ಸಿದ್ದಾಪುರ, ಮಾ. ೧೩: ಮೇರಿಲ್ಯಾಂಡ್ ಕಾಫಿ ತೋಟದಲ್ಲಿ ನಡೆದ ಕಾಡಾನೆ ಸಾವಿಗೆ ಸಂಬAಧಿಸಿದAತೆ ತೋಟದ ವ್ಯವಸ್ಥಾಪಕರ ವಿರುದ್ದ ಅರಣ್ಯ ಇಲಾಖೆಯು ಸುಳ್ಳು ಮೊಕದ್ದಮೆ ದಾಖಲಿಸಿ ಬಂಧಿಸಿದೆ ಎಂದು ಆರೋಪಿಸಿ ಅರಣ್ಯ ಇಲಾಖೆಯ ಕ್ರಮವನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಅಮ್ಮತ್ತಿ ಹೋಬಳಿ ಹಾಗೂ ಕಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ ತಾ.೧೪ ರಂದು (ಇಂದು) ಸಂಜೆ ೫.೩೦ ಗಂಟೆಗೆ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಲು ಸ್ವರ್ಣಮಾಲಾ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೇಪAಡ ಪ್ರವೀಣ್ ಬೋಪಣ್ಣ ಮಾತನಾಡಿ, ಕಾಡಾನೆಗಳು ವಿದ್ಯುತ್ ತಂತಿಗಳಿAದ ಸಾವನ್ನಪ್ಪಿದಾಗ ಸೆಸ್ಕ್ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳದ ಇಲಾಖೆ ಕಾರ್ಮಿಕರ ಮೇಲೆ ಹಾಗೂ ರೈತರ ಮೇಲೆ ಕ್ರಮ ಕೈಗೊಂಡಿರುವುದು ದಬ್ಬಾಳಿಕೆಯಾಗಿದೆ. ಇದನ್ನು ರೈತ ಸಂಘ ಸಹಿಸುವುದಿಲ್ಲ. ಇದಕ್ಕೆಲ್ಲ ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ ವಿರುದ್ಧ ತೀವ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಅಲ್ಲದೆ ಈಗ ದಾಖಲಿಸಿರುವ ಸುಳ್ಳು ಮೊಕದ್ದಮೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಕಾರ್ಮಿಕ ಮುಖಂಡ ಪಿ.ಆರ್. ಭರತ್ ಮಾತನಾಡಿ, ಕಾಡಾನೆ ಸಾವಿಗೆ ವ್ಯವಸ್ಥಾಪಕರೇ ಕಾರಣ ಎಂದು ಏಕಾಏಕಿ ಪ್ರಕರಣ ದಾಖಲಿಸಿ ಬಂಧಿಸಿರುವುದು ಸರಿಯಲ್ಲ. ಇದನ್ನು ಕಾರ್ಮಿಕ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ. ಇದರ ವಿರುದ್ಧ ಸಂಘಟನೆಯಿAದ ಹೋರಾಟ ಮಾಡಲಾಗುವುದು. ಅಲ್ಲದೆ ಕಾಫಿ ತೋಟದಲ್ಲಿ ವಿದ್ಯುತ್ ತಂತಿ ತಗುಲಿ ಕಾಡಾನೆಗಳು ಸಾವನಪ್ಪಿದ್ದರೂ ಸೆಸ್ಕ್ ವಿರುದ್ಧ ಕ್ರಮ ಏಕಿಲ್ಲ ಎಂದು ಪ್ರಶ್ನಿಸಿದರು.

ಮೇರಿಲ್ಯಾಂಡ್ ಕಾಫಿ ತೋಟದ ಮಾಲೀಕರಾದ ಜಿಜಿ ಪಿಂಟೋ ಮಾತನಾಡಿ, ಕಾಫಿ ತೋಟದಲ್ಲಿ ಕಾಡಾನೆ ಹಾವಳಿಯಿಂದ ಬೇಸತ್ತ ನಾವು ಕಾಡಾನೆ ಹಾವಳಿಯನ್ನು ತಡೆಗಟ್ಟುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದೀಗ ಸುಳ್ಳು ಆರೋಪ ಮಾಡಿ ವ್ಯವಸ್ಥಾಪಕರನ್ನು ಬಂಧಿಸಿರುವುದು ಸರಿಯಲ್ಲ ಎಂದರು.

೧೧ ಕೆ ವಿ ತಂತಿಗಳನ್ನು ಸೋಲಾರ್‌ಗೆ ಅಳವಡಿಸುವುದು ಅಸಾಧ್ಯವಾಗಿದ್ದರೂ ಅರಣ್ಯ ಇಲಾಖೆ ಸುಳ್ಳು ಆರೋಪ ಮಾಡಿ ಕ್ರಮ ಕೈಗೊಂಡಿರುವುದು ಅಧಿಕಾರದ ದುರ್ಬಳಕೆಯಾಗಿದೆ. ನನ್ನ ಎರಡು ವಾಹನದ ಮೇಲೆ ಕಾಡಾನೆ ದಾಳಿ ಮಾಡಿದ ಸಂದರ್ಭ ಹಾಗೂ ನನ್ನ ತೋಟದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದ ಸಂದರ್ಭದಲ್ಲಿ ಅರಣ್ಯ ಇಲಾಖೆ ಪರಿಹಾರ ನೀಡಲಿಲ್ಲ. ಇದೀಗ ಅರಣ್ಯ ಇಲಾಖೆಯು ತೋಟದ ವ್ಯವಸ್ಥಾಪಕ ಜೋಸೆಫ್ ವಿರುದ್ಧ ಮಾಡದ ತಪ್ಪಿಗೆ ಕ್ರಮ ಕೈಗೊಂಡಿರುವುದು ಸರಿಯಲ್ಲ ಎಂದರು.

ತೋಟದ ವ್ಯವಸ್ಥಾಪಕರ ಮಗಳು ಮೇರಿ ಮಾತನಾಡಿ ಅರಣ್ಯ ಇಲಾಖಾಧಿಕಾರಿಗಳು ತಂದೆಯನ್ನು ಕೆಲಸ ಇದೆ ಎಂದು ಹೇಳಿ ಕರೆದೊಯ್ದು ಹಲ್ಲೆ ಮಾಡಿದ್ದಾರೆ. ಅಲ್ಲದೆ ಬೆದರಿಸಿ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ತಂದೆಗೆ ಅನಾರೋಗ್ಯವಿದ್ದು ಅರಣ್ಯಾಧಿಕಾರಿಗಳ ಹಲ್ಲೆಯಿಂದ ತಂದೆಗೆ ನಡೆಯಲೂ ಸಾಧ್ಯವಾಗದಂತಾಗಿದೆ. ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಸುಳ್ಳು ಆರೋಪದಲ್ಲಿ ಅಮಾಯಕರನ್ನು ಬಂಧಿಸಿ ಹಲ್ಲೆ ಮಾಡಿದ ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ಕರ್ನಾಟಕ ರಾಜ್ಯ ರೈತ ಸಂಘದ ಸಿದ್ದಾಪುರ ಘಟಕದ ಅಧ್ಯಕ್ಷ ದೇವಣಿರ ವಜ್ರಾ ಬೋಪಣ್ಣ, ಜಿಲ್ಲಾ ಘಟಕದ ಖಜಾಂಜಿ ಇಟ್ಟೀರ ಸಬಿತಾ ಭೀಮಯ್ಯ, ಕಾರ್ಮಿಕ ಮುಖಂಡರಾದ ರಮೇಶ್, ಕುಟ್ಟಪ್ಪ, ರೈತ ಸಂಘದ ಪದಾಧಿಕಾರಿ ಬಿದ್ದಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.

-ವಾಸು