ಪೊನ್ನಂಪೇಟೆ, ಏ. ೨೨: ಪೊನ್ನಂಪೇಟೆ ಕಿಗ್ಗಟ್‌ನಾಡ್ ಹಿರಿಯ ನಾಗರಿಕ ವೇದಿಕೆಯ ವತಿಯಿಂದ ವೈಜ್ಞಾನಿಕ ಕೃಷಿ ವಿಭಾಗದಲ್ಲಿ ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿ ಪಡೆದ ಮಾಣಿಪಂಡ ಅಮಿತಾ ಗಣಪತಿ ಅವರನ್ನು ಸನ್ಮಾನಿಸಲಾಯಿತು.
ಪೊನ್ನಂಪೇಟೆ ಇಗ್ಗುತ್ತಪ್ಪ ಕೊಡವ ಸಹಕಾರ ಸಂಘದ ಸಭಾಂಗಣದಲ್ಲಿ ಹಿರಿಯ ನಾಗರೀಕ ವೇದಿಕೆಯ ಸ್ಥಾಪಕ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅಮಿತಾ ಗಣಪತಿ, ವೈಜ್ಞಾನಿಕ ಕೃಷಿಯ ಕಡೆಗೆ ಹೆಚ್ಚು ಒಲವು ತೋರಿ ಇಳುವರಿ ಮತ್ತು ಆದಾಯವನ್ನು ಪಡೆದುಕೊಳ್ಳಲು ರೈತರು ಮುಂದಾಗಬೇಕು ಎಂದರು.
ಪೊನ್ನAಪೇಟೆ ಅರಣ್ಯ ಮಹಾ ವಿಶ್ವವಿದ್ಯಾಲಯದ ಮಾಜಿ ಮುಖ್ಯಸ್ಥ ಡಾ. ಚೆಪ್ಪುಡಿರ ಜೆ. ಕುಶಾಲಪ್ಪ ಮಾತನಾಡಿ, ಮಹಿಳೆಯರು ಕೃಷಿಯಲ್ಲಿ ಹೆಚ್ಚು ತೊಡಗಿಸಿ ಕೊಂಡಾಗ ಈ ದೇಶದ ಮೂಲ ಕೃಷಿ ಪದ್ಧತಿ ಉಳಿದುಕೊಳ್ಳಲು ಸಾಧ್ಯ ವಾಗುತ್ತದೆ ಎಂದರು.
ಗೋಣಿಕೊಪ್ಪಲು ಕಾವೇರಿ ಕಾಲೇಜು ನಿವೃತ್ತ ಪ್ರಾಂಶುಪಾಲ ಎಂ.ಕೆ. ಮೊಣ್ಣಪ್ಪ ಮಾತನಾಡಿ, ಶಿಕ್ಷಣ ಸಾವಿಲ್ಲದ ಚಿರಂಜೀವಿ, ಶಿಕ್ಷಣವನ್ನು ಹೆಚ್ಚಾಗಿ ಮಹಿಳೆಯರು ಪಡೆದು ಕೊಂಡಾಗ ಈ ದೇಶ ಸುಭಿಕ್ಷೆ ಯಾಗುತ್ತದೆ ಎಂದು ಹೇಳಿದರು.
ಕಾಟಿಮಾಡ ಜಿಮ್ಮಿ ಅಣ್ಣಯ್ಯ ಮಾತನಾಡಿ, ತಾಯಿ ಮೊದಲ ಗುರು ಎಂಬ ನಾಣ್ಣುಡಿಯಂತೆ ಮನೆಯ ಪ್ರತಿಯೊಬ್ಬ ಮಹಿಳೆಯು ಶಿಕ್ಷಣ ವಂತಳಾದಾಗ ಆ ಮನೆಯಲ್ಲಿ ಅಜ್ಞಾನ ತೊಲಗಿ ವಿಜ್ಞಾನ ಮತ್ತು ಜ್ಞಾನ ನೆಲೆಸುತ್ತದೆ ಎಂದು ಹೇಳಿದರು. ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಕೊಟ್ಟುಕತ್ತಿರ ಸೋಮಣ್ಣ, ಉಪಾಧ್ಯಕ್ಷ ಗಣೇಶ ಗಣಪತಿ, ಪ್ರಧಾನ ಪೋಷಕ ಚೆಕ್ಕೇರ ಸನ್ನಿ ಸುಬ್ಬಯ್ಯ, ಖಜಾಂಚಿ ಐ.ಕೆ ಮಂದಣ್ಣ, ಸದಸ್ಯರುಗಳಾದ ಚಿಪ್ಪಿ ಕಾರ್ಯಪ್ಪ, ಪೊನ್ನಪ್ಪ, ಎನ್. ಸುಬ್ರಮಣಿ, ಎಂ.ಎಸ್. ಕುಶಾಲಪ್ಪ, ಕಾಮಿಣಿ, ಎಂ. ಪಾರ್ವತಿ ಜೋಯಪ್ಪ, ಹೆಚ್. ಬೋಜಮ್ಮ, ರಾಮಕೃಷ್ಣ, ಲವ್ಲಿ ಸೋಮಯ್ಯ, ಅಜ್ಜಿಕಟ್ಟೀರ ಭೀಮಯ್ಯ, ಸಿ. ನಾಣಿ ನಾಣಯ್ಯ ಇದ್ದರು.