ಸೋಮವಾರಪೇಟೆ, ಏ. ೭ : ಇಲ್ಲಿನ ವೀರಶೈವ ಸಮಾಜದ ವತಿಯಿಂದ ಪಟ್ಟಣದ ಕಟ್ಟೆ ಬಸವೇಶ್ವರ ದೇವಾಲಯದಲ್ಲಿ ಮಳೆ-ಬೆಳೆಗಾಗಿ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಲಾಯಿತು. ಇದೇ ಸಂದರ್ಭ ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಮಠಾಧೀಶ ರಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿಗಳ ೧೧೮ನೇ ಜನ್ಮ ದಿನವನ್ನು ಆಚರಿಸ ಲಾಯಿತು. ನಿವೃತ್ತ ಉಪನ್ಯಾಸಕ ಸರ್ವಜ್ಞ ಮೂರ್ತಿ ಅವರು ಶಿವಕುಮಾರ ಸ್ವಾಮೀಜಿಗಳ ಜೀವನಾದರ್ಶನ ಗಳು, ಸೇವೆಯ ಬಗ್ಗೆ ಸ್ಮರಿಸಿದರು.
ಈ ಸಂದರ್ಭ ವೀರಶೈವ ಸಮಾಜದ ಯಜಮಾನ ಬಿ.ಪಿ. ಶಿವಕುಮಾರ್, ಶೆಟ್ರು ಬಿ.ಆರ್. ಮೃತ್ಯುಂಜಯ, ಪ್ರಮುಖರಾದ ಯುವರಾಜ್, ಗಿರೀಶ್ ಸೇರಿದಂತೆ ಸಮಾಜ ಬಾಂಧವರು, ಸಾರ್ವಜನಿಕ ಭಕ್ತಾದಿಗಳು ಉಪಸ್ಥಿತರಿದ್ದರು.