ಮಡಿಕೇರಿ, ಮಾ. ೧೫: ಹೋಂ ಸ್ಟೇ ನೋಂದÀಣಿಗೆ ನಿಯಮಗಳನ್ನು ಅತ್ಯಂತ ಸರಳೀಕರಣ ಮಾಡಿದ್ದರೂ ಈ ಬಗ್ಗೆ ನಿರ್ಲಕ್ಷö್ಯ ಮಾಡಿ ನೋಂದಣಿ ಮಾಡಿಸದ ಹೋಂಸ್ಟೇಗಳ ವಿರುದ್ಧ ಪೊಲೀಸ್ ಇಲಾಖೆ ಶೀಘ್ರವೇ ಕ್ರಮ ಕೈಗೊಳ್ಳಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ ರಾಮರಾಜನ್ ಎಚ್ಚರಿಸಿದ್ದಾರೆ.

ಮಡಿಕೇರಿ ತಾಲೂಕು ವ್ಯಾಪ್ತಿಯ ಹೋಂ ಸ್ಟೇಗಳು ಹಾಗೂ ವಸತಿಗೃಹಗಳ ಮಾಲೀಕರ ಸಭೆಯನ್ನು ಉದ್ದೇಶಿಸಿ ನಗರದ ಮೈತ್ರಿ ಹಾಲ್‌ನಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ಈ ಹಿಂದೆ ನೋಂದಾವಣೆಗೆ ೧೮ ಷರತ್ತುಗಳನ್ನು ವಿಧಿಸಿದ್ದು, ಇದೀಗ ಕೇವಲ ಮೂರು ನಿಯಮಗಳನ್ನು ಮಾತ್ರ ಅನುಸರಿಸಲು ಆದೇಶಿಸಲಾಗಿದೆ. ಈ ನಿಯಮ ಸಡಿಲಿಕೆಯ ಹಿಂದೆ ಎಲ್ಲಾ ಹೋಂ ಸ್ಟೇಗಳು ಕೂಡ ಅಧಿಕೃತವಾಗಿ ಕಾರ್ಯನಿರ್ವಹಿಸುವುದರೊಂದಿಗೆ ಆದಾಯ ಕೂಡ ಎಲ್ಲರಿಗೂ ವಿಂಗಡಣೆ ಆಗಬೇಕೆಂಬ ಸದುದ್ದೇಶ ಇದೆ. ಆ ಮೂಲಕ ಗ್ರಾಮೀಣ ಪ್ರದೇಶದಲ್ಲೂ ಯುವ ಜನಾಂಗಕ್ಕೆ ಉದ್ಯೋಗ ಅವಕಾಶ ಲಭಿಸುವ ದೃಷ್ಟಿಕೋನವನ್ನು ಹೊಂದಲಾಗಿದೆ ಎಂದರು.

ಅನಧಿಕೃತ ಹೋಂ ಸ್ಟೇಗಳಲ್ಲಿ ಪ್ರವಾಸಿಗರು

(ಮೊದಲ ಪುಟದಿಂದ) ಅಥವಾ ಬೇರೆ ಯಾರಿಂದಲೇ ಆಗಲಿ ಅಪರಾಧಗಳು ಕಂಡು ಬಂದಲ್ಲಿ ಅದರ ಮಾಲೀಕರುಗಳನ್ನೇ ಹೊಣೆ ಮಾಡಲಾಗುವುದು ಎಂದು ಎಸ್ಪಿ ಎಚ್ಚರಿಸಿದರು. ತಮ್ಮ ಕಚೇರಿಯಲ್ಲಿ ಪ್ರತಿ ವಾರ ಹೋಂಸ್ಟೇಗಳ ನೋಂದಣಿ ಬಗ್ಗೆ ವಿಮರ್ಶೆ ಮಾಡಲಾಗುತ್ತಿದ್ದು, ಎಲ್ಲಾ ಹೋಂ ಸ್ಟೇಗಳಲ್ಲಿಯೂ ಸಿಸಿಟಿವಿ ಮತ್ತು ನೋಂದಣಿ ಪುಸ್ತಕವನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ತಿಳಿಸಿದರು.

ಹೋಂಸ್ಟೇಗಳು ಅಥವಾ ಇತರೆ ಯಾವುದೇ ರೀತಿಯ ವಸತಿಗೃಹಗಳಲ್ಲಿ ಪ್ರವಾಸಿಗರಿಗಿಂತ ಹೆಚ್ಚಾಗಿ ಮಾಲೀಕರುಗಳು ಅತ್ಯಂತ ತಾಳ್ಮೆಯಿಂದ ಇರಬೇಕಾಗಿದ್ದು ಪ್ರವಾಸಿಗರು ತೊಂದರೆ ಮಾಡಿದರೆ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿದ್ದಲ್ಲಿ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿಯೂ ಭರವಸೆ ನೀಡಿದರು. ಸುಸ್ಥಿರ, ಮತ್ತು ಕಾನೂನು ಬದ್ಧ ಪ್ರವಾಸೋದ್ಯಮವನ್ನು ಉತ್ತೇಜಿಸಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಮಾತನಾಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್ ಅವರು, ಜಿಲ್ಲೆಯಲ್ಲಿ ಪ್ರವಾಸೋದ್ಯಮ ವ್ಯಾಪಕವಾಗಿ ಬೆಳೆದಿದ್ದು ಅದನ್ನು ಕೇವಲ ವ್ಯಾಪಾರದ ದೃಷ್ಟಿಯಿಂದ ಕಾಣದೆ ಸೇವೆಯ ರೀತಿ ಪರಿಗಣಿಸುವಂತೆ ಕಿವಿ ಮಾತು ಹೇಳಿದರು. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ಕಂಡು ಬಂದಲ್ಲಿ ಕೊಡಗಿಗೆ ಕಪ್ಪು ಚುಕ್ಕೆ ಉಂಟಾಗುವುದಲ್ಲದೆ ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರ ಬಗ್ಗೆ ಕಳಕಳಿ ವ್ಯಕ್ತಪಡಿಸಿದರು.

ಪ್ರವಾಸಿಗರು ತಂಗಲು ಬಂದಾಗ ಎಲ್ಲಾ ಪ್ರವಾಸಿಗರ ಗುರುತಿನ ಚೀಟಿಯನ್ನು ಪಡೆಯುವುದು ಒಳಿತು ಎಂಬ ಸಲಹೆ ನೀಡಿದರಲ್ಲದೆ,ಜಿಲ್ಲೆಯಾದ್ಯಂತ ಪಹರೆ ಪೊಲೀಸರ ಮೂಲಕ ಅನಧಿಕೃತ ಹೋಂ ಸ್ಟೇಗಳನ್ನು ಪತ್ತೆ ಹಚ್ಚಿ ಅವುಗಳ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಅನಿತಾ ಭಾಸ್ಕರ್ ಅವರು ಮಾತನಾಡಿ, ಕೊಡಗಿನ ಆತಿಥ್ಯಕ್ಕೆ ಬೇರೆ ಯಾವುದೇ ಪ್ರದೇಶ ಸರಿಸಾಟಿ ಆಗುವುದಿಲ್ಲ. ವರ್ಷಪ್ರತಿ ೪೫ ಲಕ್ಷ ಪ್ರವಾಸಿಗರು ಜಿಲ್ಲೆಗೆ ಬರುತ್ತಿದ್ದು ಇದನ್ನು ಪ್ರವಾಸಿ ಕೇಂದ್ರಗಳಲ್ಲಿ ಟಿಕೆಟ್ ಖರೀದಿ ಮತ್ತು ವಾಹನ ನಿಲುಗಡೆಯ ಟಿಕೆಟ್ ಖರೀದಿಗಳ ಆಧಾರದ ಮೇಲೆ ಪರಿಗಣಿಸಲಾಗಿದೆ. ಪ್ರತ್ಯೇಕವಾಗಿ ಕೇವಲ ಉಳಿದು ಹೋಗಲು ಕನಿಷ್ಟ ೧೫ ಲಕ್ಷ ಮಂದಿ ಪ್ರವಾಸಿಗರು ಜಿಲ್ಲೆಗೆ ಬರುತ್ತಿದ್ದಾರೆ. ಒಟ್ಟಿನಲ್ಲಿ ೬೦ ಲಕ್ಷ ಮಂದಿ ಕೊಡಗಿಗೆ ಆಗಮಿಸುತ್ತಿರುವ ಬಗ್ಗೆ ಅಂದಾಜು ಮಾಡಲಾಗಿದೆ.

ಇಂತಹ ಸಂದರ್ಭದಲ್ಲಿ ಸುಸ್ಥಿರ ಮತ್ತು ಕಾನೂನು ಪಾಲಿಸುವ ಪ್ರವಾಸೋದ್ಯಮ ತೀರ ಅಗತ್ಯ ಇದೆ ಎಂದು ಪ್ರತಿಪಾದಿಸಿದರು. ಸುಮಾರು ನಾಲ್ಕು ಸಾವಿರ ಹೋಂ ಸ್ಟೇಗಳಲ್ಲಿ ೫೦೦ ರಷ್ಟು ಮುಚ್ಚಿದ್ದು ೨,೨೨೯ ಹೋಂ ಸ್ಟೇಗಳು ನೋಂದಣಿ ಆಗಿವೆ. ಉಳಿದ ಹೋಂಸ್ಟೇಗಳು ಕೂಡಲೇ ಈ ನಿಟ್ಟಿನಲ್ಲಿ ಕಾರ್ಯೊನ್ಮುಖವಾಗಬೇಕು ಎಂದರಲ್ಲದೆ ಸರಕಾರ ಅತ್ಯಂತ ಸರಳವಾಗಿ ಕಾನೂನು ಜಾರಿ ಮಾಡಿದ್ದು, ನೀರು,ವಿದ್ಯುತ್ ಹಾಗೂ ಇತರ ಕ್ಷೇತ್ರಗಳಲ್ಲೂ ಕೂಡ ವಾಣಿಜ್ಯ ತೆರಿಗೆ ವಿಧಿಸದೆ ಹೋಂಸ್ಟೇಗಳ ನೆರವಿಗೆ ಸರಕಾರ ಧಾವಿಸಿದೆ ಎಂದರು.

ಕರ್ನಾಟಕದ ಇತರ ಭಾಗಗಳಲ್ಲಿ ಕಾಣದಿರುವ ಫೈವ್ ಸ್ಟಾರ್ ಹೊಟೇಲ್‌ಗಳು ಕೊಡಗು ಜಿಲ್ಲೆಯಲ್ಲಿದ್ದು ಇನ್ನೂ ಹಲವು ಪ್ರಖ್ಯಾತ ಸ್ಟಾರ್ ಹೋಟೆಲ್‌ಗಳು ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಲಿವೆ ಎಂದು ಮಾಹಿತಿ ನೀಡಿದರು. ಮಾಲೀಕರು ಇಲ್ಲದೆ ಬೇರೆಯವರು ನಡೆಸುತ್ತಿರುವ ವಸತಿಗೃಹಗಳನ್ನು ಬೇರೆ ರೀತಿ ನೋಂದಾವಣಿ ಮಾಡಲು ಅವಕಾಶವಿದ್ದು ತಮ್ಮ ಕಚೇರಿಯನ್ನು ಈ ಬಗ್ಗೆ ಸಂಪರ್ಕಿಸುವAತೆ ವಿವರ ನೀಡಿದರು.

ಪ್ರತಿಯೊಬ್ಬ ಪ್ರವಾಸಿಗರು ಬರುವ ಸಂದರ್ಭದಲ್ಲಿ ಮತ್ತು ಅವರು ತಂಗುವ ಸಂದರ್ಭದಲ್ಲಿ ಯಾವ ಪ್ರದೇಶಗಳಿಗೆ ತೆರಳುತ್ತಾರೆ ಮತ್ತು ಅವರುಗಳ ಚಲನವಲನದ ಬಗ್ಗೆ ವಸತಿಗೃಹಗಳು ಮತ್ತು ಹೋಂಸ್ಟೇಗಳು ಗಮನಹರಿಸುವಂತೆ ಅವರು ಕರೆ ನೀಡಿದರು. ಜಿಲ್ಲೆಯಲ್ಲಿ ಪ್ರತಿನಿತ್ಯ ೩೦ ಹೋಂಸ್ಟೇಗಳು ನೋಂದಣಿ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹರ್ಷ ವ್ಯಕ್ತಪಡಿಸಿದರು.

ಹೋಂಸ್ಟೇ ಅಸೋಸಿಯೇಷನ್ ಜಿಲ್ಲಾಧ್ಯಕ್ಷೆ ಮೋಂತಿ ಗಣೇಶ್ ಅವರು ಮಾತನಾಡಿ, ಕೊಡಗಿನ ಪ್ರಕೃತಿ ಮತ್ತು ಪರಿಸರಕ್ಕೆ ಧಕ್ಕೆ ಬಾರದ ರೀತಿಯ ಪ್ರವಾಸೋದ್ಯಮ ಬೆಳವಣಿಗೆ ಆಗಬೇಕು ಹಾಗೂ ಸುಸ್ಥಿರ ಪ್ರವಾಸೋದ್ಯಮ ತೀರ ಅವಶ್ಯ ಎಂದು ಪ್ರತಿಪಾದಿಸಿದರು.

ಅನಧಿಕೃತ ಹೋಂಸ್ಟೇಗಳಿAದ ತೊಂದರೆ ಆಗುತ್ತಿದ್ದು ಈ ನಿಟ್ಟಿನಲ್ಲಿ ಇಲಾಖೆಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು. ಕೊಡಗಿನಲ್ಲಿ ಹೋಂಸ್ಟೇಗಳು ಆರಂಭವಾದ ಬಳಿಕ ಪ್ರವಾಸೋದ್ಯಮ ಹೆಚ್ಚಿನ ಅಭಿವೃದ್ಧಿ ಕಂಡಿದ್ದು ಇದೀಗ ಇಲಾಖೆಗಳು ಸರಳ ರೀತಿಯಲ್ಲಿ ನೋಂದಾವಣಿಗೆ ಅವಕಾಶ ಮಾಡಿರುವುದನ್ನು ಬಳಕೆ ಮಾಡಿಕೊಳ್ಳುವಂತೆ ಹೋಂಸ್ಟೇ ಮಾಲೀಕರುಗಳಿಗೆ ಕರೆ ನೀಡಿದರು.

ಕೊಡಗು ಜಿಲ್ಲಾ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರ ಸಂಘದ ಸಲಹೆಗಾರ ಜಿ. ಚಿದ್ವಿಲಾಸ್ ಅವರು ಮಾತನಾಡಿ, ರೆಸಾರ್ಟ್ ಮತ್ತು ಲಾಡ್ಜ್ಗಳಲ್ಲಿ ಇರುವಂತೆ ಹೋಂಸ್ಟೇಗಳಲ್ಲಿಯೂ ಕೂಡ ರಾತ್ರಿ ಗರಿಷ್ಠ ೧೧ ಗಂಟೆವರೆಗೆ ಮಾತ್ರ ಎಲ್ಲ ರೀತಿಯ ಚಟುವಟಿಕೆಗಳಿಗೆ ಅವಕಾಶ ನೀಡಿದ್ದಲ್ಲಿ ಸಾಕಷ್ಟು ಅನುಕೂಲ ಆಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರವಾಸಿಗರನ್ನು ಖಾಸಗಿ ವಾಹನಗಳಲ್ಲಿ ಪ್ರವಾಸಿ ಕೇಂದ್ರಗಳಿಗೆ ಕರೆದೊಯ್ಯುವ ಸಂದರ್ಭ ಏನಾದರೂ ಅನಾಹುತವಾದಲ್ಲಿ ಯಾವುದೇ ವಿಮೆ ಕಂಪನಿಗಳಿAದ ಪರಿಹಾರ ಸಿಗುವುದಿಲ್ಲ ಎಂಬ ಮಾಹಿತಿ ನೀಡಿ ಆದಷ್ಟು ಹಳದಿ ಬೋರ್ಡ್ ವಾಹನಗಳಲ್ಲೇ ಪ್ರವಾಸಿಗರನ್ನು ಕರೆದೊಯ್ಯುವಂತೆ ಕರೆ ನೀಡಿದರು. ವಿದೇಶಿಗರು ಬಂದ ಸಂದರ್ಭ ಅವರುಗಳ ಮಾಹಿತಿಗಳನ್ನು ಸಂಗ್ರಹಿಸಿ ಇಡಲು ಪೊಲೀಸ್ ಇಲಾಖೆಯ ಪ್ರತ್ಯೇಕ ವೆಬ್‌ಸೈಟ್ ಅನ್ನು ಹೋಂಸ್ಟೇ ಮತ್ತು ವಸತಿಗೃಹಗಳಲ್ಲಿ ಸುಲಭ ರೀತಿಯಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿದ್ದು ಅದು ಹೆಚ್ಚಿನ ಅನುಕೂಲ ಕಲ್ಪಿಸುತ್ತದೆ ಎಂಬ ಮಾಹಿತಿ ನೀಡಿದರು.

ಮಡಿಕೇರಿ ನಗರದಲ್ಲಿ ಎರಡು ಲೀಟರ್ ಕಡಿಮೆ ಪ್ರಮಾಣದ ನೀರಿನ ಪ್ಲಾಸ್ಟಿಕ್ ಬಾಟಲುಗಳನ್ನು ನಿಷೇಧಿಸಿರುವುದನ್ನು ಜಿಲ್ಲೆಯ ಇತರ ಎಲ್ಲ ವಸತಿಗೃಹಗಳಲ್ಲೂ ಅಳವಡಿಸಿದ್ದಲ್ಲಿ ಸಾಕಷ್ಟು ಪರಿಸರವನ್ನು ಉಳಿಸಿಕೊಳ್ಳಲು ಸಾಧ್ಯವಿದೆ ಎಂಬ ಬಗ್ಗೆ ಸಭೆಯ ಗಮನ ಸೆಳೆದರು.

ಅನಧಿಕೃತ ಏಜೆಂಟರುಗಳು ಅನಧಿಕೃತ ಹೋಂಸ್ಟೇ ಮತ್ತು ವಸತಿಗೃಹಗಳಿಗೆ ಪ್ರವಾಸಿಗರನ್ನು ಕರೆದೊಯ್ಯುತ್ತಿರುವುದರಿಂದ ಕಾನೂನು ವ್ಯವಸ್ಥೆಯಲ್ಲಿ ಏರುಪೇರಿಗೆ ಕಾರಣವಾಗಿದೆ. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಎಲ್ಲರೂ ಕಾನೂನಾತ್ಮಕವಾಗಿ ಕಾರ್ಯನಿರ್ವಹಿಸುವಂತೆ ಮಾರ್ಗೋಪಾಯ ಹುಡುಕುವಂತೆ ಮನವಿ ಮಾಡಿದರು.

ಕೊಡಗು ಜಿಲ್ಲೆಯ ಬಗ್ಗೆ ಹಲವು ಅನಧಿಕೃತ ವೆಬ್‌ಸೈಟ್‌ಗಳು ಕಾರ್ಯನಿರ್ವಹಿಸುತ್ತಿದ್ದು ಅವುಗಳಲ್ಲಿ ಕೊಡಗನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಪ್ರತಿಬಿಂಬಿಸಲಾಗುತ್ತಿದ್ದು ಈ ಬಗ್ಗೆ ಇಲಾಖೆಯ ಗಮನದ ಬಗ್ಗೆ ಒತ್ತಿ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವೃತ್ತನಿರೀಕ್ಷಕ ಪಿ.ಕೆ. ರಾಜು ಅವರು, ಹೋಂಸ್ಟೇಗಳನ್ನು ಬಾಡಿಗೆ ಅಥವಾ ಲೀಸ್‌ಗೆ ನೀಡುವಂತಿಲ್ಲ ಎಂಬ ಮಾಹಿತಿ ನೀಡಿದರಲ್ಲದೆ, ಜಿಲ್ಲೆಯಲ್ಲಿ ಸುಗಮ ಪ್ರವಾಸೋದ್ಯಮ ನಡೆಯಲು ಪೊಲೀಸರ ಶ್ರಮ ಕೂಡ ಹೆಚ್ಚಿದೆ ಎಂಬುದನ್ನು ವಿವರಿಸಿದರು.

ಜಿಲ್ಲೆಯಲ್ಲಿ ಪ್ರವಾಸಿಗರ ಪ್ರವಾಹವೇ ಹರಿದು ಬಂದAತಹ ಸಂದರ್ಭದಲ್ಲಿ ಭದ್ರತೆ ಇಲ್ಲ ಎಂದಾದಲ್ಲಿ ಅವರುಗಳ ಆಗಮನ ಕುಂಠಿತ ಆಗುತ್ತದೆ. ಭದ್ರತೆಯ ಜೊತೆಯಲ್ಲಿ ಸಂಚಾರವೂ ಕೂಡ ಅತ್ಯಂತ ಪ್ರಮುಖವಾಗಿದ್ದು ಈ ನಿಟ್ಟಿನಲ್ಲಿ ಪ್ರವಾಸೋದ್ಯಮದ ಬೆಳವಣಿಗೆಯಲ್ಲಿ ಪೊಲೀಸರು ಕೂಡ ಹೆಚ್ಚಿನ ಪಾತ್ರ ವಹಿಸುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.

ವೇದಿಕೆಯಲ್ಲಿ ಚೇಂಬರ್ ಆಫ್ ಕಾಮರ್ಸ್ ಜಿಲ್ಲಾ ಉಪಾಧ್ಯಕ್ಷ ನವೀನ್ ಅಂಬೆಕಲ್, ಜಿಲ್ಲಾ ಹೊಟೇಲ್ ಮತ್ತು ರೆಸಾರ್ಟ್ಸ್ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ನಾಸಿರ್ ಉಪಸ್ಥಿತರಿದ್ದರು. ಡಿವೈಎಸ್ಪಿ ಸೂರಜ್ ವಂದನಾರ್ಪಣೆ ಮಾಡಿದರು.