ಐಗೂರು, ಮಾ. ೧೭: ಟೀಮ್ ಇಂಡಿಯನ್ಸ್ ಮಾದಾಪುರ ಇವರ ವತಿಯಿಂದ ಪ್ರಥಮ ವರ್ಷದ ಹಿಂದೂ ಮಹಿಳೆಯರ ಟೆನ್ನಿಸ್ ಬಾಲ್ ಕ್ರಿಕೆಟ್ ಲೀಗ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ. ಏಪ್ರಿಲ್ ೨೬ ಹಾಗೂ ೨೭ ರಂದು ಎರಡು ದಿನಗಳ ಕಾಲ ಮಾದಾಪುರದ ಸರಕಾರಿ ಶಾಲಾ ಮೈದಾನದಲ್ಲಿ ಪಂದ್ಯಾಟ ನಡೆಯಲಿದ್ದು, ಪ್ರಥಮ ಬಹುಮಾನÀ ರೂ. ೨೨,೨೨೨ ರೂಪಾಯಿಗಳಾಗಿದ್ದು, ದ್ವಿತೀಯ ಬಹುಮಾನ ೧೨,೨೨೨ ರೂಪಾಯಿಗಳು ಆಗಿರುತ್ತದೆ.

ಭಾಗವಹಿಸುವ ತಂಡದವರು ಏಪ್ರಿಲ್ ೨೪ ರೊಳಗೆ ತಂಡದ ಹೆಸರನ್ನು ನೋಂದಾಯಿಸತಕ್ಕದ್ದು. ಕೊಡಗಿನ ಹಿಂದೂ ಧರ್ಮೀಯ ಮಹಿಳಾ ಆಟಗಾರ್ತಿಯರಿಗೆ ಮಾತ್ರ ಪಂದ್ಯಾಟದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಐದು ಓವರ್‌ಗಳ ಈ ಪಂದ್ಯಾಟದಲ್ಲಿ ಆಯೋಜಕರ ಮತ್ತು ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಹೆಚ್ಚಿನ ವಿವರಕ್ಕೆ ೯೭೪೧೯೫೪೧೨೬ ಸಂಪರ್ಕಿಸಬಹುದು.