ಮಡಿಕೇರಿ, ಮಾ. ೧೭: ಕೊಡವ ಜನಾಂಗದಲ್ಲಿರುವ ಫುಟ್ಬಾಲ್ ಕ್ರೀಡಾ ಪ್ರತಿಭೆಗಳನ್ನು ಪರಿಚಯಿಸುವ ಹಾಗೂ ಫುಟ್ಬಾಲ್ ಕ್ರೀಡೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಕೊಡವ ಕುಟುಂಬಗಳ ನಡುವೆ ೫ ‘ಎ’ ಸೈಡ್ ೫+೩ ಆಟಗಾರನ್ನೊಳಗೊಂಡ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ.

ಮುಕ್ಕಾಟಿರ (ಬೇತ್ರಿ) ಕುಟುಂಬ ಈ ಪಂದ್ಯಾವಳಿಯ ಆತಿಥ್ಯ ವಹಿಸಿ ಕೊಂಡಿದ್ದು, ಪಂದ್ಯಾವಳಿಯ ಸಂಚಾಲಕ ಮುಕ್ಕಾಟಿರ ಸತ್ಯ ಪೆಮ್ಮಯ್ಯ ಪತ್ರಿಕಾಗೋಷ್ಠಿಯಲ್ಲಿ ಈ

ಬಗ್ಗೆ ಮಾಹಿತಿ ನೀಡಿದರು. ಗೋಣಿಕೊಪ್ಪ ಅರುವತ್ತೋಕ್ಲುವಿನ ಅತ್ಲಾನ್ ಕ್ಲಬ್‌ನ ಟರ್ಫ್ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ. ೫ ಎ ಸೈಡ್ ನಾಕೌಟ್ ಮಾದರಿಯ ಪಂದ್ಯಾವಳಿ ಇದಾಗಿದ್ದು, ೫+೩ ಮಂದಿ ಪೈಕಿ ಈರ್ವರು ಅತಿಥಿ ಆಟಗಾರರಿಗೆ ಆಡಲು ಅವಕಾಶವಿದೆ ಬೇರೆ ಯಾವುದೇ ಕೊಡವ ಕುಟುಂಬದ ಈರ್ವರು ಆಟಗಾರರು ಅತಿಥಿ ಆಟಗಾರರನ್ನಾಗಿ ಭಾಗವಹಿಸ ಬಹುದಾಗಿದೆ ಎಂದು ತಿಳಿಸಿದರು. ಏಪ್ರಿಲ್ ೯ರಿಂದ ೧೩ರವರೆಗೆ ಹೊನಲು ಬೆಳಕಿನ

(ಮೊದಲ ಪುಟದಿಂದ) ಪಂದ್ಯಾವಳಿ ನಡೆಯಲಿದ್ದು ಆಟಗಾರರಿಗೆ ಹೆಸರು ನೋಂದಾಯಿಸಿ ಕೊಳ್ಳಲು

ತಾ. ೧೫ ಕೊನೆಯ ದಿನಾಂಕ ವಾಗಿದ್ದು ಈಗಾಗಲೇ ೭೨ ತಂಡಗಳು ಹೆಸರು ನೋಂದಾಯಿಸಿಕೊAಡಿವೆ. ಇನ್ನಷ್ಟು ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಯಾವುದೇ ವಯಸ್ಸಿನ ಮಿತಿ ಇಲ್ಲದೆ ಪುರುಷ ಹಾಗೂ ಮಹಿಳಾ ಆಟಗಾರ್ತಿಯರು ಕೂಡ ಭಾಗವಹಿಸÀಬಹುದಾಗಿದೆ ಎಂದು ಪೆಮ್ಮಯ್ಯ ಮಾಹಿತಿ ನೀಡಿದರು.

ಕೊಡವ ಜನಾಂಗದಲ್ಲಿ ಬಹಳಷ್ಟು ಮಂದಿ ಫುಟ್ಬಾಲ್ ಆಟಗಾರರಿದ್ದಾರೆ. ಆದರೆ ಹಾಕಿ ಕ್ರಿಕೆಟ್ ಮುಂತಾದ ಕ್ರೀಡೆಗಳು ಮಾತ್ರ ಹೆಚ್ಚಾಗಿ ನಡೆಯುವುದರಿಂದ ಫುಟ್ಬಾಲ್ ಆಟಗಾರರಿಗೆ ಅವಕಾಶ ದೊರಕುತ್ತಿಲ್ಲ. ಹಾಗಾಗಿ ಈ ಒಂದು ಪಂದ್ಯಾವಳಿಯನ್ನು ಆಯೋಜಿಸುತ್ತಿರುವುದಾಗಿ ಮಾಹಿತಿ ನೀಡಿದರು.

ಬಹುಮಾನಗಳು

ಪಂದ್ಯಾವಳಿಯ ಕಾರ್ಯದರ್ಶಿ ಭಜನ್ ಭೂಪಣ್ಣ ಮಾತನಾಡಿ, ನಾಕೌಟ್ ಮಾದರಿಯಲ್ಲಿ ೨೦ ನಿಮಿಷಗಳ ಕಾಲಾವಧಿಯಲ್ಲಿ ಪ್ರತಿದಿನ ಒಟ್ಟು ೧೬ ಪಂದ್ಯಾವಳಿಗಳು ನಡೆಯಲಿವೆ. ವಿಜೇತ ತಂಡಕ್ಕೆ ರೂ. ೫೦,೦೦೦ ನಗದು ಹಾಗೂ ಟ್ರೋಫಿ ದ್ವಿತೀಯ ಸ್ಥಾನಕ್ಕೆ ರೂ. ೩೦,೦೦೦ ಹಾಗೂ ದ್ವಿತೀಯ ಸ್ಥಾನಕ್ಕೆ ರೂ. ೨೦,೦೦೦ ನಗದು ಹಾಗೂ ಟ್ರೋಫಿ ವಿತರಣೆ ಮಾಡಲಾಗುವುದೆಂದು ತಿಳಿಸಿದರು. ಗೋಷ್ಠಿಯಲ್ಲಿ ಪಂದ್ಯಾವಳಿಯ ಅಧ್ಯಕ್ಷ ಮುಕ್ಕಾಟಿರ ಮಧು ದೇವಯ್ಯ, ಪದಾಧಿಕಾರಿಗಳಾದ ಉತ್ತಂ ಬೋಪಣ್ಣ, ರವಿಕುಮಾರ್ ಇದ್ದರು.