ಮಡಿಕೇರಿ, ಏ. ೨೨: ನಗರದ ಕನ್ನಂಡಬಾಣೆಯಲ್ಲಿರುವ ರಾಜ್ಯದ ಏಕೈಕ ಶ್ರೀ ದೃಷ್ಟಿಗಣಪತಿ ದೇವಾಲಯ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಅಂಗವಾಗಿ ತಾ. ೨೩ ರಂದು (ಇಂದು) ಧಾರ್ಮಿಕ ಕಾರ್ಯ ನಡೆಯಲಿದೆ.

ತಾ. ೨೨ ರಂದು ವಿವಿಧ ಪೂಜೆಗಳು ನಡೆದಿದ್ದು, ತಾ. ೨೩ ರಂದು (ಇಂದು) ಬೆಳಿಗ್ಗೆ ೭ ಗಂಟೆಯಿAದ ಸಾಮೂಹಿಕ ಗಣಹೋಮ, ಆಶ್ಲೇಷಬಲಿ, ಕಲಶ ಪೂಜೆ, ನಾಗತಂಬಿಲ, ಕಲಶಾಭಿಷೇಕ, ಮಹಾಪೂಜೆ, ನಾಗದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.