ಮಡಿಕೇರಿ, ಮಾ. ೧೬: ಬಾಡಗರಕೇರಿಯಲ್ಲಿರುವ ಶ್ರೀ ಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಉತ್ಸವ ಜರುಗುತ್ತಿದ್ದು ತಾ. ೧೭ ರಂದು (ಇಂದು) ಸಂಜೆ ೫ ಗಂಟೆಗೆ ನೆಂಪು ದೇವರ ದರ್ಶನ ಸಂಜೆ ೬.೩೦ ರಿಂದ ಪೊನ್ನಂಪೇಟೆಯ ಅಮ್ಮಕೊಡವ ಕಾವೇರಿ ಮಹಿಳಾ ಸಂಘ ಪೊನ್ನಂಪೇಟೆ ಇವರ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ೮ ಗಂಟೆಗೆ ಶ್ರೀ ವಿಷ್ಣುದೇವರ ಅಲಂಕಾರ ಪೂಜೆ, ಪ್ರಸಾದ ವಿತರಣೆ ಅನ್ನದಾನವಿದೆ.

ಅಂತಿಮ ದಿನವಾದ ತಾ.೧೮ರಂದು (ನಾಳೆ) ಬೆಳಿಗ್ಗೆ ೧೦ ರಿಂದ ನಿತ್ಯಪೂಜೆ ಮತ್ತಿತರ ಕೈಂಕರ್ಯಗಳು, ಅಪರಾಹ್ನ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಸಂಜೆ ೫ಕ್ಕೆ ದೇವರ ದರ್ಶನ ಅವಭೃತಸ್ನಾನ, ರಾತ್ರಿ ದೇವರ ದರ್ಶನ, ವಸಂತ ಪೂಜೆ ಜರುಗಲಿದೆ.

ಇದರ ನಡುವೆ ಸಂಜೆ ೪ ರಿಂದ ಗೊಂಬೆಯಾಟ, ಚೆಕ್ಕೇರ ಪಂಚಮ್ ತ್ಯಾಗರಾಜ್‌ರಿಂದ ಹಾಡುಗಾರಿಕೆ, ಬೇಗೂರು ಪೂಳೆಮಾಡು ಈಶ್ವರ ಕೊಡವ ಸಾಂಸ್ಕೃತಿಕ ತಂಡದಿAದ ಬೊಳಕಾಟ್, ಕತ್ತಿಯಾಟ್, ಪೊರಾಡ್‌ನ ಮಕ್ಕಳಿಂದ ತಾಲಿಪಾಟ್‌ನಂತಹ ಕಾರ್ಯಕ್ರಮಗಳು ಜರುಗಲಿವೆ.