ನಾಪೋಕ್ಲು, ಮಾ. ೧೬: ಎಮ್ಮೆಮಾಡು ಗ್ರಾಮ ವ್ಯಾಪ್ತಿಯಲ್ಲಿ ಭಾನುವಾರ ಆಲಿಕಲ್ಲು ಸಹಿತ ಮಳೆ ಸುರಿದಿದೆ.

ಕೆಲವು ದಿನಗಳಿಂದ ಬಿಸಿಲಿನ ಧಗೆ ಹೆಚ್ಚಿದ್ದು ಭಾನುವಾರ ಸಂಜೆಯಾಗುತ್ತಿದ್ದAತೆ ಮಳೆಯ ವಾತಾವರಣ ನಿರ್ಮಾಣವಾಗಿ ಭೂಮಿ ತಂಪಾಗಿದೆ. ಅಯ್ಯಂಗೇರಿ, ದೊಡ್ಡಪುಲಿಕೋಟು ೧೨ ರಿಂದ ೪೦ ಸೆಂಟ್, ಬಲ್ಲಮಾವಟ್ಟಿ ವ್ಯಾಪ್ತಿಯಲ್ಲಿ ೮೫ ಸೆಂಟ್‌ದಿAದ ೧.೧೦ ಇಂಚು ಮಳೆಯಾಗಿದೆ. ಚೋನಕೆರೆ ೪೫ ಸೆಂಟ್, ಹಳೆತಾಲೂಕಿನಲ್ಲಿ ೨೩ ಸೆಂಟ್, ಚೇರಂಬಾಣೆ ಬೇಂಗೂರು ೪೦ಸೆಂಟ್ ಎಮ್ಮೆಮಾಡು ಗ್ರಾಮದಲ್ಲಿ ಆಲಿಕಲ್ಲು ಸಹಿತ ೮೦ ಸೆಂಟ್ಸ್ ಮಳೆಯಾಗಿದೆ. ನಾಪೋಕ್ಲು ಪಟ್ಟಣಕ್ಕೆ ಮಳೆಯಾಗಿಲ್ಲ.

ತಾ. ೧೨ ರಂದು ವರ್ಷದ ಪ್ರಥಮ ಮಳೆಯಾಗಿತ್ತು. ಇದು ವರ್ಷದ ಎರಡನೇ ಮಳೆಯಾಗಿದೆ. ಇದೀಗಾಗಲೇ ಕಾಫಿ ಬೆಳೆಗಾರರು ತೋಟಗಳಿಗೆ ಮೋಟಾರ್ ಮೂಲಕ ನೀರು ಹಾಯಿಸುತ್ತಿದ್ದು ಈ ದಿನದ ಮಳೆ ಬೆಳೆಗಾರರಿಗೆ ಆಶಾದಾಯಕವಾಗಿದೆ.

- ದುಗ್ಗಳ