ಮಡಿಕೇರಿ, ಮಾ. ೧೫: ಆರ್.ಜಿ. ಗ್ರೂಪ್ ಮ್ಯಾಜಿಕ್ ಗೆಳೆಯರ ಬಳಗ ರಾಜೇಶ್ ಅವರ ಮಗಳ ಹುಟ್ಟುಹಬ್ಬದ ಪ್ರಯುಕ್ತ ಮತ್ತು ಗ್ರಾಮದ ಪುನಿತ್ ಅವರ ಜ್ಞಾಪಕಾರ್ಥವಾಗಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಮಾದರಿಯಾಗಿದ್ದಾರೆ. ಅಮ್ಮತ್ತಿ ಪಟ್ಟಣದಲ್ಲಿ ಸುತ್ತಮುತ್ತಲಿನ ಗ್ರಾಮಗಳಿಂದ ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ನೀರಿನ ಸಮಸ್ಯೆ ಎದುರಿಸಬೇಕಾಗುತ್ತಿತ್ತು. ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಮ್ಯಾಜಿಕ್ ಗೆಳೆಯರ ಬಳಗದ ಪ್ರಮುಖರು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ.
ಪಂಚಾಯಿತಿ ವತಿಯಿಂದ ಕುಡಿಯುವ ನೀರಾಗಲಿ, ಶೌಚಾಲಯ ಅಗಲಿ ಅಮ್ಮತ್ತಿಯಲ್ಲಿ ಇರುವುದಿಲ್ಲ. ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗಿದೆ. ಕೂಡಲೇ ಸಂಬAಧಪಟ್ಟವರು ಇದರ ಬಗ್ಗೆ ಕಾಳಜಿ ವಹಿಸಬೇಕೆಂದು ಗೆಳೆಯರ ಬಳಗದ ಪ್ರಮುಖರು ಒತ್ತಾಯಿಸಿದರು. ಮ್ಯಾಜಿಕ್ ಮಾಂತ್ರಿಕ ರಾಜೇಶ್ ನೇತೃತ್ವದ ಗೆಳೆಯರ ಬಳಗ ನೀರಿನ ವ್ಯವಸ್ಥೆ ಮಾಡಿ ಮಾದರಿಯಾಗಿದ್ದಾರೆ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ತಂಗಮಣಿ, ಸಜಿರ್, ರೋಶನ್, ರನನ್ಯ, ರಾಜೇಶ್, ಹೆರಾಲ್ಡ್ ಸೇರಿದಂತೆ ಮತ್ತಿತರರು ಹಾಜರಿದ್ದರು.