ಕೂಡಿಗೆ: ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ನವಗ್ರಾಮದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರದ ವತಿಯಿಂದ ರೂ. ೫೦ ಲಕ್ಷ ಮಂಜೂರುಗೊಳಿಸಲಾಗಿದೆ ಎಂದು ಶಾಸಕ ಡಾ. ಮಂತರ್ ಗೌಡ ಕೂಡ್ಲೂರು ಗ್ರಾಮದಲ್ಲಿ ತಿಳಿಸಿದರು.

ಕುಶಾಲನಗರ ತಾಲೂಕಿನ ಕೂಡ್ಲೂರು ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ಬಸವೇಶ್ವರ ಯುವಕ ಸಂಘದ ವತಿಯಿಂದ ಏರ್ಪಡಿಸಿದ್ದ ಮೂರನೇ ವರ್ಷದ ಹೊನಲು ಬೆಳಕಿನ ಕಬಡ್ಡಿ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಕೂಡ್ಲೂರು ನವಗ್ರಾಮದ ಗ್ರಾಮಸ್ಥರ ಮನವಿಗೆ ಸ್ಪಂದಿಸಿರುವ ಶಾಸಕರು, ನವಗ್ರಾಮದಲ್ಲಿ ಸೂಕ್ತ ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ಗ್ರಾಮದ ಮೂಲ ಸೌಕರ್ಯಗಳ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗಿದೆ. ಇದು ಈ ಗ್ರಾಮಸ್ಥರಿಗೆ ಸಂತಸದ ಸಂಗತಿಯಾಗಿದೆ ಎಂದು ವಿ.ಪಿ. ಶಶಿಧರ್ ಪ್ರತಿಕ್ರಿಯೆ ನೀಡಿದರು. ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮಕುಮಾರ್, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಈರಪ್ಪ, ಯುವಕ ಸಂಘದ ಅಧ್ಯಕ್ಷ ಕೆ.ವಿ. ನಿಶಾಂತ್ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.ಸೋಮವಾರಪೇಟೆ: ಗ್ರಾಮೀಣ ಮಹಿಳೆಯರ ಜೀವನ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಪ್ರಾರಂಭಿಸಲಾದ ಟಿ.ಪಿ. ಕೆಫೆಗೆ ಶಾಸಕ ಡಾ. ಮಂತರ್ ಗೌಡ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್‌ಆರ್‌ಎಲ್‌ಎಮ್) ಗ್ರಾಮೀಣ ಬಡ ಮಹಿಳೆಯರ ಜೀವನ ಗುಣಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ವಿಶೇಷವಾಗಿ ಸ್ವಸಹಾಯ ಗುಂಪುಗಳ ಬಲವರ್ಧನೆಯ ಮೂಲಕ ಬಡತನವನ್ನು ನೀಗಿಸುವ ವಿಶೇಷ ಪ್ರಯತ್ನವಾಗಿದೆ. ಇದರಿಂದ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಕೂಡ ಸಾಧ್ಯವೆಂದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಮತ್ತಿತರರು ಇದ್ದರು.ನಾಪೋಕ್ಲು: ಹಳೆ ತಾಲೂಕಿನ ಅಂಗನವಾಡಿ ಶಿಕ್ಷಕಿಯಾದ ಪೊರುಕೊಂಡ ಭಾಗ್ಯವತಿ (ಕಾಂತಿ) ಅವರನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆಯ ಶಾಸಕ ಎ.ಎಸ್. ಪೊನ್ನಣ್ಣ ಸನ್ಮಾನಿಸಿದರು.

ನಾಪೋಕ್ಲು ಭಾಗಕ್ಕೆ ಭೇಟಿ ನೀಡಿದ ಶಾಸಕರು, ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕಿಯನ್ನು ಸನ್ಮಾನಿಸಿ, ತಮ್ಮ ವೃತ್ತಿಯಲ್ಲಿ ಮತ್ತಷ್ಟು ಯಶಸ್ಸು ಕಾಣುವಂತಾಗಲಿ ಎಂದರು. ಭಾಗ್ಯವತಿ ಅವರಿಗೆ ಇತ್ತೀಚೆಗೆ ರಾಜ್ಯ ಸರಕಾರದ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿತ್ತು. ಈ ಸಂದರ್ಭ ನಾಪೋಕ್ಲು ಬ್ಲಾಕ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ನಾಪೋಕ್ಲು ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಕೆಡಿಪಿ ಸದಸ್ಯರಾದ ಎಂ.ಹೆಚ್. ಅಬ್ದುಲ್ ರೆಹಮಾನ್, ಗ್ರಾಮ ಪಂಚಾಯಿತಿ ಸದಸ್ಯೆ ಕುಲ್ಲೇಟಿರ ಹೇಮಾ ಅರುಣ್, ನಾಯಕಂಡ ಮುತ್ತಪ್ಪ, ಅಪ್ಪಚೆಟ್ಟೋಳಂಡ ಮಿಥುನ್ ಮಾಚಯ್ಯ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.ವೀರಾಜಪೇಟೆ: ವೀರಾಜಪೇಟೆ ತಾಲೂಕು ಮಾಕುಟ್ಟದ ಶ್ರೀ ಕಾಕ್ಕಾತೋಡು ದೇವಿ ಕ್ಷೇತ್ರಕ್ಕೆ ಶಾಸಕ ಎ.ಎಸ್. ಪೊನ್ನಣ್ಣ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯವರು ಶಾಸಕರಿಗೆ ಸನ್ಮಾನ ಮಾಡಿದರು.ನಾಪೋಕ್ಲು: ಕಕ್ಕಬ್ಬೆ ಗ್ರಾಮದ ಜನತೆಯ ಪ್ರಮುಖ ಬೇಡಿಕೆಯಾಗಿದ್ದ ಉತ್ತಮ ರಸ್ತೆಯ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು ಎಂದು ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದರು.

ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ರಸ್ತೆ ಕಾಮಗಾರಿಯ ಆರಂಭಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುವುದು. ಎಲ್ಲವನ್ನೂ ಏಕಕಾಲದಲ್ಲಿ ನಡೆಸಲು ಅಸಾಧ್ಯ. ಅಭಿವೃದ್ಧಿ ಕಾರ್ಯಗಳಿಗೆ ಜನರ ಸಹಕಾರ ಮುಖ್ಯ ಎಂದರು.

ಕಕ್ಕಬ್ಬೆ ಗ್ರಾಮದ ಹಲವು ರಸ್ತೆಗಳು ಹಿಂದಿನಿAದಲೂ ಅಭಿವೃದ್ಧಿ ಕಾಣದೆ ಹಾಗೆಯೇ ಉಳಿದಿದೆ. ಶಾಸಕರ ಅನುದಾನದಲ್ಲಿ ಈ ರಸ್ತೆಗಳ ಅಭಿವೃದ್ಧಿಗಾಗಿ ಹಣವನ್ನು ಮೀಸಲಾಗಿರಿಸಿದೆ. ಮುಖ್ಯಮಂತ್ರಿಗಳ ನಿಧಿಯಿಂದ ವೈಕೋಲ್ ರಸ್ತೆ, ಪಾಡೆಯಂಡ, ನಾಟೋಳಂಡ, ಮಾದಂಡ ಕುಟುಂಬಸ್ಥರ ರಸ್ತೆಗೆ ತಲಾ ರೂ. ೧೫ ಲಕ್ಷದಂತೆ ಒಟ್ಟು ರೂ. ೪೫ ಲಕ್ಷ ರೂ.ಗಳು ಹಾಗೂ ಎನ್‌ಡಿಆರ್‌ಎಫ್‌ನಿಂದ ಮಾರ್ಚಂಡ ಹಾಗೂ ಬಾಲ್‌ಮೊಟ್ಟೆ ರಸ್ತೆಗೆ ಒಟ್ಟು ರೂ. ೨೦ ಲಕ್ಷಗಳು ಈ ಕಾಮಗಾರಿ ಗಳಿಗೆ ಬಳಸಲಾಗಿದೆ ಎಂದರು.

ಉತ್ತಮ ರಸ್ತೆಯ ಅಭಿವೃದ್ಧಿಗೆ ಶಾಸಕರು ಭೂಮಿಪೂಜೆ ನೆರವೇರಿಸುವುದರೊಂದಿಗೆ ಗ್ರಾಮಸ್ಥರ ಹಲವು ಕಾಲದ ಬೇಡಿಕೆ ಈಡೇರುವಂತಾಗಿದೆ ಎಂದು ಭೂಮಿಪೂಜೆ ಬಳಿಕ ಶಾಸಕರನ್ನು ಗ್ರಾಮಸ್ಥರು ಅಭಿನಂದಿಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ರಜಾಕ್, ಬಶೀರ್, ಸಂಪನ್ ಅಯ್ಯಪ್ಪ, ಪ್ರಮುಖರಾದ ಉಸ್ಮಾನ್ ಹಾಜಿ, ಕರ್ತಂಡ ಶೈಲಾ ಕುಟ್ಟಪ್ಪ, ಕೆಡಿಪಿ ಮೆಂಬರ್ ಬಾಚಮಂಡ ಲವ ಚಿನ್ನಪ್ಪ, ಉದಿಯಂಡ ಸುಭಾಷ್, ಬಾಚಮಂಡ ಭರತ್, ನಾಟೋಳಂಡ ಶಂಬು, ಮಾದಂಡ ಉಮೇಶ್, ಪೊನ್ನೋಳ್ತಂಡ ರಘು ಚಿನ್ನಪ್ಪ, ನಾಟೋಳಂಡ ನಂಜುAಡ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.