ಸೋಮವಾರಪೇಟೆ,ಮಾ.೨೩: ಇಲ್ಲಿನ ಜೆಸಿಐ ಮಹಿಳಾ ಘಟಕದ ವತಿಯಿಂದ ಸ್ಥಳೀಯ ಮಹಿಳಾ ಸಮಾಜದ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಶನಿವಾರಸಂತೆ ಸುಪ್ರಜ ಗುರುಕುಲ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಸುಜಲಾದೇವಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸೋಲಿಗೆ ಹೆಣ್ಣು ಅಂಜಬಾರದು. ಸೋಲನ್ನೆ ಗೆಲುವಿನ ಸೋಪಾನವನ್ನಾಗಿ ಮಾಡಿಕೊಳ್ಳಬೇಕು ಎಂದರು.

ಜೆಸಿಐ ಅಧ್ಯಕ್ಷೆ ಜಗದಾಂಬ ಗುರುಪ್ರಸಾದ್ ಮಾತನಾಡಿ, ಸಾಕಷ್ಟು ಸಾಧಕರು ನಮ್ಮ ಮುಂದೆ ಇದ್ದರೂ, ಸಮಾಜದ ಮುಖ್ಯವಾಹಿನಿಗೆ ಬರುತ್ತಿಲ್ಲ. ಅಂತಹ ಪ್ರತಿಭೆಗಳನ್ನು ಗುರುತಿಸುವ ಕೆಲಸವನ್ನು ಜೇಸಿ ಸಂಸ್ಥೆ ಮಾಡುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿದ ಚಿಕ್ಕತೋಳೂರು ಗ್ರಾಮದ ಶಕುಂತಲ ಅವರಿಗೆ ಜೇಸಿ ರಕ್ಷಾ ರತ್ನ ಪುರಸ್ಕಾರ, ಕೃಷಿಯಲ್ಲಿ ಸಾಧನೆಗೈದ ಗೌಡಳ್ಳಿಯ ಜಿ.ಕೆ. ಲತ ಅವರಿಗೆ ಜೇಸಿ ಕೃಷಿರತ್ನ ಪುರಸ್ಕಾರ, ಆರೋಗ್ಯ ಸೇವೆಯಲ್ಲಿ ಸೇವೆ ಮಾಡುತ್ತಿರುವ ವಸಂತಿ ಅವರಿಗೆ ಜೇಸಿ ಆರೋಗ್ಯ ರತ್ನ ಪುರಸ್ಕಾರ, ಶಿಕ್ಷಣ ಕ್ಷೇತ್ರದಲ್ಲಿ ಎಂ.ಐ. ರಿಜ್ವಾನ ಬಾನು ಅವರಿಗೆ ಜೇಸಿ ವಿದ್ಯಾರತ್ನ ಪುರಸ್ಕಾರ ಹಾಗೂ ೧೪ ವಯೋಮಾನದೊಳಗಿನ ರಾಷ್ಟಿçÃಯ ಹಾಕಿ ಆಟಗಾರ್ತಿ ತಾನಿಯ ಅವರಿಗೆ ಜೇಸಿ ಖೇಲ್‌ರತ್ನ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಜೇಸಿ ವಲಯ ನಿರ್ದೇಶಕಿ ಮಾಯಾ ಗಿರೀಶ್ ಕಾರ್ಯಕ್ರಮ ಉದ್ಘಾಟಿಸಿದರು. ಲೇಡಿ ಜೇಸಿ ವಿಂಗ್ ಅಧ್ಯಕ್ಷೆ ಜ್ಯೋತಿ ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ವಿಜಯಲಕ್ಷಿö್ಮÃ ಸುರೇಶ್, ಜೇಸಿ ಕಾರ್ಯದರ್ಶಿ ಉಷಾ ಪ್ರಕಾಶ್, ನಿಕಟಪೂರ್ವ ಅಧ್ಯಕ್ಷ ವಸಂತ್ ಉಪಸ್ಥಿತರಿದ್ದರು.