ವೀರಾಜಪೇಟೆ, ಮಾ. ೧೩: ಸಮುದಾಯಗಳ ನಡುವೆ ಉತ್ತಮ ಬಾಂಧವ್ಯ ಸೃಷ್ಟಿ ಮಾಡಲು ಕ್ರೀಡೆಗಳು ಸಹಕಾರಿ, ಕ್ರೀಡೆಗಳಲ್ಲಿ ಭಾಗವಹಿಸುವಿಕೆಯಿಂದಾಗಿ ಕುಟುಂಬಗಳ ನಡುವಿನ ಸಂಬAಧಗಳು ಗಾಢವಾಗುತ್ತದೆ ಎಂದು ಅಂರ‍್ರಾಷ್ಟಿçÃಯ ರಗ್ಬಿಪಟು ಮತ್ತು ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ಆಡÀಳಿತಾಧಿಕಾರಿ ಮಾದಂಡ ತಿಮ್ಮಯ್ಯ ಹೇಳಿದರು.

ಹಿಂದೂ ಮಲಯಾಳಿ ಅಸೋಸಿಯೇಷನ್ ವತಿಯಿಂದ ನಗರದ ಎಫ್.ಎಂ.ಸಿ. ರಸ್ತೆಯಲ್ಲಿರುವ ಕಚೇರಿಯಲ್ಲಿ ಎರಡನೇ ವರ್ಷದ ಮುಕ್ತ ಹೊನಲು ಬೆಳಕಿನ ಕಾಲ್ಚೆಂಡು ಪಂದ್ಯಾಟದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಮುದಾಯದ ಏಳಿಗೆ ಮಾತ್ರ ಸೀಮಿತವಾಗದೆ ಸಾಮಾಜಿಕ ಕಳಕಳಿಯಿಂದ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಸಮಾಜಕ್ಕೆ ಪೂರಕವಾಗಿರುವ ವಿಷಯವಾಗಿದೆ. ವಿಶು ಹಬ್ಬದ ಪ್ರಯುಕ್ತ ಎಲ್ಲಾ ಸಮುದಾಯದ ಬಾಂಧವರಿಗಾಗಿ ಕಾಲ್ಚೆಂಡು ಪಂದ್ಯಾಟಗಳನ್ನು ಆಯೋಜಿಸಿರುವುದು ಶ್ಲಾಘನೀಯ, ಪಂದ್ಯಾಟಗಳು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಹಿಂದೂ ಮಲಯಾಳಿ ಅಸೋಸಿಯೇಷನ್‌ನ ಅಧ್ಯಕ್ಷ ಎ. ವಿನೂಪ್ ಕುಮಾರ್ ಮಾತನಾಡಿ, ವಿಶು ಹಬ್ಬವು ಮಲಯಾಳಂ ಭಾಷಿಕರ ಸಮುದಾಯದ ಹಬ್ಬವಾಗಿದೆ. ಜನಾಂಗ ಬಾಂಧವರ ನಡುವಿನ ಬಾಂಧವ್ಯ ಬಲಪಡಿಸಲು ಪಂದ್ಯಾಟಗಳನ್ನು ಹಮ್ಮಿಕೊಳ್ಳಲಾಗಿದೆ. ಹಬ್ಬದ ಪ್ರಯುಕ್ತ ಹೊನಲು ಬೆಳಕಿನ ೫+೨ ಪುರುಷರ ಮುಕ್ತ ಕಾಲ್ಚೆಂಡು ಪಂದ್ಯಾಟವನ್ನು ಏಪ್ರಿಲ್ ತಿಂಗಳ ೧೮, ೧೯ ಮತ್ತು ೨೦ ರಂದು ನಗರದ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದೆ. ಕೊನೆಯ ದಿನ ಸಮುದಾಯ ಬಾಂಧವರಿಗಾಗಿ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗಾಗಿ ಆಟೋಟ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ, ಸಿಡಿಮದ್ದು ಪ್ರದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬಳಿಕ ಕೊನೆ ಹಂತದ ಪಂದ್ಯಾಟಗಳು ನಡೆಯಲಿವೆ ಎಂದು ಹೇಳಿದರು.

ಹಿಂದೂ ಮಲಯಾಳಿ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಸಾಜು ಮಾತನಾಡಿ, ವಿಶು ಕಪ್ ಪಂದ್ಯಾಟಗಳು ಸಂಸ್ಥೆಯು ಆಯೋಜಿಸುವ ಎರಡನೇ ಕ್ರೀಡಾ ಹಬ್ಬವಾಗಿದೆ. ಮೊದಲ ೩೨ ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕಾಲ್ಚೆಂಡು ಪಂದ್ಯಾಟದ ವಿಜೇತ ತಂಡ ಪ್ರಥಮ ರೂ. ೧ ಲಕ್ಷ ನಗದು ಟ್ರೋಫಿ, ದ್ವಿತೀಯ ರೂ. ೭೫ ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುವುದು. ತಂಡಗಳ ನೋಂದಣಿಗಾಗಿ ೧೦-೦೪-೨೦೨೫ ಅಂತಿಮ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಸದಸ್ಯರಾದ ಶಿನೋಜ್ (೯೪೮೩೫೮೦೬೬೪), ಸಾಜು (೯೯೦೧೬೯೯೦೬೨), ಉನ್ನಿ (೮೦೭೩೫೯೪೧೩೩) ಸುನಿಲ್ (೯೯೦೨೩೧೮೨೦೫) ಅವರುಗಳನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.

ಹಿಂದೂ ಮಲಯಾಳಿ ಅಸೋಸಿಯೇಷನ್ ಉಪಾಧ್ಯಕ್ಷ ದಿನೇಶ್ ನಂಬಿಯಾರ್, ಪ್ರಧಾನ ಕಾರ್ಯದರ್ಶಿ ಸಾಜು, ಕಾರ್ಯದರ್ಶಿ ಉನ್ನಿಕೃಷ್ಣನ್, ಕೋಶಾಧಿಕಾರಿ ಸುನಿಲ್ ಕುಮಾರ್ ಡಿ.ಕೆ., ಆಕ್ಸ್ಫರ್ಡ್ ಫುಟ್ಬಾಲ್ ಕ್ಲಬ್‌ನ ಅಧ್ಯಕ್ಷ ರೇನ್‌ಸನ್ ಚಾಕೋ, ಸದಸ್ಯರಾದ ಶಿನೋಜ್, ಸತೀಶ್ ಸುನಿಲ್ ಎನ್.ವಿ. ಮತ್ತು ಸುಮೇಶ್ ಅವರುಗಳು ಕಾರ್ಯ ಕ್ರಮದಲ್ಲಿ ಹಾಜರಿದ್ದರು. -ಕಿಶೋರ್ ಕುಮಾರ್ ಶೆಟ್ಟಿ