ಮಡಿಕೇರಿ, ಮಾ. ೧೪ : ಕೊಡಗು ಪತ್ರಕರ್ತರ ಸಂಘ (ರಿ) ದ ನೂತನ ಅಧ್ಯಕ್ಷರಾಗಿ ಅನಿಲ್ ಎಚ್.ಟಿ. ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಬಿಳಿಗೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಹಾಲಿ ಅಧ್ಯಕ್ಷ ಎಸ್.ಎ. ಮುರಳೀಧರ್ ಅಧ್ಯಕ್ಷತೆಯಲ್ಲಿ ನಡೆದÀ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಹಿರಿಯ ಸಲಹೆಗಾರ ಟಿ.ಪಿ.ರಮೇಶ್ ಅವರು ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದ ಸರ್ವ ಸದಸ್ಯರ ಒಪ್ಪಿಗೆ ಪಡೆದು ನೂತನ ಆಡಳಿತ ಮಂಡಳಿಗೆ ಪದಾಧಿಕಾರಿಗಳ ಹೆಸರನ್ನು ಪ್ರಕಟಿಸಿದರು.
ಉಪಾಧ್ಯಕ್ಷರಾಗಿ ತೇಲಪಂಡ ಕವನ್ ಕಾರ್ಯಪ್ಪ, ಕೋಶಾಧಿಕಾರಿ ಟಿ.ಕೆ. ಸಂತೋಶ್, ಕ್ಷೇಮನಿಧಿ ಅಧ್ಯಕ್ಷರಾಗಿ ಜಿ.ವಿ. ರವಿಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಅರುಣ್ ಕೂರ್ಗ್, ಸಂಘದ ಸಹ ಕಾರ್ಯದರ್ಶಿಯಾಗಿ ಪ್ರಸಾದ್ ಸಂಪಿಗೆಕಟ್ಟೆ, ಖಾಯಂ ಆಹ್ವಾನಿತರಾಗಿ ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್.ಎ. ಮುರಳೀಧರ್ ಅವರನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಸಮಿತಿ ನಿರ್ದೇಶಕರಾಗಿ ಉಜ್ವಲ್ ರಂಜಿತ್, ಟಿ.ಜಿ. ಸತೀಶ್, ಟಿ.ಜೆ. ಪ್ರವೀಣ್ ಕುಮಾರ್, ರಂಜಿತ್ ಕವಲಪಾರ, ಸಯ್ಯದ್ ಇರ್ಫಾನ್, ಎಚ್.ಎನ್. ಲಕ್ಷೀಶ್, ಗುರುದರ್ಶನ್, ಪಿ.ವಿ. ಪ್ರಭಾಕರ್, ಕುಡೆಕಲ್ ಸಂತೋಷ್, ವತ್ಸಲ, ರಾಣಿ ಅರುಣ್, ಮಹಮದ್ ಹನೀಫ್, ಎಂ.ಎನ್. ನಾಸಿರ್, ಅಶ್ವಥ್, ನಾಮನಿರ್ದೇಶಿತ ನಿರ್ದೇಶಕರಾಗಿ ಎಸ್.ಜಿ. ಉಮೇಶ್, ವಿಶ್ವಕುಮಾರ್, ಟಿ.ಸಿ. ನಾಗರಾಜ್, ಶಿವಪ್ಪ ಆಯ್ಕೆಯಾಗಿದ್ದಾರೆ. ಸಂಘದ ಗೌರವ ಸಲಹೆಗಾರರಾಗಿ ಟಿ.ಪಿ. ರಮೇಶ್, ಬಿ.ಜಿ. ಅನಂತಶಯನ ಆಯ್ಕೆಯಾಗಿದ್ದಾರೆ.
ಸಂಘದ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭವು ಮಡಿಕೇರಿಯ ರೆಡ್ ಬ್ರಿಕ್ಸ್ ಇನ್‌ನ ಸತ್ಕಾರ ಸಭಾಂಗಣದಲ್ಲಿ ಮಾ. ೨೨ರಂದು ಸಂಜೆ ೬ ಗಂಟೆಗೆ ಆಯೋಜಿತವಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.