಸವ, ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ತತ್ವ ಸಿದ್ಧಾಂತದAತೆ ಸಮಾನತೆಯ ಆಶಯದೊಂದಿಗೆ ಈ ಒಂದು ರಾಷ್ಟಿçÃಯ ವಿಚಾರ ಸಂಕಿರಣವನ್ನು ಏರ್ಪಡಿಸಲಾ ಗಿದೆ. ತಾ. ೨೮ ರಂದು ಚಿಕ್ಕ ಅಳುವಾರದಲ್ಲಿರುವ ಕೊಡಗು ವಿಶ್ವವಿದ್ಯಾಲಯದ ಹಾರಂಗಿ ಸಭಾಭವನದಲ್ಲಿ ಬೆಳಿಗ್ಗೆ ೧೦ ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಉದ್ಘಾಟಿಸುವರು.
ಕೊಡಗು ವಿ.ವಿ. ಕುಲಪತಿ ಡಾ. ಅಶೋಕ ಸಂಗಪ್ಪ ಆಲೂರ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಡಾ. ಮಂತರ್ಗೌಡ, ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ. ಎ.ಬಿ. ರಾಮಚಂದ್ರಪ್ಪ, ಕೊಡಗು ವಿ.ವಿ. ಕುಲ ಸಚಿವ ಡಾ. ಎಂ. ಸುರೇಶ್ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ದಲಿತ ಸಾಹಿತ್ಯ ಪರಿಷತ್ತು ಅಧ್ಯಕ್ಷ ಅರ್ಜುನ್ ಮೌರ್ಯ ಅವರು ಬರೆದ ೯ನೇ ಕೃತಿ ಬೆಂದೊಡಲ ಕುಣಿತವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.
ವಿಚಾರ ಸಂಕಿರಣ : ಅಂದು ಬೆಳಿಗ್ಗೆ ೧೧ ಗಂಟೆಗೆ ವಿಚಾರ ಸಂಕಿರಣದಲ್ಲಿ ಸಮಗ್ರ - ಸಮತೆಯಡೆಗೆ ಸಾಹಿತ್ಯ ಎಂಬ ವಿಚಾರವಾಗಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ವಿಚಾರ ಮಂಡನೆ ಮಾಡುವರು. ಡಾ. ಎ.ಬಿ. ರಾಮಚಂದ್ರಪ್ಪ ಅಧ್ಯಕ್ಷತೆ ಯಲ್ಲಿ ನಡೆಯಲಿರುವ ಗೋಷ್ಠಿಯಲ್ಲಿ ಅತಿಥಿಗಳಾಗಿ ಶಾಸಕ ಡಾ. ಮಂತರ್ಗೌಡ ಉಪಸ್ಥಿತರಿರುವರು.
ಮಧ್ಯಾಹ್ನ ೧೨.೩೦ ಗಂಟೆಗೆ ನಡೆಯಲಿರುವ ಎರಡನೇ ಗೋಷ್ಠಿಯಲ್ಲಿ ಕೊಡಗಿನಲ್ಲಿ ಅಹಿಂದ ಹೋರಾಟದ ನೆಲೆಗಟ್ಟುಗಳು ಎಂಬ ವಿಚಾರವಾಗಿ ಅಹಿಂದ ಒಕ್ಕೂಟದ ಟಿ.ಪಿ. ರಮೇಶ್ ವಿಚಾರ ಮಂಡನೆ ಮಾಡಲಿದ್ದಾರೆ. ಚಾಮರಾಜನಗರ ವಿ.ವಿ. ಕುಲಸಚಿವ ಡಾ. ಎಂ.ಆರ್. ಗಂಗಾಧರ ಅಧ್ಯಕ್ಷತೆ ಯಲ್ಲಿ ನಡೆಯಲಿರುವ ಗೋಷ್ಠಿಯಲ್ಲಿ ಅತಿಥಿಗಳಾಗಿ ಶಾಸಕ ಎ.ಎಸ್. ಪೊನ್ನಣ್ಣ ಭಾಗವಹಿಸಲಿದ್ದಾರೆ ಎಂದು ರಮೇಶ್ ತಿಳಿಸಿದರು.
ಸಮಾರೋಪ : ಮಧ್ಯಾಹ್ನ ೧.೩೦ ಗಂಟೆಗೆ ನಡೆಯಲಿರುವ ಸಮಾರೋಪ ಅಧಿವೇಶನದ ಅಧ್ಯಕ್ಷತೆಯನ್ನು ಡಾ. ಅಂಶೋಕ ಸಂಗಪ್ಪ ಆಲೂರ ವಹಿಸಲಿದ್ದು, ಅತಿಥಿಗಳಾಗಿ ಸಂಸದ ಯದುವೀರ ಒಡೆಯರ್, ಡಾ.ಎಂ.ಆರ್. ಗಂಗಾಧರ, ವೀರಾಜಪೇಟೆ ತಾಲೂಕು ಕಸಾಪ ಅಧ್ಯಕ್ಷ ರಾಜೇಶ್ ಪದ್ಮನಾಭ, ದಲಿತ ಚಳವಳಿ ಹಿರಿಯ ನಾಯಕ ಜಯಪ್ಪ ಹಾನಗಲ್, ಡಾ.ಎಂ. ಸುರೇಶ್, ಅರ್ಜುನ್ ಮೌರ್ಯ, ಜೆ.ಎಲ್. ಜನಾರ್ಧನ, ಟಿ.ಎಂ. ಮುದ್ದಯ್ಯ ಉಪಸ್ಥಿತರಿರುವರು. ಸಾಮಾಜಿಕ ಚಿಂತಕ ವಿ.ಪಿ. ಶಶಿಧರ್ ಸಮಾರೋಪ ಭಾಷಣ ಮಾಡ ಲಿದ್ದಾರೆ ಎಂದು ರಮೇಶ್ ಮಾಹಿತಿ ನೀಡಿದರು.
ಈ ವೇದಿಕೆ ಮೂಲಕ ಶಾಲಾ ಪಠ್ಯದಲ್ಲಿ ಡಾ. ಅಂಬೇಡ್ಕರ್ ಅವರ ಕುರಿತಾಗಿ ಪಠ್ಯ ಸೇರ್ಪಡೆ, ಅಂಬೇಡ್ಕರ್ ಅಧ್ಯಯನ ಪೀಠ ಸ್ಥಾಪನೆ ಮಾಡುವಂತೆ ಆಗ್ರಹಿಸಿ ಸರಕಾರಕ್ಕೆ ಮನವಿ ಸಲ್ಲಿಸಲಾಗವುದೆಂದು ರಮೇಶ್ ಹೇಳಿದರು. ಗೋಷ್ಠಿಯಲ್ಲಿ ಅಹಿಂದ ಪ್ರಮುಖರಾದ ಕೆ.ಟಿ. ಬೇಬಿಮ್ಯಾಥ್ಯೂ, ಟಿ.ಎಂ. ಮುದ್ದಯ್ಯ, ಮಾನವ ಬಂಧುತ್ವ ವೇದಿಕೆಯ ಪಿ.ಕೆ. ಅಬ್ದುಲ್ ರೆಹಮಾನ್ ಇದ್ದರು.