ಸೋಮವಾರಪೇಟೆ,ಮಾ.೧೮: ಸಿಇಟಿ ಮತ್ತು ನೀಟ್ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತ್ವರಿತವಾಗಿ ತಯಾರು ಮಾಡುವ ಉದ್ದೇಶದಿಂದ ತಾಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ಶಾಲೆಯಲ್ಲಿ ತಾ. ೨೦ ರಿಂದ ಏ.೧೭ ರವರೆಗೆ ಬೇಸಿಗೆ ರಜಾದಿನದ ತರಬೇತಿ ಶಿಬಿರ ಅಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕು, ಜಿಲ್ಲೆ, ಮತ್ತು ಹೊರಜಿಲ್ಲೆಯ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ನುರಿತ ಹಾಗೂ ಪ್ರತಿಭಾವಂತ ಉಪನ್ಯಾಸಕರು ತರಬೇತಿ ನೀಡಲಿದ್ದಾರೆ. ಹೊರಗಿನ ವಿದ್ಯಾರ್ಥಿಗಳಿಗೆ ಅವಶ್ಯಕತೆಯಿದ್ದಲ್ಲಿ ವಸತಿ ಸೌಲಭ್ಯ ಒದಗಿಸಲಾಗುವುದು ಎಂದು ಮುತ್ತಣ್ಣ ತಿಳಿಸಿದರು.

ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ನಿರ್ಮಾಣವಾಗಿರುವ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನದಲ್ಲಿ ಬೇಸಿಗೆ ಹಾಕಿ ತರಬೇತಿ ಶಿಬಿರವನ್ನು ಪರೀಕ್ಷೆಗಳು ಮುಗಿದ ತಕ್ಷಣ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ೮೧೦೫೯೭೦೧೧೫, ೭೭೯೫೬೩೦೯೩೩ ಸಂಪರ್ಕಿಸಬಹುದು ಎಂದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎಸ್.ಬಿ. ಭರತ್ ಕುಮಾರ್, ಕಾರ್ಯದರ್ಶಿ ಎನ್.ಬಿ. ಗಣಪತಿ, ಖಜಾಂಚಿ ಜಿ.ಪಿ. ಲಿಂಗರಾಜು, ನಿರ್ದೇಶಕರುಗಳಾದ ನಂದಕುಮಾರ್, ಶ್ರೀಹರಿ, ಪಾಪಯ್ಯ ಇದ್ದರು.