ಮಡಿಕೇರಿ, ಮಾ. ೧೪ : ವೀರಾಜಪೇಟೆ ೬೬/೩೩/೧೧ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಂಡಿರುವುದರಿAದ ಈ ಕೇಂದ್ರದಿAದ ಹೊರಹೊಮ್ಮುವ ೩೩/೧೧ ಕೆ.ವಿ ಸಿದ್ದಾಪುರ ಹಾಗೂ ಮುರ್ನಾಡು ಮಾರ್ಗದಲ್ಲಿ ತಾ. ೧೫ ರಂದು (ಇಂದು) ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸ ಲಾಗುವುದು.

ಆದ್ದರಿಂದ ಸಿದ್ದಾಪುರ, ಗುಹ್ಯ, ಮಾಲ್ದಾರೆ, ಕರಡಿಗೋಡು, ಇಂಜಲಗೆರೆ, ಮೇಕೂರು, ಮೂರ್ನಾಡು, ಪಾರಾಣೆ, ಮರಗೋಡು, ಹಾಕತ್ತೂರು, ಹೊಸ್ಕೇರಿ, ಹೊದ್ದೂರು, ನರಿಯಂದಡ, ನಾಪೋಕ್ಲು, ಕುಂಜಿಲ, ಎಮ್ಮೆಮಾಡು, ಬಲ್ಲಮಾವಟಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.