ಮಡಿಕೇರಿ, ಏ. ೭: ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾಮದ ಶ್ರೀ ಭದ್ರಕಾಳೇಶ್ವರಿ ದೇವಿಯ ಉತ್ಸವ ತಾ.೧೩ರಂದು ನಡೆಯಲಿದೆ. ಉತ್ಸವದ ಪ್ರಯುಕ್ತ ತಾ.೮ರಂದು (ಇಂದು) ಮಧ್ಯಾಹ್ನ ೩ ಗಂಟೆಗೆ ಕೇಪಲಪ್ಪ ದೇವರ ಕೊಡಿಯಾಟ, ತಾ.೯ರಂದು ಮಧ್ಯಾಹ್ನ ೧ ಗಂಟೆಗೆ ಬೇಡುಹಬ್ಬ ನಡೆಯಲಿದ್ದು, ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ತಾ.೧೦ರಂದು ಮಧ್ಯಾಹ್ನ ೩ ಗಂಟೆಗೆ ಮಹಾದೇವರ ಕೊಡಿಯಾಟ, ರಾತ್ರಿ ೮ ಗಂಟೆಗೆ ಕೇಪಲಪ್ಪ ದೇವರ ದೊಡ್ಡಹಬ್ಬ ನಡೆಯಲಿದೆ. ತಾ.೧೨ರಂದು ಮಧ್ಯಾಹ್ನ ೨ ಗಂಟೆಗೆ ಮಹಾದೇವರ ದೊಡ್ಡಹಬ್ಬ ನಡೆಯಲಿದ್ದು, ತಾ.೧೩ರಂದು ಮಧ್ಯಾಹ್ನ ೧೨.೩೦ ಗಂಟೆಗೆ ಶ್ರೀ ಭದ್ರಕಾಳೇಶ್ವರಿ ದೇವಿಯ ದೊಡ್ಡಹಬ್ಬ ನಡೆಯಲಿದೆ. ಮಧ್ಯಾಹ್ನ ೧೨.೩೦ಕ್ಕೆ ಕೊಡಿಯಾಟ, ಆಂಗೋಲ, ಪೊಂಗೋಲ, ಕೊಂಬಾಟ್, ಚಾಲಿಯಾಟ್, ಪೀಲಿಯಾಟ್, ಬೊಳಕಾಟ್, ದೇವರಿಗೆ ಹರಕೆ ಕಾಣಿಕೆ. ತೆಂಗಿನಕಾಯಿಗೆ ಗುಂಡು ಹೊಡೆಯುವುದು. ಕಾಳೆ ಓಡಿಸುವ ಕಾರ್ಯಗಳು ನಡೆಯಲಿದೆ. ತಾ.೧೪ರಂದು ಮಧ್ಯಾಹ್ನ ೨ ಗಂಟೆಗೆ ಸಣ್ಣ ಹಬ್ಬದೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ ಎಂದು ದೇವಾಲಯ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.