ಮಡಿಕೇರಿ, ಏ. ೧೨ : ಕೌಟುಂಬಿಕ ಹಾಕಿ ಉತ್ಸವ ಕೆಲವಾರು ವಿಶೇಷತೆಗಳ ನಡುವೆ ಜರುಗುತ್ತದೆ. ಅಂತೆಯೇ ಇಂದು ಈ ಹಿಂದೆ ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ಆಯೋಜಿಸಿ ಯಶಸ್ಸು ಕಂಡಿರುವ ನಾಲ್ಕು ಕುಟುಂಬಗಳ ನಡುವೆಯೇ ಈ ಬಾರಿ ಪಂದ್ಯ ನಡೆಯುವಂತಾಗಿತ್ತು. ಹಿಂದೆ ಹಾಕಿ ಪಂದ್ಯಾಟ ಆಯೋಜಿಸಿದ್ದ ಶಾಂತೆಯAಡ ಹಾಗೂ ಅಪ್ಪಚೆಟ್ಟೋಳಂಡ ಮತ್ತು ಮನೆಯಪಂಡ ಹಾಗೂ ಚೆಕ್ಕೇರ ಕುಟುಂಬಗಳು ಪರಸ್ಪರ ಆಡುವಂತಾಗಿತ್ತು. ಮಾಜಿ ಆಯೋಜಕರ ಈ ಹೋರಾಟದಲ್ಲಿ ಶಾಂತೆಯAಡ ಹಾಗೂ ಚೆಕ್ಕೇರ ಕುಟುಂಬ ತಂಡಗಳು ಜಯಗಳಿಸಿ ಮುಂದಿನ ಹಂತ ಪ್ರವೇಶಿಸಿದವು. ಮನೆಯಪಂಡ ಹಾಗೂ ಅಪ್ಪಚೆಟ್ಟೋಳಂಡ ಪಂದ್ಯಾವಳಿಯಿAದ ನಿರ್ಗಮಿಸಿವೆ. ಇಂದು ನಡೆದ ಪಂದ್ಯಗಳ ಫಲಿತಾಂಶ ವಿವರ ಇಂತಿದೆ.

ಮೈದಾನ ೧ರಲ್ಲಿ ಮೂಕೋಂಡ ಮತ್ತು ಕುಂಡ್ಯೋಳAಡ ಪಂದ್ಯಗಳ ನಡುವಿನ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಲ್ಲಿ ಕುಂಡ್ಯೋಳAಡ ತಂಡ ಜಯ ಸಾಧಿಸಿತು. ಕುಂಡ್ಯೋಳAಡ ಪರ ಪ್ರಫುಲ್ ಪೊನ್ನಪ್ಪ ಹಾಗೂ ಕಾರ್ಯಪ್ಪ ತಲಾ ೧ ಗೋಲು ದಾಖಲಿಸಿದರು. ಮೂಕೋಂಡ ತಂಡದ ಮಿಥೇಶ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಆದೇಂಗಡ ಮತ್ತು ನಾಪಂಡ ನಡುವಿನ ಪಂದ್ಯದಲ್ಲಿ ೩-೦ ಗೋಲುಗಳ ಅಂತರದಲ್ಲಿ ನಾಪಂಡ ಗೆಲುವು ದಾಖಲಿಸಿತು. ನಾಪಂಡ ಪರ ನಿತಿನ್ ನಾಚಪ್ಪ, ಪ್ರವೀಣ್ ಹಾಗೂ ಬೋಪಣ್ಣ ತಲಾ ೧ ಗೋಲು ದಾಖಲಿಸಿದರು. ಆದೇಂಗಡ ಶಾನ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಕೇಲೇಟಿರ ಮತ್ತು ಕುಪ್ಪಂಡ (ನಾಂಗಾಲ) ನಡುವಿನ ಪಂದ್ಯದಲ್ಲಿ ೩-೨ ಗೋಲುಗಳ ಅಂತರದಲ್ಲಿ ಕೇಲೇಟಿರ ತಂಡ ಜಯ ಸಾಧಿಸಿತು. ಕೇಲೇಟಿರ ಪರ ಸುಬ್ರಮಣಿ, ಕವನ್ ಕಾಳಪ್ಪ ಹಾಗೂ ನಿಶ್ಚಯ್ ಮುತ್ತಣ್ಣ ತಲಾ ೧ ಗೋಲು ದಾಖಲಿಸಿದರು. ಕುಪ್ಪಂಡ ಪರ ಶರತ್ ಚಿಣ್ಣಪ್ಪ ಹಾಗೂ ಗೌರವ್ ಗಣಪತಿ ತಲಾ ೧ ಗೋಲು ದಾಖಲಿಸಿದರು. ಕುಪ್ಪಂಡ ಗೌರವ್ ಗಣಪತಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಮಾರ್ಚಂಡ ಮತ್ತು ಕೋಳೇರ ನಡುವಿನ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಲ್ಲಿ ಕೋಳೇರ ತಂಡ ಜಯ ಸಾಧಿಸಿತು. ಕೋಳೇರ ಪರ ಅಯ್ಯಪ್ಪ ಹಾಗೂ ಮಿಲನ್ ಮಾಚಯ್ಯ ತಲಾ ೧ ಗೋಲು ದಾಖಲಿಸಿದರು. ಮಾರ್ಚಂಡ ಸಚಿತ್ ಸೋಮಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಶಾಂತೆಯAಡ ಮತ್ತು ಅಪ್ಪಚೆಟ್ಟೋಳಂಡ ತಂಡಗಳ ನಡುವಿನ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಲ್ಲಿ ಶಾಂತೆಯAಡ ಗೆಲುವು ಸಾಧಿಸಿತು. ಶಾಂತೆಯAಡ ಪರ ತನುಷ್ ಕುಟ್ಟಯ್ಯ ಹಾಗೂ ಬಿಪಿನ್ ಬೋಪಯ್ಯ ತಲಾ ೧ ಗೋಲು ದಾಖಲಿಸಿದರು. ಅಪ್ಪಚೆಟ್ಟೋಳಂಡ ತಮನ್ ತಿಮ್ಮಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಮನೆಯಪಂಡ ಮತ್ತು ಚೆಕ್ಕೇರ ನಡುವಿನ ಪಂದ್ಯದಲ್ಲಿ ೪-೦ ಗೋಲುಗಳ ಅಂತರದಲ್ಲಿ ಚೆಕ್ಕೇರ ತಂಡ ಜಯ ಸಾಧಿಸಿತು. ಚೆಕ್ಕೇರ ಪರ ಸಿದ್ದಾಂತ್, ಆದರ್ಶ್, ಸೋಮಯ್ಯ ಹಾಗೂ ಉತ್ತಪ್ಪ ತಲಾ ೧ ಗೋಲು ದಾಖಲಿಸಿದರು. ಮನೆಯಪಂಡ ಶಿಶೂಲ್ ಅಯ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಮೈದಾನ ೨ರಲ್ಲಿ ಮಾಳೇಟಿರ (ಕೆದಮುಳ್ಳೂರು) ಮತ್ತು ಮತ್ರಂಡ ನಡುವಿನ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ತಲಾ ೨ ಗೋಲು ಬಾರಿಸಿ ಎರಡೂ ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆ ನಡೆದ ಟೈ ಬ್ರೇಕರ್‌ನಲ್ಲಿ ೪-೩ ಗೋಲುಗಳ ಅಂತರದಲ್ಲಿ ಮತ್ರಂಡ ತಂಡ ಜಯ ಸಾಧಿಸಿತು. ಮಾಳೇಟಿರ ಯಶ್ ಕರುಂಬಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.