ಕುಶಾಲನಗರ, ಏ. ೧೨: ಸಿ.ಪಿ.ಐ.ಎಂ.ಎಲ್. ಮಾಸ್ ಲೈನ್ ಜಿಲ್ಲಾ ಸಮಿತಿಯ ವತಿಯಿಂದ ಕುಶಾಲನಗರದಲ್ಲಿ ಅಖಿಲ ಭಾರತ ಪ್ರತಿಭಟನಾ ದಿನಾಚರಣೆ ಅಂಗವಾಗಿ ಕೆಲವು ಬೇಡಿಕೆಗಳೊಂದಿಗೆ ಸಾಂಕೇತಿಕ ಪ್ರತಿಭಟನೆ ನಡೆಸಿ ತಾಲೂಕು ತಹಶೀಲ್ದಾರ್ ಅವರಿಗೆ ಮನವಿ ಪತ್ರ ನೀಡಲಾಯಿತು.
ರಾಜ್ಯ ಸಮಿತಿಯ ಪ್ರಮುಖರಾದ ಡಿ.ಎಸ್. ನಿರ್ವಾಣಪ್ಪ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶದ ಒಕ್ಕೂಟ ವ್ಯವಸ್ಥೆಯನ್ನು ರಕ್ಷಣೆ ಮಾಡುವುದು ಮತ್ತು ರಾಜ್ಯ ಕೇಂದ್ರದ ಬೆಲೆ ಏರಿಕೆ ತಡೆಗಟ್ಟಿ ರೈತರ ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸುವ ನಿಟ್ಟಿನಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಈ ಹಿನ್ನಲೆಯಲ್ಲಿ ಸಮಿತಿಯ ಮೂಲಕ ರಾಷ್ಟçಪತಿಗಳಿಗೆ ಸಲ್ಲಿಸಲು ಮನವಿ ಪತ್ರವನ್ನು ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಅವರ ಮೂಲಕ ಹಸ್ತಾಂತರಿಸಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ವೈ.ಎಂ. ಸುರೇಶ್, ಎಂ.ಎA. ಸಿದ್ದಯ್ಯ ದೇವರಾಜು ಅಣ್ಣಪ್ಪ, ಸಾವಿತ್ರಿ, ವನಜಾಕ್ಷಿ, ಮಹೇಶ್, ಅಯ್ಯಪ್ಪ, ಜವರಯ್ಯ ಮತ್ತಿತರರು ಪಾಲ್ಗೊಂಡಿದ್ದರು.