ವೀರಾಜಪೇಟೆ, ಮಾ. ೧೬: ಖಾಸಗಿ ಬಸ್ ಮತ್ತು ಆಟೋಗಳ ಚಾಲನೆಯ ನಿರ್ವಹಣೆಯು ಸಮಾಜಕ್ಕೆ ಪೂರಕವಾಗಿರಬೇಕು ವಿನಾ ಮಾರಕವಾಗಿರಬಾರದು ಎಂದು ವೀರಾಜಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹೇಳಿದರು.

ನಗರದ ಮೀನುಪೇಟೆಯಲ್ಲಿರುವ ಆರಕ್ಷಕ ಸಮುಚ್ಚಯ ಆವರಣದಲ್ಲಿ ಖಾಸಗಿ ಬಸ್ ಮಾಲೀಕರು, ಕಾರ್ಮಿಕರು ಹಾಗೂ ಅಟೋ ಚಾಲಕರುಗಳ ಸಭೆಯನ್ನು ಏರ್ಪಡಿಸಲಾಗಿತ್ತು.

ನಗರದಲ್ಲಿ ಆಟೋ ಚಾಲಕರ ಸಮಸ್ಯೆ ಮತ್ತು ಖಾಸಗಿ ಬಸ್‌ಗಳ ಮಾಲೀಕರು ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದ ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಜ್ಯೂಡಿ ವಾಜ್ ಅವರು ಖಾಸಗಿ ಬಸ್ ನಿಲ್ದಾಣದಲ್ಲಿ ದಿನದಿಂದ ದಿನಕ್ಕೆ ಬಸ್‌ಗಳಿಗಿಂತ ಖಾಸಗಿ ವಾಹನಗಳ ನಿಲುಗಡೆ ಹೆಚ್ಚಾಗುತ್ತಿದೆ. ಇದರಿಂದ ಬಸ್‌ಗಳ ನಿಲುಗಡೆಗೆ ತೊದರೆಯಾಗುತ್ತಿದೆ. ವಾಹನ ನಿಲುಗಡೆಯನ್ನು ನಿಷೇಧ ಮಾಡಬೇಕು. ಬಸ್ಸ್ ನಿಲ್ದಾಣದಲ್ಲಿ ಸಮಾಜಕ್ಕೆ ಬಾಧÀಕವಾಗುವ ಅಹಿತಕರ ಘಟನೆಗಳು ಸಂಭವಿಸಿರುತ್ತದೆ. ಘಟನೆಗಳ ಕಣ್ಗಾವಲು ಮಾಡಲು ಸಿ.ಸಿ ಕ್ಯಾಮರ ಅಳವಡಿಸಿ ಎಂದು ಮನವಿ ಮಾಡಿದರು.

ಆಟೋ ಚಾಲಕರ ಸಂಘದ ಪ್ರಮುಖ ಜೀವನ್ ಅವರು ಮಾತನಾಡಿ, ನಗರದಲ್ಲಿರುವ ಆಟೋಗಳಿಗೆ ೧೫ ಕಿ.ಮಿ ವ್ಯಾಪ್ತಿಯಲ್ಲಿ ಚಾಲನೆಗೆ ಸಾರಿಗೆ ಇಲಾಖೆಯ ಅನುಮತಿಯಿದೆ. ಆದರೆ ಆಟೋಗಳು ಸವಾರಿಗೆಂದು ತೆರಳಿದ್ದಲ್ಲಿ ಇಲಾಖೆ ದಂಡ ವಿಧಿಸುತ್ತ್ತಿದೆ. ಈ ಸಮಸ್ಯೆಯನ್ನು ಇಲಾಖೆಯು ಬಗೆಹರಿಸಬೇಕು ಎಂದು ಹೇಳಿದರು. ಸಭೆಯ ಅಧÀ್ಯಕ್ಷತೆ ವಹಿಸಿ ಮಾತನಾಡಿದ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತನೆ ಮಾಡಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಆಟೋಗಳು ಖಾಸಗಿ ಬಸ್ ಸಾರ್ವಜನಿಕರ ವಲಯದಲ್ಲಿದೆ. ಬಸ್‌ಗಳನ್ನು ಮತ್ತು ಆಟೋಗಳನ್ನು ನಂಬಿ ನೂರಾರು ಮಂದಿ ಕಾರ್ಮಿಕರು ಜೀವನ ಸಾಗಿಸುತಿದ್ದಾರೆ. ದ್ವೇಷ ಸಾಧನೆಯಿಂದ ಯಾವುದನ್ನು ಸಾಧಿಸಲಾಗದು ಎಂದು ಹೇಳಿದರು. ನಿಲ್ದಾಣದಲ್ಲಿ ಬಸ್‌ಗಳಿಗೆ ನಿಲುಗಡೆಗೆ ೨೦ ನಿಮಿಷಗಳಿಗಿಂತ ಹೆಚ್ಚಿನ ಕಾಲಾವಕಾಶ ನೀಡಲಾಗುವುದಿಲ್ಲ. ಪುರಸಭೆಯು ನಗರದಲ್ಲಿ ನಿಲುಗಡೆ ಶುಲ್ಕ ನಿಗದಿಗೊಳಿಸಿ ಸಂಗ್ರಹಕರಿAದ ಹಣ ಎತ್ತುವಳಿ ಮಾಡಲಾಗುತ್ತಿದೆ. ಪುರಸಭೆಯ ಚುನಾಯಿತ ಪ್ರತಿನಿಧಿಗಳು ಹಾಗೂ ಪುರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗುತ್ತೇವೆ ಎಂದು ಹೇಳಿದರು.

ಸಭೆಯಲ್ಲಿ ಖಾಸಗಿ ಬಸ್ ಮಾಲೀಕರ ಸಂಘದ ಜಿಲ್ಲಾ ಉಪಾಧÀ್ಯಕ್ಷ ಅಮ್ಮಣಕುಟ್ಟಂಡ ಬೋಪಣ್ಣ, ಜೈ ಭಾರತ್ ಆಟೋ ಚಾಲಕರ ಸಂಘ ವೀರಾಜಪೇಟೆ ಅಧ್ಯಕ್ಷ ಬೀಕಚಂಡ ಪುಟ್ಟ ಬೆಳ್ಯಪ್ಪ, ವೀರಾಜಪೇಟೆ ಖಾಸಗಿ ಬಸ್ ಕಾರ್ಮಿಕರ ಸಂಘದ ಅಧÀ್ಯಕ್ಷ ಕುಂಬೇಯAಡ ಸುರೇಶ್ ದೇವಯ್ಯ. ವೀರಾಜಪೇಟೆ ನಗರ ಠಾಣೆಯ ಪಿ.ಎಸ್.ಐ. ವಾಣಿಶ್ರೀ ಮತ್ತು ಗ್ರಾಮಾಂತರ ಆರಕ್ಷಕ ಠಾಣೆಯ ಪಿ.ಎಸ್.ಐ. ಎನ್.ಕೆ. ಲತಾ ಹಾಗೂ ಕೊಡಗು ಜಿಲ್ಲಾ ಖಾಸಗಿ ಬಸ್ ಕಾರ್ಮಿಕರ ಸಂಘದ ಪದಾಧಿಕಾರಿಗಳು, ಮಾಲೀಕರು ಕಾರ್ಮಿಕರು, ನೂರಕ್ಕೂ ಅಧಿಕ ಮಂದಿ ಆಟೋ ಚಾಲಕರು ಸಭೆಯಲ್ಲಿ ಹಾಜರಿದ್ದರು.