ಸೋಮವಾರಪೇಟೆ, ಮಾ. ೧೩: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿರುವ ರೋಟರಿ ಸಂಸ್ಥೆಯ ಸದಸ್ಯರಾದ ಬಿ.ಎಂ. ಸುರೇಶ್, ಪಿ.ಕೆ. ರವಿ, ಬಿ.ಜೆ. ದೀಪಕ್ ಅವರುಗಳನ್ನು ರೋಟರಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ರೋಟರಿ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ರೋಟರಿ ಅಧ್ಯಕ್ಷ ಜೆ.ಕೆ. ಪೊನ್ನಪ್ಪ, ಕಾರ್ಯದರ್ಶಿ ಬಿದ್ದಪ್ಪ, ವಲಯ ಸೇನಾನಿ ಎಂ.ಎA. ಪ್ರಕಾಶ್ ಅವರುಗಳು ಸನ್ಮಾನಿಸಿದರು.

ಅಧ್ಯಕ್ಷರಾದ ಜೆ.ಕೆ. ಪೊನ್ನಪ್ಪ ಮಾತನಾಡಿ, ಸಹಕಾರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೂವರು ಸದಸ್ಯರು ಆಯ್ಕೆಯಾಗಿ ದ್ದಾರೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರನ್ನು ಸಮಾಜ ಗುರುತಿಸುತ್ತದೆ ಎಂಬುದು ಇವರ ಗೆಲುವಿನಿಂದ ತಿಳಿಯುತ್ತದೆ. ಸಹಕಾರ ಸಂಘದಲ್ಲೂ ರೈತರ ಸೇವೆ ಮಾಡುವ ಅವಕಾಶ ಸಿಗುತ್ತದೆ. ಜನರ ಸೇವೆಯೊಂದಿಗೆ ಸಂಸ್ಥೆಯ ಗೌರವ ವನ್ನು ಹೆಚ್ಚಿಸಿ ಎಂದು ಆಶಿಸಿದರು.

ಸಮಾಜದ ನಾನಾ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ತಮಗೆ ದೊರೆತ ಬಿಡುವಿನ ವೇಳೆಯಲ್ಲಿ ರೋಟರಿ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರು ವುದು ಹೆಮ್ಮೆಯ ವಿಷಯವಾಗಿದೆ ಎಂದರು.