ಸಿದ್ದಾಪುರ. ಮಾ. ೧೬: ತ್ಯಾಗತ್ತೂರು ವಾಲ್ನೂರು ಗ್ರಾಮದ ಶ್ರೀ ಭಗವತಿ ದೇವಾಲಯದ ವಾರ್ಷಿಕೋತ್ಸವ ವಿವಿಧ ಪೂಜಾ ಕೈಂಕರ್ಯ ಗಳೊಂದಿಗೆ ತಾ ೨೪ ರಿಂದ ೨೭ ರವರೆಗೆ ನಡೆಯಲಿದೆ ಎಂದು ದೇವಾಲಯ ಅಧ್ಯಕ್ಷ ಮುಂಡ್ರುಮನೆ ಶಿವಕುಮಾರ್ ತಿಳಿಸಿದ್ದಾರೆ.

ತಾ. ೨೪ ರಂದು ಸಂಜೆ ತಕ್ಕರ ಮನೆಯಿಂದ ಭಂಡಾರ ಇಳಿಸುವುದು ಶ್ರೀದೇವಿ ಬಲಿ. ಮಹಾಪೂಜೆ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ತಾ೨೫ರಂದು ಮಧ್ಯಾಹ್ನ ೩ ಗಂಟೆಯಿAದ ಪಟ್ಟಣಿ, ಎತ್ತು ಹೇರು, ಶ್ರೀದೇವಿ ಬಲಿ, ಅಲಂಕಾರ ಪೂಜೆ, ಮಹಾಪೂಜೆ, ತೀರ್ಥ ಪ್ರಸಾದ ಅನ್ನಸಂತರ್ಪಣೆ ನಡೆಯಲಿದೆ. ತಾ. ೨೬ರಂದು ಬೆಳಿಗ್ಗೆ ೧೦.೩೦ ಗಂಟೆಯಿAದ ತುಲಾಭಾರ ಸೇವೆಗಳು. ೧೨ ಗಂಟೆಗೆ ಮಹಾಪೂಜೆ ತೀರ್ಥ ಪ್ರಸಾದ ಮಧ್ಯಾಹ್ನ ೩ ಗಂಟೆಯಿAದ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಶ್ರೀದೇವಿ ಬಲಿ, ಅವಭೃತ ಸ್ನಾನ.

ಶ್ರೀ ದೇವಿಯ ಬಳಿ ನೃತ್ಯ, ಅಲಂಕಾರ ಪೂಜೆ ಮಹಾಪೂಜೆ, ತೀರ್ಥ ಪ್ರಸಾದ ಅನ್ನಸಂತರ್ಪಣೆ ನಡೆಯಲಿದೆ. ತಾ.೨೭ರಂದು ಬೆಳಿಗ್ಗೆ ೯ ಗಂಟೆಯಿAದ ಶುದ್ಧ ಕಳಶ. ಮಹಾಪೂಜೆ ತೀರ್ಥ ಪ್ರಸಾದ ಮಧ್ಯಾಹ್ನ ೧ ಗಂಟೆಗೆ ಅನ್ನಸಂಪರ್ಪಣೆ ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.