ಕುಶಾಲನಗರ, ಏ. ೨೩: ಕುಶಾಲನಗರದಿಂದ ಹತ್ತು ದಿನಗಳ ಹಿಂದೆ ನಾಪತ್ತೆಯಾಗಿದ್ದ ತರಕಾರಿ ವ್ಯಾಪಾರಿ ಕೆ.ಆರ್. ಮಂಜುನಾಥ ಇದೀಗ ಹಿಂತಿರುಗಿ ಮನೆಗೆ ಬಂದಿದ್ದಾರೆ.

ಪಟ್ಟಣದ ರಾಧಾಕೃಷ್ಣ ಬಡಾವಣೆಯ ನಿವಾಸಿ ತರಕಾರಿ ವ್ಯಾಪಾರಿ ಮಂಜುನಾಥ ನಾಪತ್ತೆಯಾಗಿದ್ದಾರೆ ಎಂದು ಆತನ ಪತ್ನಿ ಸರಿತಾ ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನಲೆಯಲ್ಲಿ ಪೊಲೀಸರು ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು.

ಹುಣಸೂರಿಗೆ ತೆರಳಿದ ತನ್ನ ಪತಿ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದು ಇದೀಗ ನಾಪತ್ತೆಯಾಗಿದ್ದ ಮಂಜುನಾಥ ಕುಶಾಲನಗರಕ್ಕೆ ಹಿಂತಿರುಗಿದ್ದಾರೆ.

ತಾನು ಕೆಲ ವಿಷಯದಲ್ಲಿ ಮನನೊಂದು ಊರು ಬಿಟ್ಟು ಹೋಗಿರುವುದಾಗಿ ತಿಳಿಸಿರುವ ಮಂಜುನಾಥ ಹುಬ್ಬಳ್ಳಿಯಲ್ಲಿ ಮಠ ಒಂದರಲ್ಲಿ ಕೆಲವು ದಿನಗಳ ಕಾಲ ತಂಗಿ ಬಂದಿರುವುದಾಗಿ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.