ಸೋಮವಾರಪೇಟೆ, ಏ. ೨೩: ಕೊಡಗು, ದಕ್ಷಿಣ ಕನ್ನಡ, ಮೈಸೂರು ಮತ್ತು ಚಾಮರಾಜ ನಗರ ಜಿಲ್ಲೆಯನ್ನು ಒಳಗೊಂಡಿರುವ ರೋಟರಿ ವಲಯದಲ್ಲಿ ಸಮಾಜಮುಖಿ ಕಾರ್ಯಗಳಿಗೆ ಸುಮಾರು ರೂ. ೨೦ ಕೋಟಿ ವೆಚ್ಚದ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಜಿಲ್ಲಾ ರಾಜ್ಯಪಾಲ ವಿಕ್ರಮ್‌ದತ್ತ ಹೇಳಿದರು.
ಸೋಮವಾರಪೇಟೆÀ ರೋಟರಿ ಸಂಸ್ಥೆಗೆ ಅಧಿಕೃತ ಭೇಟಿ ನೀಡಿದ ಸಂದರ್ಭ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ೧೨೦ ವರ್ಷಗಳ ಇತಿಹಾಸ ಹೊಂದಿರುವ ರೋಟರಿ ಸಂಸ್ಥೆಯು ಇಡೀ ವಿಶ್ವದಾದ್ಯಂತ ಸಮಾಜಮುಖಿ ಸೇವೆಯ ಮೂಲಕವೇ ಜನಮಾನಸದಲ್ಲಿ ಗುರುತಿಸಿಕೊಂಡಿದೆ. ೨೦೦ ದೇಶದಲ್ಲಿ ೩೫,೦೦೦ ಕ್ಲಬ್ ಹೊಂದಿರುವ ರೋಟರಿ ಸಂಸ್ಥೆ ದೇಶದಲ್ಲಿ ಸುಮಾರು ೩೫ ಕೋಟಿ ಸಮಾಜಮುಖಿ ಕಾರ್ಯಕ್ರಮಗಳನ್ನು ನೀಡಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ರೋಟರಿ ಸಂಸ್ಥೆಯಿAದ ಸಂಧ್ಯಾ ಸುರಕ್ಷಾ, ಅಂಗನವಾಡಿ ಪುನಶ್ಚೇತನ ಕಾರ್ಯಕ್ರಮಗಳು ಮತ್ತು ಆರೋಗ್ಯ ಸುರಕ್ಷಾ ಯೋಜನೆಗೆ ಸಂಬAಧಿಸಿದAತೆ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಹಿಂದೆ ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ನಡೆದ ಸಂದರ್ಭ ನಿರಾಶ್ರಿತರಿಗೆ ಉಚಿತ ಮನೆಗಳು, ಆಸ್ಪತ್ರೆಗಳಿಗೆ ವೈದ್ಯಕೀಯ ಸಲಕರಣೆಗಳು, ಆಕ್ಸಿಜನ್ ಯಂತ್ರ ಸೇರಿದಂತೆ ಮತ್ತಿತರ ವಸ್ತುಗಳನ್ನು ನೀಡುವ ಮೂಲಕ ಮಾನವೀಯತೆಯ ಸೇವೆ ಮಾಡಲಾಗಿದೆ ಎಂದರು.
ಹೆಚ್.ಡಿ. ಕೋಟೆ ತಾಲೂಕಿನ ಸರಗೂರಿನಲ್ಲಿ ವಿವೇಕಾನಂದ ಮೂವ್‌ಮೆಂಟ್ ಸಂಸ್ಥೆಯ ಸಹಯೋಗದೊಂದಿಗೆ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತವಾಗಿ ಕಣ್ಣಿನ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಮಗುವು ತಾಯಿಯ ಎದೆ ಹಾಲಿನಿಂದ ವಂಚಿತರಾಗ ಬಾರದೆಂಬ ಉದ್ದೇಶದಿಂದ ಅಮೃತಧಾರೆ ಎಂಬ ಹ್ಯೂಮನ್ ಮಿಲ್ಕ್ ಬ್ಯಾಂಕ್ ಸ್ಥಾಪಿಸಿ ತಾಯಂದಿರ ಎದೆಹಾಲು ಸಂಸ್ಕರಿಸುವ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಆಸಕ್ತ ತಾಯಂದಿರು ನೋಂದಣಿ ಮಾಡಿಸಿ ಮಹಾನ್ ಸೇವೆಯ ಮೂಲಕ ದಾರಿದೀಪವಾಗಿದ್ದಾರೆ. ನಿಶಕ್ತಿಯಿಂದ ಬಳಲುವ ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ ಎಂದು ಸಹಾಯಕ ರಾಜ್ಯಪಾಲ ಡಾ. ಹರಿ ಎ. ಶೆಟ್ಟಿ ಹೇಳಿದರು.
ಗೋಷ್ಠಿಯಲ್ಲಿ ವಲಯ ಸೇನಾನಿ ಎಂ.ಎA. ಪ್ರಕಾಶ್ ಕುಮಾರ್, ರೋಟರಿ ಅಧ್ಯಕ್ಷ ಜೆ.ಕೆ. ಪೊನ್ನಪ್ಪ, ಕಾರ್ಯದರ್ಶಿ ಕೆ.ಡಿ. ಬಿದ್ದಪ್ಪ, ನಿಯೋಜಿತ ಅಧ್ಯಕ್ಷೆ ವೀಣಾ ಮನೋಹರ್ ಉಪಸ್ಥಿತರಿದ್ದರು.