ಮಡಿಕೇರಿ, ಏ.೧೨ : ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಪಾಲಿಬೆಟ್ಟದಲ್ಲಿ ನಡೆಯುತ್ತಿರುವ ಕೊಡವ ಕ್ರಿಕೆಟ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಸೀಸನ್ - ೨ ರ ಅಂತಿಮ ಪಂದ್ಯ ವೆಸ್ಟರ್ನ್ ಘಾಟ್ ವಾರಿಯರ್ಸ್ ಮತ್ತು ಟೀಮ್ ಲಿವರೇಜ್ ತಂಡಗಳ ನಡುವೆ ತಾ.೧೩ ರಂದು (ಇಂದು) ನಡೆಯಲಿದೆ.
ಇಂದು ನಡೆದ ೧೨ನೇ ದಿನದ ಪಂದ್ಯದಲ್ಲಿ ಟೀಮ್ ಕೊಡವ ರೈಸಿಂಗ್ ಸ್ಟಾರ್ಸ್ ಮತ್ತು ಟೀಮ್ ಲಿವರೇಜ್ ನಡುವೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು, ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಲಿವರೇಜ್ ತಂಡ ೨೦ ಓವರ್ಗಳಲ್ಲಿ ೯ ವಿಕೆಟ್ಗಳ ನಷ್ಟಕ್ಕೆ ೧೪೪ ರನ್ಗಳನ್ನು ಗಳಿಸಿತು. ಇದನ್ನು ಬೆನ್ನಟ್ಟಿದ ಟೀಮ್ ಕೊಡವ ರೈಸಿಂಗ್ ಸ್ಟಾರ್ಸ್ ತಂಡ ೨೦ ಓವರ್ಗಳಲ್ಲಿ ೯ ವಿಕೆಟ್ ನಷ್ಟಕ್ಕೆ ೧೧೪ ರನ್ಗಳನ್ನಷ್ಟೇ ಗಳಿಸಿ ಸೋಲೊಪ್ಪಿಕೊಂಡಿತು.
ಟೀಮ್ ಲಿವರೇಜ್ ತಂಡದ ಅಂಜAಡ ಚೇತನ್ ಚಿಣ್ಣಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ತಾ.೧೩ ರಂದು ಬೆಳಿಗ್ಗೆ ೧೧ ಗಂಟೆಗೆ ಪಾಲಿಬೆಟ್ಟದ ಟಾಟಾ ಕಾಫಿ ಮೈದಾನದಲ್ಲಿ ಟೀಮ್ ವೆಸ್ಟರ್ನ್ಘಾಟ್ ವಾರಿಯರ್ಸ್ ಮತ್ತು ಟೀಮ್ ಲಿವರೇಜ್ ತಂಡಗಳ ನಡುವೆ ರೋಚಕ ಫೈನಲ್ ಪಂದ್ಯ ನಡೆಯಲಿದೆ.
ಸೌಹಾರ್ದ ಪಂದ್ಯ ಡ್ರಾನಲ್ಲಿ ಅಂತ್ಯ
ಕೊಡವ ಕ್ರಿಕೆಟ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಸೌಹಾರ್ದ ಪಂದ್ಯ ಮಳೆಯಿಂದಾಗಿ ಡ್ರಾದಲ್ಲಿ ಅಂತ್ಯ ಕಂಡಿತು. ಇಂದು ಸೆಮಿಫೈನಲ್ ಫೈನಲ್ ಪಂದ್ಯಾಟದ ಬಳಿಕ ಆಯೋಜಕ ಸಿಸಿ ಎಫ್ ಹಾಗೂ ಕೊಡಗು ಪತ್ರಕರ್ತರ ಸಂಘದ ಟೀಮ್ ಕೆಪಿಎಸ್ ತಂಡಗಳ ನಡುವೆ ಸೌಹಾರ್ದ ಪಂದ್ಯಾಟ ನಡೆಯಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸಿಸಿ ಎಫ್ ತಂಡ ೧೦ ಓವರ್ ಗಳಲ್ಲಿ ೮೪ರ ಕಲೆ ಹಾಕಿತು. ಈ ಮೊತ್ತವನ್ನು ಬೆನ್ನಟ್ಟಿದ ಟೀಮ್ ಕೆಪಿಎಸ್ ತಂಡ ೭.೩ ಓವರ್ ಗಳಲ್ಲಿ ೫೬ ರನ್ ಗಳಿಸಿತ್ತು ಅಷ್ಟರಲ್ಲಿ ಮಳೆ ಸುರಿದ ಕಾರಣ ಪಂದ್ಯಾಟ ಡ್ರಾ ಆಗಿದೆ ಎಂದು ಘೋಷಣೆ ಮಾಡಲಾಯಿತು.
ಕುಡೆಕಲ್ ಸಂತೋಷ್ ನಾಯಕತ್ವದ ಟೀಮ್ ಕೆಪಿಎಸ್ ತಂಡದಲ್ಲಿ ಕಲೀಲ್, ವಿಘ್ನೇಶ್ ಭೂತನಕಾಡು, ಸುರೇಶ್ ಬಿಳಿಗೆರಿ, ಸೈನುಲ್ಲಾ, ಟಿಎಲ್ ಶ್ರೀನಿವಾಸ್, ರತೇಶ್ ಪೂಜಾರಿ, ಕೌಸರ್, ಸುರೇಶ್ ಸಿದ್ದಾಪುರ ನಿಹಾಲ್ ಕುಡೆಕಲ್, ಅಶೋಕ ಆಟವಾಡಿದರು.
ಸಿಸಿಎಸ್ ತಂಡದ ಪರ ಪಾಲಚಂಡ ಜಗನ್ ಉತ್ತಪ್ಪ, ಪೊರ್ಕಂಡ ಸುನಿಲ್ , ಕೀತಿಯಂಡ ಗಣಪತಿ, ಕುಲ್ಲೇಟಿರ ಶಾಂತ ಕಾಳಪ್ಪ, ಅಣ್ಣಳಮಾಡ ರಾಯ್ ಚಿಣ್ಣಪ್ಪ, ಬಲ್ಲಂಡ ರೇನ, ರಚನ್ ಚಿಣ್ಣಪ್ಪ, ಮಡ್ಲಂಡ ದರ್ಶನ್, ಅಣ್ಣಳಮಾಡ ಬೆನಿತ್ ಅಚ್ಚಯ್ಯ, ಬಾಚೆಟ್ಟಿರ ಬ್ರಿಜೇಶ್ ಗಣಪತಿ, ಕೊಕ್ಕಲೆರ ಧ್ಯಾನ್ ಆಟವಾಡಿದರು. ತೀರ್ಪುಗಾರರಾಗಿ ಪುತ್ತೂರಿನ ಕೃಷ್ಣ ಹಾಗೂ ದಿನೇಶ್ ಕಾರ್ಯನಿರ್ವಹಿಸಿದರು.
ಬಹುಮಾತ ವಿತರಣೆ ಸಂದರ್ಭ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ., ಖಜಾಂಚಿ ಟಿ.ಕೆ. ಸಂತೋಷ್, ಸಹ ಕಾರ್ಯದರ್ಶಿ ಪ್ರಸಾದ್ ಸಂಪಿಗೆ ಕಟ್ಟೆ ಇನ್ನಿತರರಿದ್ದರು.