೧೧.೩.೨೦೨೫ ರ ರಾತ್ರಿ ೯.೩೭ರ ಸಮಯಲ್ಲಿ ನಭೋಮಂಡಲದಲ್ಲಿ (ಊಚಿಟo) ಚಂದಿರನ ಸುತ್ತ ವೃತ್ತಾಕಾರವು ಗೋಚರಿಸಿತು. ಲಗ್ನ ತುಲಾ, ಲಗ್ನಾಧಿಪತಿ ಶುಕ್ರ ಉಚ್ಛಸ್ಥಾನದಲ್ಲಿದ್ದರೂ ವಕ್ರನಾಗಿದ್ದಾನೆ ಮತ್ತು ರಾಹುವಿನೊಡನೆ ಸಂಯೋಜನೆ ಸಂಗಮಗೊAಡಿದ್ದಾನೆ. ಶುಕ್ರನನ್ನು ಮಾಂದಿ ಮತ್ತು ಕೇತು ದೃಷ್ಟಿಸುತ್ತಿದ್ದಾರೆ.
ಬುಧನು ನೀಚಸ್ಥಾನದಲ್ಲಿದ್ದಾನೆ. ಪೂರ್ವಾಭಾದ್ರಪದ ನಕ್ಷತ್ರದಲ್ಲಿ ಸೂರ್ಯ - ಶನಿಯವರು ಸಂಯೋಜನೆಗೊAಡಿದ್ದಾರೆ. ಒಟ್ಟಾರೆ ಎಲ್ಲಾ ಗ್ರಹಸಂಚಾರ ಮತ್ತು ಚಂದಿರನ ಸುತ್ತು ಮೂಡಿದ ಬಣ್ಣಗಳನ್ನು ಅವಲೋಕಿಸಿದರೆ, ಜ್ಯೋತಿಷ್ಯ ಶಾಸ್ತçದ ವಿದ್ಯಮಾನಕ್ಕೆ ಸಂಬAಧಿಸಿದ ಈ ಅತಿಶಯವನ್ನು ನಾವು ಜ್ಯೋತಿಷ್ಯ ಆಧಾರದಲ್ಲಿ ಪ್ರಭಾವಲಯದ ನೋಟವು ೨-೩ ತಿಂಗಳಿನೊಳಗಡೆ ಸಮುದ್ರದಲ್ಲಿ ಸುನಾಮಿಯಾಗಬಹುದೆಂಬ ಸೂಚನೆಯನ್ನು ನೀಡುತ್ತದೆ. ನಮ್ಮ ಕೊಡಗಿನಲ್ಲಿ ಏಪ್ರಿಲ್ - ಮೇ ತಿಂಗಳುಗಳಲ್ಲಿ ಅಕಾಲಿಕ ಮಳೆಯಾಗಬಹುದು. ಜೊತೆಯಲ್ಲೇ ಸೂರ್ಯನ ಸುಡುಬಿಸಿಲಿನ ಧಗೆಯನ್ನು ಮಾರ್ಚ್ - ಏಪ್ರಿಲ್ ತಿಂಗಳಿನಲ್ಲಿ ಕೊಡಗಿನ ಜನರು ಸಹಿಸಬೇಕಾದೀತು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕೆಲವು ನಾಯಕರುಗಳ ಆರೋಗ್ಯಕ್ಕೆ ತೊಂದರೆಯಾಗಬಹುದು. ಸರ್ಕಾರವೇ ಬಿದ್ದುಹೋಗುವ ಸಂದರ್ಭವೂ ಸಹ ಬರಬಹುದು. ಕಾವೇರಮ್ಮೆ ದೇವಿಯು ನಮ್ಮ ನಾಡನ್ನಲ್ಲದೆ ಇಡೀ ಭಾರತದೇಶವನ್ನು ಕಾಪಾಡಲಿ ಎಂದು ಬೇಡಿಕೊಳ್ಳೋಣ.
- ಕರೋಟಿರ ಶಶಿ ಸುಬ್ರಮಣಿ