ಸೋಮವಾರಪೇಟೆ, ಮಾ. ೧೪: ಅಖಿಲ ಭಾರತ ಸಾಹಿತ್ಯ ಪರಿಷತ್‌ನ ಕೊಡಗು ಜಿಲ್ಲಾ ಘಟಕದಿಂದ ಸ್ವತ್ವಯುತ ಸಾಹಿತಿಗಳ ಸಂಪರ್ಕ ಅಭಿಯಾನ ಅಂಗವಾಗಿ ಹಿರಿಯ ಸಾಹಿತಿಗಳ ಮನೆಗೆ ಭೇಟಿ ಕಾರ್ಯಕ್ರಮ ನಡೆಯಿತು.

ಜಿಲ್ಲೆಯ ಹಿರಿಯ ಸಾಹಿತಿಗಳಾದ ಗಿರೀಶ್ ಕಿಗ್ಗಾಲು ಮತ್ತು ಜಲಾ ಕಾಳಪ್ಪನವರ ನಿವಾಸಕ್ಕೆ ತೆರಳಿ ಸನ್ಮಾನಿಸಿ, ರಾಜ್ಯ ಸಮಾವೇಶಕ್ಕೆ ಆಹ್ವಾನಿಸಲಾಯಿತು.

ಪ್ರಾಂತ್ಯ, ಭಾಷೆಗಳನ್ನು ಮೀರಿ ಸಾಹಿತ್ಯ ಬಲವರ್ಧನೆಯನ್ನು ಭಾರತದಲ್ಲಿ ಒಗ್ಗೂಡಿಸಿ ವೃದ್ಧಿಸುವ ನಿಟ್ಟಿನಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷತ್ ಕಾರ್ಯನಿರ್ವಹಿಸುತ್ತಿದ್ದು, ಈ ನಿಟ್ಟಿನಲ್ಲಿ ಪ್ರಸಕ್ತ ವರ್ಷ ದಾವಣಗೆರೆಯಲ್ಲಿ ಜೂನ್ ೭ ಮತ್ತು ೮ ರಂದು ನಡೆಯುವ ಅಭಾಸಾಪದ ರಾಜ್ಯ ಸಮಾವೇಶಕ್ಕೆ ಹಿರಿಯ ಸಾಹಿತಿಗಳನ್ನು ಆಹ್ವಾನಿಸಲಾಗುತ್ತಿದೆ ಎಂದು ಪರಿಷತ್‌ನ ಅಧ್ಯಕ್ಷ ಬಿ.ಎಸ್. ಲೋಕೇಶ್‌ಸಾಗರ್ ತಿಳಿಸಿದರು.

ಈ ಸಂದರ್ಭ ಕಾರ್ಯದರ್ಶಿ ಚೌಡ್ಲು ಮನೆ ತಮ್ಮಯ್ಯ, ನಿರ್ದೇಶಕ ಸಿ.ಎನ್. ಸುರೇಶ್, ಸಹ ಕಾರ್ಯದರ್ಶಿ ಹೇಮಂತ್ ಪಾರೇರಾ ಅವರುಗಳು ಉಪಸ್ಥಿತರಿದ್ದರು.