ನಾಪೋಕ್ಲು, ಏ. ೧೨: ಸಮೀಪದ ಕಲ್ಲುಮೊಟ್ಟೆಯ ಕೆಎಂಸಿಸಿ ಕ್ರೀಡಾ ಕ್ಲಬ್ ಆಶ್ರಯದಲ್ಲಿ ಎರಡನೇ ವರ್ಷದ ಕಲ್ಲುಮೊಟ್ಟೆ ಪ್ರೀಮಿಯರ್ ಲೀಗ್ ಕಾಲ್ಚೆಂಡು ಕ್ರೀಡಾಕೂಟವನ್ನು ಹೊನಲು ಬೆಳಕಿನ ಕ್ರೀಡಾಕೂಟವಾಗಿ ಗ್ರಾö್ಯಂಡ್ ಫುಟ್ಬಾಲ್ ಕಾರ್ನಿವಲ್ ಎಂಬ ಟೈಟಲ್‌ನೊಂದಿಗೆ ನಡೆಸಲಾಯಿತು.
ಚೆರಿಯಪರಂಬು ಕ್ರೀಡಾಂಗಣದಲ್ಲಿ ಆಯೋಜಿಸಲಾದ ಕ್ರೀಡಾಕೂಟವನ್ನು ಕಲ್ಲುಮೋಟ್ಟೆ ಜಮಾಅತ್ ಅಧ್ಯಕ್ಷ ಮುಹಮ್ಮದ್ ಪುಲಿಯಂಡ, ಗೌರವ ಅಧ್ಯಕ್ಷ ಪುಲಿಯಂಡ ಮೊಯ್ದು ಹಾಗೂ ಸೀನ ಕಲ್ಲುಮೊಟ್ಟೆ ಕೆಎಂಸಿಸಿ ಪದಾಧಿಕಾರಿಗಳು ಉದ್ಘಾಟಿಸಿದರು.
ಉದ್ಘಾಟನಾ ಪಂದ್ಯ ಡ್ರೀಮ್ಸ್ ಚೇಸರ್ಸ್ ಮತ್ತು ಸಿರಾಜ್ ಫ್ರೆಂಡ್ಸ್ ನಡುವೆ ನಡೆದರೆ ಅಂತಿಮ ಪಂದ್ಯ ಟೀಮ್ ಆಸ್ಟನ್ ವಿಲ್ಲಾ ಮತ್ತು ಸಿರಾಜ್ ಫ್ರೆಂಡ್ಸ್ ತಂಡಗಳ ನಡುವೆ ನಡೆಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸೇವ್ ದ ಡ್ರೀಮ್ಸ್ ಚಾರಿಟಿಯ ಜಾಬಿರ್ ನಿಜಾಮಿ ಚೆರಿಯಪರಂಬು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನಾಪೋಕ್ಲು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್ ಕೆ.ಎ., ಮಡಿಕೇರಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹಂಸ ಕೆ.ಎ., ಹನೀಫ್ ಕೊಟ್ಟಮುಡಿ, ಮುಹಮ್ಮದ್ ಪುಲಿಯಂಡ, ಮಿರ್ಶಾದ್ ಪರವಂಡ, ಸಿರಾಜ್ ಪರವಂಡ, ರಫೀಕ್ ಅರೆಯಂಡ ಚಾಂಪಿಯನ್ಸ್ ಟ್ರೋಫಿ ನೀಡಿ ಶುಭ ಹಾರೈಸಿದರು. ಈ ಸಂದರ್ಭ ಸಿಡಿಮದ್ದಿನ ಪ್ರದರ್ಶನ ಗಮನ ಸೆಳೆಯಿತು.
ಚಾಂಪಿಯನ್ಸ್ ತಂಡವಾಗಿ ಬಷೀರ್ ಹಾಗೂ ಶೌಕತ್ ದುಲ್ಕರ್ ಮಾಲೀಕತ್ವದ ಟೀಮ್ ಆಸ್ಟನ್ ವಿಲ್ಲಾ ಹೊರಹೊಮ್ಮಿತು. ಸಿರಾಜ್ ಫ್ರೆಂಡ್ಸ್ ತಂಡ ರನ್ನರ್ ಅಪ್ ಪ್ರಶಸ್ತಿ ಗಳಿಸಿತು. ಟೂರ್ನಿಯ ಆಕರ್ಷಣೆ ಪ್ಲೇಯರ್ ಆಫ್ ದಿ ಸೀರೀಸ್‌ಗೆ ಪ್ರಶಸ್ತಿಯಾಗಿ ಸೈಕಲ್ ನೀಡಲಾಯಿತು.
ಪ್ಲೇಯರ್ ಆಫ್ ದ ಸೀರಿಸ್ ಸಿರಾಜ್ ತಂಡದ ಸುಫಿಯಾನ್ ಹೊರಹೊಮ್ಮಿದರು. ಕ್ರೀಡಾಕೂಟದಲ್ಲಿ ಕಲ್ಲುಮೊಟ್ಟೆಯಿಂದ ಬೆಂಗಳೂರಿನ ಪ್ರತಿಷ್ಠಿತ ಸ್ಪೋರ್ಟ್ಸ್ ಅಕಾಡೆಮಿಗೆ ಆಯ್ಕೆಯಾಗಿ ಜಮ್ಮು-ಕಾಶ್ಮೀರದಲ್ಲಿ ನಡೆದ ೧೫ ವರ್ಷದೊಳಗಿನ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಸುಫಿಯಾನ್ ಹಾಗೂ ಸ್ಪೋರ್ಟ್ಸ್ ಅಕಾಡೆಮಿಯ ಕಿರಿಯರ ಕಾಲ್ಚೆಂಡು ತಂಡವನ್ನು ಪ್ರತಿನಿಧಿಸುತ್ತಿರುವ ಫಾಸಿಲ್ ಭಾಗವಹಿಸಿದ್ದು ವಿಶೇಷವಾಗಿತ್ತು.ಸಿರಾಜ್ ತಂಡದ ಸುಫಿಯಾನ್ ಹೊರಹೊಮ್ಮಿದರು. ಕ್ರೀಡಾಕೂಟದಲ್ಲಿ ಕಲ್ಲುಮೊಟ್ಟೆಯಿಂದ ಬೆಂಗಳೂರಿನ ಪ್ರತಿಷ್ಠಿತ ಸ್ಪೋರ್ಟ್ಸ್ ಅಕಾಡೆಮಿಗೆ ಆಯ್ಕೆಯಾಗಿ ಜಮ್ಮು-ಕಾಶ್ಮೀರದಲ್ಲಿ ನಡೆದ ೧೫ ವರ್ಷದೊಳಗಿನ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಸುಫಿಯಾನ್ ಹಾಗೂ ಸ್ಪೋರ್ಟ್ಸ್ ಅಕಾಡೆಮಿಯ ಕಿರಿಯರ ಕಾಲ್ಚೆಂಡು ತಂಡವನ್ನು ಪ್ರತಿನಿಧಿಸುತ್ತಿರುವ ಫಾಸಿಲ್ ಭಾಗವಹಿಸಿದ್ದು ವಿಶೇಷವಾಗಿತ್ತು.