ಚೆಯ್ಯಂಡಾಣೆ, ಮಾ. ೧೬: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ನರಿಯಂದಡ, ಕೋಕೇರಿ, ಚೇಲಾವರ ಗ್ರಾಮದ ಗ್ರಾಮಸ್ಥರ ಬಂದೂಕು ಪರವಾನಗಿ ನವೀಕರಿಸುವ ಸಲುವಾಗಿ ತಾ.೧೯ ರಂದು ಬೆಳಿಗ್ಗೆ ೧೧ ಗಂಟೆಗೆ ನರಿಯಂದಡ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಾಪೋಕ್ಲು ಪೊಲೀಸ್ ಠಾಣೆ ಸಿಬ್ಬಂದಿಗಳು ಹಾಜರಿದ್ದು ಬಂದೂಕು ಪರವಾನಗಿ ನವೀಕರಿಸಲಿದ್ದಾರೆ. ಇದರ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳುವಂತೆ ಗ್ರಾಮ ಪಂಚಾಯಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.