ಮಡಿಕೇರಿ, ಮಾ. ೩೧: ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ತಾ. ೨ ರ ಸಂಜೆ ೬.೩೦ ರಿಂದ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕುನ್ನತ್ತಿಲ್ಲತ್ ಮುರಳಿ ಕೃಷ್ಣ ನಂಬೂದರಿ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ.ಸುಧೀರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವದ ಅಂಗವಾಗಿ ತಾ.೨ರ ಸಂಜೆ ೭.೩೦ಗಂಟೆಗೆ ಶ್ರೀ ಭಗವತಿ ಪೂಜೆ ಮತ್ತು ಕಳಸ ಪೂಜೆ ನಡೆಯಲಿದೆ, ತಾ.೩ ರಂದು ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮ, ೯ ಗಂಟೆಗೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಅಷ್ಠಾಭಿಷೇಕ ೧೦ ಗಂಟೆಗೆ ಅಯ್ಯಪ್ಪ ಸ್ವಾಮಿಗೆ ಅಷ್ಠಾಭಿಷೇಕ, ೧೧ ಗಂಟೆಗೆ ನಾಗ ದೇವರಿಗೆ ತಂಬಿಲ ಸಮರ್ಪಣೆ ೧೧.೩೦ ಗಂಟೆಗೆ ಕಲಶಾಭಿಷೇಕ ಮತ್ತು ಮಧ್ಯಾಹ್ನ ೧೨ ಗಂಟೆಗೆ ಮಹಾ ಮಂಗಳಾರತಿಯೊAದಿಗೆ ಪ್ರಸಾದ ವಿತರಣೆ ನಡೆಯಲಿದೆ.
ಅದೇ ದಿನ ಸಂಜೆ ೪ ಗಂಟೆಗೆ ಧ್ವಜಾರೋಹಣ ಹಾಗೂ ದೈವಿಕ ಕಾರ್ಯ ಪರಶಿನಿ ಕಡವು ಶ್ರೀ ಮುತ್ತಪ್ಪ ಕ್ಷೇತ್ರದ ಮುಖ್ಯ ಅರ್ಚಕರಾಗಿರುವ (ಆಚರಪಟ್ಟ ಮಡೆಯಚ್ಚನ್) ಶ್ರೀ ಬ್ಲಾತೂರ್ ಚಂದ್ರ ಮಡೆಯಚ್ಚನ್ ಇವರ ನೇತೃತ್ವದಲ್ಲಿ ಹಲವಾರು ಅತಿಥಿ ಗಣ್ಯರ ಸಮ್ಮುಖದಲ್ಲಿ ಪ್ರಾರಂಭವಾಗಲಿದೆ. ಸಂಜೆ ೪.೧೫ ಗಂಟೆಗೆ ದೇವಾಲಯದ ಮುಂಭಾಗದಲ್ಲಿ ಹೊಸದಾಗಿ ನಿರ್ಮಿಸಿರುವ ಸೇವಾ ಕೌಂಟರ್‌ನ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಸಂಜೆ೪.೩೦ಕ್ಕೆ ಮುತ್ತಪ್ಪ ದೇವರ ಮಲೆ ಇಳಿಸುವುದು. ೫.೩೦ಕ್ಕೆ ಮುತ್ತಪ್ಪ ದೇವರ ವೆಳ್ಳಾಟಂ ನಡೆಯಲಿದೆ. ೬.೩೦ ಗಂಟೆಗೆ ಭಗವತಿ ದೇವಿಗೆ ದೀಪಾರಾಧನೆ ಮತ್ತು ಪುಷ್ಪಾರ್ಚನೆ ನಡೆಯಲಿದೆ ಎಂದು ಸುಧೀರ್ ತಿಳಿಸಿದರು.
ಭಕ್ತಾದಿಗಳ ಹರಕೆ ಕೋಲಗಳನ್ನು ತಾ. ೩ ರ ಸಂಜೆ ೭.೩೦ ಗಂಟೆಗೆ ನಡೆಸಿಕೊಡಲಾಗುವುದು. ಶ್ರೀ ವಿಷ್ಣು ಮೂರ್ತಿ, ಶಿವಭೂತಂ, ಶ್ರೀ ಪೋದಿ, ಶ್ರೀ ಕುಟ್ಟಿಚಾತನ್ ದೈವದ ಕೋಲಗಳನ್ನು ಕಟ್ಟಿಸಲು ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಹರಕೆ ಕೋಲ ನಡೆಸಲು ಇಚ್ಛಿಸುವ ಭಕ್ತರು ತಾ. ೨ರ ಒಳಗಾಗಿ ದೇವಸ್ಥಾನದ ಕಚೇರಿಯಲ್ಲಿ ಸಂಪರ್ಕಿಸಿ ಹೆಸರು ನೊಂದಾಯಿಸಿಕೊಳ್ಳಬೇಕು. ತಾ. ೪ ರ ಸಂಜೆ ೫.೩೦ ಗಂಟೆಗೆ ಶ್ರೀ ಮುತ್ತಪ್ಪ ದೇವರ ಕಲಶ ಮೆರವಣಿಗೆಯು ಗಾಂಧಿ ಮೈದಾನದಿಂದ ಹೊರಡಲಿದೆ. ಕಡಗದಾಳು, ನೀರುಕೊಲ್ಲಿ, ಸಂಪಿಗೆ ಕಟ್ಟೆ, ಮೈಸೂರು ರಸ್ತೆಯ ಡಿಪೊ ಬಳಿ, ಮೈತ್ರಿ ಜಂಕ್ಷನ್ ಹೀಗೆ ನಗರದ ನಾಲ್ಕೂ ದಿಕ್ಕುಗಳಿಂದ ಹೊರಡುವ ಕಲಶ ಮೆರವಣಿಗೆಯು ಶ್ರೀ ಮುತ್ತಪ್ಪ ದೇವಾಲಯದ ಕಲಶದೊಂದಿಗೆ ಮಹಿಳೆಯರು ಮತ್ತು ಮಕ್ಕಳ ತಾಲಾಪೊಲಿ, ಕೇರಳದ ಆಕರ್ಷಕ ಕಲಾ ತಂಡಗಳು, ಪುತ್ತೂರಿನ ಶ್ರೀ ಸತ್ಯನಾರಾಯಣ ಭಜನಾ ಮಂಡಳಿಯವರ ಭಜನಾ ಕುಣಿತ, ಸಿಂಗಾರಿ ಮೇಳ, ವಿದ್ಯುತ್ ಅಲಂಕೃತ ಮಂಟಪಗಳು ಮೆರವಣಿಗೆಗೆ ಮೆರಗು ನೀಡಲಿವೆ. ಈ ಮೆರವಣಿಗೆಯಲ್ಲಿ ಭಾಗವಹಿಸುವ ಅದೃಷ್ಠವಂತ ಮೂವರು ಮಹಿಳೆಯರು ಮತ್ತು ಪುರುಷರಿಗೆ ಆಕರ್ಷಕ ಬಹುಮಾನ ನೀಡಲಾಗುತ್ತದೆ.
ದೇವಾಲಯದ ಕಲಾ ಮಂದಿರದಲ್ಲಿ ಸಂಜೆ ೬ ಗಂಟೆಯಿAದ ೮ ಗಂಟೆಯವರೆಗೆ ಮಡಿಕೇರಿಯ ಭಜನಾ ತಂಡಗಳಿAದ ಭಜನಾ ಕಾರ್ಯಕ್ರಮ ನಡೆಯಲಿದೆ. ೯ ಗಂಟೆಯಿAದ ವೇದಿಕೆ ಕಾರ್ಯಕ್ರಮ ನಂತರ ೧೦ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಝೀ ಟಿ.ವಿ. ಸರಿಗಮಪ ವಿಜೇತೆ ಸ್ಟಾರ್ ಸಿಂಗರ್ ಪ್ರಗತಿ ಬಡಿಗೇರ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಡಿಕೇರಿ ನೃತ್ಯ ಶಾಲೆ ಕಿಂಗ್ಸ್ ಕೂರ್ಗ್ ಬಳಗದವರು ನಡೆಸಿಕೊಡಲಿದ್ದಾರೆ.
ತಾ.೪ ರ ಸಂಜೆ ೪ ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವುದು.೪.೩೦ ಗಂಟೆಗೆ ಶ್ರೀ ಶಾಸ್ತಪ್ಪ ದೇವರ ವೆಳ್ಳಾಟಂ, ೫.೩೦ ಗಂಟೆಗೆ ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ, ರಾತ್ರಿ ೭ ಗಂಟೆಗೆ ಶ್ರೀ ವಿಷ್ಣುಮೂರ್ತಿ ಮೇಲೇರಿಗೆ ಅಗ್ನಿ ಸ್ಪರ್ಶ, ೯ ಗಂಟೆಗೆ ಪ್ರಸಾದ ವಿತರಣೆ, ೯.೩೦ ಗಂಟೆಗೆ ಶ್ರೀ ಪೊವದಿ ವೆಳ್ಳಾಟಂ, ೧೦.೩೦ ಗಂಟೆಗೆ ಶ್ರೀ ವಿಷ್ಣುಮೂರ್ತಿ ವೆಳ್ಳಾಟಂ, ೧೨ ಶ್ರೀ ಶಿವಭೂತ ತೆರೆ, ರಾತ್ರಿ ೧ ಗಂಟೆಗೆ ಶ್ರೀ ಗುಳಿಗ ದೇವರ ತೆರೆ, ೨ ಗಂಟೆಗೆ ಕಳಗ ಪಾಟ್, ಸಂದ್ಯಾವೇಲೆ, ೨-೩೦ ಗಂಟೆಗೆ ಶ್ರೀ ಕುಟ್ಟಿಚಾತನ್ ದೇವರ ತೆರೆ ನಡೆಯಲಿದೆ.
ತಾ.೫ ರ ಬೆಳಿಗ್ಗೆ ೪ ಗಂಟೆಗೆ ಶ್ರೀ ಮುತ್ತಪ್ಪ ಮತ್ತು ಶ್ರೀ ತಿರುವಪ್ಪ ದೇವರ ತೆರೆ, ೫ ಗಂಟೆಗೆ ಶ್ರೀ ವಿಷ್ಣುಮೂರ್ತಿ ದೇವರ ಮೇಲೇರಿ, ೮ ಗಂಟೆಗೆ ಶ್ರೀ ಪೊವ್ವದಿ ತೆರೆ, ೯-೩೦ ಗಂಟೆಗೆ ಶ್ರೀ ವಿಷ್ಣುಮೂರ್ತಿ ದೇವರ ಬಾರಣೆ,೧೧.೩೦ ಕ್ಕೆ ಧ್ವಜ ಅವರೋಹಣ ನೆರವೇರಲಿದೆ ಎಂದು ಟಿ.ಕೆ.ಸುಧೀರ್ ವಿವರಿಸಿದರು.
ಗೋಷ್ಠಿಯಲ್ಲಿ ಮುತ್ತಪ್ಪ ದೇವಾಲಯ ಉತ್ಸವ ಸಮಿತಿ ಅಧ್ಯಕ್ಷ ಬಿ.ಕೆ. ರವೀಂದ್ರ ರೈ, ದೇವಾಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ವಿ. ಸುಬ್ರಮಣಿ, ಖಜಾಂಚಿ ಎನ್.ವಿ. ಉನ್ನಿಕೃಷ್ಣ, ಮೆರವಣಿಗೆ ಸಮಿತಿ ಅಧ್ಯಕ್ಷ ಮನು ಮಂಜುನಾಥ್, ಮುತ್ತಪ್ಪ ಮಹಿಳಾ ವೇದಿಕೆ ಸದಸ್ಯೆ ಕಾಳಚಂಡ ರಾಣಿ ಗಣಪತಿ ಉಪಸ್ಥಿತರಿದ್ದರು.