*ಗೋಣಿಕೊಪ್ಪ, ಮಾ. ೧೭: ಹೋಂಸ್ಟೇ ರೆಸಾರ್ಟ್, ಲಾಡ್ಜ್ ಮಾಲೀಕರು ಪ್ರವಾಸಿಗರ ಭದ್ರತೆಯ ಕುರಿತು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಗೋಣಿಕೊಪ್ಪ ವೃತ ನಿರೀಕ್ಷಕ ಶಿವರಾಜ್ ಆರ್. ಮುಧೋಳ ಸೂಚಿಸಿದರು.
ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ನಡೆದ ಹೋಂ ಸ್ಟೇ ರೆಸಾರ್ಟ್, ಲಾಡ್ಜ್ ಮಾಲೀಕರುಗಳಿಗೆ ಕಾನೂನು ಪಾಲನೆ ಸಲಹೆ, ಸೂಚನೆ ಸಭೆಯಲ್ಲಿ ಮಾತನಾಡಿದರು.
ಕಾನೂನು ಸುರಕ್ಷತೆ, ಅಕ್ರಮ ಚಟುವಟಿಕೆ, ಮಾದಕ ದ್ರವ್ಯಗಳು ನಿರ್ಬಂಧಿಸುವAತೆ ತಿಳಿಸಲಾಯಿತು. ಪ್ರವಾಸಿಗರ ಭದ್ರತೆಯ ಕುರಿತು ಹೆಚ್ಚಿನ ಗಮನ ಹರಿಸುವಂತೆ ಹೊಂ ಸ್ಟೇ ಮತ್ತು ರೆಸಾರ್ಟ್ಗಳಿಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಮತ್ತು ಸ್ಥಳೀಯ ಪ್ರವಾಸಿಗರ ದಾಖಲಾತಿಯನ್ನು ಪಡೆದು ಅವರ ಚಲನವಲನಗಳ ಮೇಲೆ ನಿಗಾ ಇಡಬೇಕೆಂದು ತಿಳಿಸಿದರು. ಪೊಲೀಸ್ ಉಪನಿರೀಕ್ಷಕ ಪ್ರದೀಪ್ ಕುಮಾರ್ ಮತ್ತು ಸಿಬ್ಬಂದಿಗಳು, ಹಾಜರಿದ್ದರು.