ಪೊನ್ನಂಪೇಟೆ, ಮಾ. ೧೭ : ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಹುಣ್ಣಿಮೆ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಶ್ರೀ ರಾಮಕೃಷ್ಣ ಪೂಜೆ, ವಿಶೇಷ ಭಜನೆಗಳು ನೆರವೇರಿದವು. ಶ್ರೀ ಮಾತೆ ಶಾರದಾ ದೇವಿಯವರ ಅಷ್ಟೋತ್ತರ ಪೂಜೆ ಹಾಗೂ ಇನ್ನಿತರ ಪೂಜೆಗಳನ್ನು ನೆರವೇರಿಸಿ ಮಾತನಾಡಿದ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಪರಹಿತಾನಂದಜೀ ಅವರು ಹೋಳಿ ಹುಣ್ಣಿಮೆ ಹಾಗೂ ಚೈತನ್ಯ ಮಹಾಪ್ರಭುಗಳ ಜನ್ಮದಿನೋತ್ಸವ ಆಚರಿಸಲಾಗುತ್ತಿದ್ದು, ಹುಬ್ಬಳ್ಳಿಯಿಂದ ಆಗಮಿಸಿದ ದಿನೇಶ್ ಚಿಲಾಲ್ ಎಂಬ ಕಲಾವಿದರು ರಂಗೋಲಿಯ ಮೂಲಕ ಶ್ರೀ ಶಾರದಾಮಾತೆಯ ಚಿತ್ರವನ್ನು ರಚಿಸಿರುವುದು ಶ್ಲಾಘನೀಯವಾಗಿದ್ದು, ಮುಂದಿನ ದಿನಗಳಲ್ಲಿ ಇವರ ಪ್ರತಿಭೆ ಮತ್ತಷ್ಟು ಹೊರಹೊಮ್ಮಲಿ ಎಂದÀರು.
ಭಕ್ತಾದಿಗಳಿಗೆ ರಾಮಕೃಷ್ಣ ಆಶ್ರಮ ಆರಂಭದ ದಿನಗಳ ಬಗ್ಗೆ ವಿವರಣೆ ಯನ್ನು ನೀಡಿದ ಸ್ವಾಮೀಜಿ, ಮುಂದಿನ ತಿಂಗಳು ೧೨ ನೇ ದಿನ ಹುಣ್ಣಿಮೆ ಯಂದು ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಚಿತ್ರ ಕಲಾವಿದ ದಿನೇಶ್ ಚಿಲಾಲ್ ಅವರು ಮಾತನಾಡಿ, ಚಿಕ್ಕಂದಿನಿAದಲೇ ಚಿತ್ರ ಬಿಡಿಸುವ ಹವ್ಯಾಸವನ್ನು ರೂಡಿಸಿಕೊಂಡಿದ್ದು ೨೦೦೭ರಿಂದ ರಂಗೋಲಿ ಬಿಡಿಸಲು ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ದೇವಿ ಲಲಿತಾ ಸಹಸ್ರನಾಮದ ಚಿತ್ರ ರಚಿಸುವ ಪ್ರಯತ್ನದಲ್ಲಿರುವುದಾಗಿ ತಿಳಿಸಿದರು. ಕಲಾವಿದ ದಿನೇಶ್ ಚಿಲಾಲ್ ಅವರು ರಂಗೋಲಿಯಲ್ಲಿ ಶ್ರೀ ಶಾರದಾಮಾತೆಯ ಚಿತ್ರವನ್ನು ರಚಿಸಿ, ಭಕ್ತಾದಿಗಳ ಗಮನ ಸೆಳೆದರು. ಆಶ್ರಮದ ವತಿಯಿಂದ ಕಲಾವಿದ ದಿನೇಶ್ ಚಿಲಾಲ್ ದಂಪತಿಯನ್ನು ಸ್ವಾಮಿಜಿ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಪೊನ್ನಪೇಟೆಯ ಹಲವು ಭಕ್ತಾದಿಗಳು ಪಾಲ್ಗೊಂಡಿದ್ದರು.