ಮಡಿಕೇರಿ, ಏ. ೨: ರೈತರಿಗೆ ಶೇ ೦% ಬಡ್ಡಿ ದರದಲ್ಲಿ ಕೆಸಿಸಿ ಫಸಲು ಸಾಲ ನೀಡುವ ಸಂಬAಧ ಸರ್ಕಾರದ ಆದೇಶದಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಆದೇಶದ ಪ್ರಕಾರ ಸಿಂಗಲ್ ಆರ್ ಟಿ ಸಿ ಉಳ್ಳವರು ಮಾತ್ರ ಫ್ರೂಟ್ ತಂತ್ರಾAಶದ ಮೂಲಕ ಫಾರಂ ೩ ಮಾಡಿಸಿ ಕೆಸಿಸಿ ಸಾಲ ಪಡೆಯಬಹುದಾಗಿದೆ. ೨೦೨೧ರಲ್ಲಿ ಈ ಆದೇಶ ಬಂದರೂ ಇಲ್ಲಿಯವರೆಗೆ ೦% ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿತ್ತು. ಕಳೆದ ವರ್ಷ ೫೩೦ ಮಂದಿ ರೈತರು ಸಾಲ ಪಡೆದುಕೊಂಡಿದ್ದಾರೆ. ಆದರೆ ಈ ಬಾರಿ ಸಿಂಗಲ್ ಆರ್ ಟಿ ಸಿ ಮಾಡದ ಕಾರಣ ಬಹುತೇಕ ರೈತರಿಗೆ ೦% ಬಡ್ಡಿಯ ಸಾಲ ಸಿಗುವ ಸಾಧ್ಯತೆ ಇಲ್ಲ. ಇದರಿಂದ ಬಡ ರೈತರಿಗೆ ಅನ್ಯಾಯವಾಗಲಿದೆ. ಸಂಘದಲ್ಲಿ ಶೇ.೭೦ಕ್ಕೂ ಹೆಚ್ಚು ರೈತರು ಜಂಟಿ ಪಹಣಿ, ಪಟ್ಟೆದಾರರ ಹೆಸರು, ಕುಟುಂಬದ ಮೃತಪಟ್ಟ ಸದಸ್ಯರ ಹೆಸರಲ್ಲಿ ನೋಂದಾಣಿಯಾಗಿರುವುದು ಇನ್ನಿತರ ಕಾರಣಗಳಿಂದಾಗಿ ಸಿಂಪಲ್ ಮಾರ್ಟ್ ಗೇಜ್ ಮಾಡಿಸಲು ಸಾಧ್ಯವಾಗುತ್ತಿಲ್ಲ. ಸಾಲ ವಿತರಿಸಲಾಗದೆ ಸಂಘವೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ. ಆದ್ದರಿಂದ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಸಾಲ ವಿತರಿಸುವ ವಿಧಾನವನ್ನು ಈ ಹಿಂದಿನAತೆಯೇ ಮುಂದುವರಿಸಿಕೊAಡು ಹೋಗಲು ಸರ್ಕಾರ ಆದೇಶಿಸಬೇಕು. ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಗಮನ ಸೆಳೆದು ಸೂಕ್ತ ಕ್ರಮಕ್ಕೆ ಮುಂದಾಗಬೇಕೆAದು ಮಣಿ ಉತ್ತಪ್ಪ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪೇರಿಯನ ಪೂಣಚ್ಚ, ನಿರ್ದೇಶಕರಾದ ಬಿ.ಎಂ ಕಾಶಿ, ಅಕ್ಕಾರಿ ದಯಾನಂದ್, ಕೊಂಗೇಟಿರ ವಾಣಿ ಕಾಳಪ್ಪ, ಮುಳ್ಳಂಡ ಮಾಯಮ್ಮ ಹಾಜರಿದ್ದರು.