*ಸಿದ್ದಾಪುರ ಮಾ. ೧೩ : ತ್ಯಾಗತ್ತೂರು-ವಾಲ್ನೂರು ಶ್ರೀ ಭಗವತಿ ದೇವಾಲಯದ ವಾರ್ಷಿಕ ಉತ್ಸವವು ತಾ. ೨೪ ರಿಂದ ೨೭ರವರೆಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊAದಿಗೆ ಜರುಗಲಿದೆ.
ತಾ. ೨೪ ರಂದು ಸಂಜೆ ತಕ್ಕರ ಮನೆಯಿಂದ ಭಂಡಾರ ಇಳಿಸುವುದು, ಶ್ರೀದೇವಿ ಬಲಿ, ಮಹಾಪೂಜೆ ಹಾಗೂ ತೀರ್ಥಪ್ರಸಾದ ವಿತರಣೆ ನಡೆಯಲಿದೆ. ತಾ. ೨೫ ರಂದು ಮಧ್ಯಾಹ್ನ ೩ ಗಂಟೆಯಿAದ ಪಟ್ಟಣಿ, ಎತ್ತುಹೇರು, ಶ್ರೀದೇವಿ ಬಲಿ, ಅಲಂಕಾರ ಪೂಜೆ, ಮಹಾಪೂಜೆ, ತೀರ್ಥಪ್ರಸಾದ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ.
ತಾ. ೨೬ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ತುಲಾಭಾರ ಸೇವೆ, ೧೨ ಗಂಟೆಗೆ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಮಧ್ಯಾಹ್ನ ೩ ಗಂಟೆಯಿAದ ತೆಂಗಿನಕಾಯಿಗೆ ಗುಂಡುಹೊಡೆಯುವುದು, ಶ್ರೀ ದೇವಿಬಲಿ, ಅವಭೃತ ಸ್ನಾನ, ಶ್ರೀ ದೇವಿ ಬಲಿ ನೃತ್ಯ, ಅಲಂಕಾರ ಪೂಜೆ, ಮಹಾಪೂಜೆ, ತೀರ್ಥ ಪ್ರಸಾದ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ತಾ. ೨೭ ರಂದು ಬೆಳಿಗ್ಗೆ ೯ ಗಂಟೆಯಿAದ ಶುದ್ಧಕಲಶ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ ಜರುಗಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ತಕ್ಕರು, ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿ ಕೋರಿದೆ.