ಶನಿವಾರಸಂತೆ, ಮಾ. ೧೨: ಸಂಘ-ಸAಸ್ಥೆಗಳ ಸದಸ್ಯರು ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಾಗ ಸಂಘಗಳ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಶನಿವಾರಸಂತೆ-ಕೊಡ್ಲಿಪೇಟೆ ಹೋಬಳಿ ಘಟಕದ ಅಧ್ಯಕ್ಷ ಎನ್.ಎಸ್. ಜಯರಾಮ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ವಿಘ್ನೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ೨೦೨೩-೨೪ ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ, ಮಾತನಾಡಿದರು. ಎಲ್ಲಾ ಕ್ಷೇತ್ರದ ನಿವೃತ್ತ ನೌಕರರ ಕುಂದುಕೊರತೆಗಳ, ಸಮಸ್ಯೆಗಳ ಪರಿಹರಿಸುವ ವೇದಿಕೆಯಾಗಬೇಕು ಸಂಘ ಸಂಸ್ಥೆಗಳು.
ಸರ್ವ ಸದಸ್ಯರು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಾಗ ಸರ್ಕಾರದ ಯೋಜನೆಗಳು, ಸೌಲಭ್ಯಗಳ ಮಾಹಿತಿ ವಿನಿಮಯವಾಗುತ್ತದೆ. ಸಂಘ ಬೆಳೆಯಲು ಕಾರಣವಾಗುತ್ತದೆ ಎಂದರು.ಮುಖ್ಯ ಅತಿಥಿ ಸೋಮವಾರ ಪೇಟೆ ತಾಲೂಕು ಘಟಕದ ಅಧ್ಯಕ್ಷ ಸಿ.ಕೆ. ಮಲ್ಲಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದ ಶಿಕ್ಷಕರಲ್ಲಿ ಒಗ್ಗಟ್ಟಿದೆ. ಸಮಸ್ಯೆಗಳ ಪರಿಹಾರಕ್ಕೆ ಪರಸ್ಪರ ಸಹಕಾರ ಮನೋಭಾವವಿದೆ. ಸಂಘದ ಶನಿವಾರಸಂತೆ-ಕೊಡ್ಲಿಪೇಟೆ ಘಟಕಕ್ಕೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸ್ಥಳ ಗುರುತಿಸಬೇಕು. ಘಟಕದ ವತಿಯಿಂದ ರಾಷ್ಟಿçÃಯ ಹಬ್ಬಗಳನ್ನು ಆಚರಿಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯರಾದ ಸಿ.ಕೆ. ಕೊಮಾರಪ್ಪ, ಸಿ.ಎಂ. ಪುಟ್ಟಸ್ವಾಮಿ, ಶಿವಕುಮಾರ್ ಹಾಗೂ ಧನಲಕ್ಷಿö್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಹಿರಿಯ ಸದಸ್ಯ ನಿವೃತ್ತ ಮುಖ್ಯಶಿಕ್ಷಕ ಸಿ.ಎಲ್. ಸುಬ್ಬಯ್ಯ ತಮ್ಮ ದಿ. ಪತ್ನಿ ವನಜಾಕ್ಷಿಯವರ ಹೆಸರಿನಲ್ಲಿ ಕ್ರೀಡಾಕೂಟ ಆಯೋಜಿಸಿದ್ದು ವಿಜೇತ ಸದಸ್ಯರಿಗೆ ಬಹುಮಾನ ಹಾಗೂ ಸದಸ್ಯರಿಗೆ ಕಾಣಿಕೆ ನೀಡಿದರು.ನಿವೃತ್ತ ಪ್ರಾಂಶುಪಾಲ ಸಿ.ಎಂ.ಪುಟ್ಟಸ್ವಾಮಿ ನಿವೃತ್ತಿ ಬದುಕಿನ ಬಗ್ಗೆ ಕವನ ವಾಚಿಸಿದರು.
ಸಭೆಯಲ್ಲಿ ಇತರ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಸದಸ್ಯರಾದ ಎಸ್.ಪಿ. ರಾಜು ವಾರ್ಷಿಕ ಮಹಾಸಭೆಯ ಆಹ್ವಾನ ಪತ್ರಿಕೆಯಲ್ಲಿ ಸಂಘದ ಆಡಳಿತ ಮಂಡಳಿಯ ಪದಾಧಿಕಾರಿಗಳ ಹೆಸರು ಹಾಕಿಸಬೇಕು ಎಂದು ಸಲಹೆ ನೀಡಿದರೆ, ಮತ್ತೋರ್ವ ಸದಸ್ಯ ಜಿ.ಬಿ. ನಾಗಪ್ಪ ಕಾರ್ಯಕ್ರಮದಲ್ಲಿ ಧ್ವನಿವರ್ಧಕದ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಸಂಘದ ಆಡಳಿತ ಮಂಡಳಿ ಉಪಾಧ್ಯಕ್ಷ ಮಂಜಪ್ಪ, ಕಾರ್ಯದರ್ಶಿ ಬಿ.ಬಿ. ನಾಗರಾಜ್, ಖಜಾಂಚಿ ಡಿ.ಬಿ. ಸೋಮಪ್ಪ, ತಾಲೂಕು ಸಂಘದ ಖಜಾಂಚಿ ಕೆಂಚೇಗೌಡ, ಕುಶಾಲನಗರ ತಾಲೂಕು ಸಂಘದ ಅಧ್ಯಕ್ಷ ಎಸ್.ಪಿ. ರಾಜು, ಕಲ್ಯಾಣ ಮಂಟಪ ಮಾಲೀಕ ಕೃಷ್ಣರಾಜು, ದಾಸೋಹ ಆಯೋಜಕಿ ಡಿ.ಕೆ. ರುಕ್ಮಿಣಿ, ಈರಪ್ಪ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸದಸ್ಯರಾದ ಸರೋಜಮ್ಮ ಪ್ರಾರ್ಥಿಸಿ, ಎಂ.ಎ. ಹಮೀದ್ ಸ್ವಾಗತಿಸಿದರು. ಖಜಾಂಚಿ ಡಿ.ಬಿ. ಸೋಮಪ್ಪ ಕಳೆದ ಮಹಾಸಭೆಯ ವರದಿ ವಾಚಿಸಿದರು. ಕಾರ್ಯದರ್ಶಿ ಬಿ.ಬಿ. ನಾಗರಾಜ್ ಆಡಳಿತ ಮಂಡಳಿಯ ವರದಿ ವಾಚಿಸಿದರು. ಮೃತಪಟ್ಟ ಸದಸ್ಯರಿಗೆ ಸಂತಾಪ ಸೂಚಿಸಿ ಮೌನಾಚರಣೆ ಮಾಡಲಾಯಿತು. ಸದಸ್ಯರಾದ ಸಿ.ಎಂ. ಪುಟ್ಟಸ್ವಾಮಿ ನಿರೂಪಿಸಿ, ಬಿ.ಬಿ. ನಾಗರಾಜ್ ವಂದಿಸಿದರು.