ಮಡಿಕೇರಿ, ಮಾ. ೧೨: ಸ್ಕೂಟಿ ಹಾಗೂ ಪಿಕಅಪ್ ನಡುವೆ ಅಪಘಾತ ಸಂಭವಿಸಿ ಸ್ಕೂಟಿ ಚಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.

ಅಮ್ಮತ್ತಿ ಒಂಟಿಯAಗಡಿ ನಿವಾಸಿ ಎಚ್.ಕೆ. ಉಮೇಶ್ ಎಂಬವರು ಸ್ಕೂಟಿಯಲ್ಲಿ ಮೂರ್ನಾಡಿನಿಂದ ವೀರಾಜಪೇಟೆಯತ್ತ ತೆರಳುತ್ತಿದ್ದಾಗ ಎಂ. ಬಾಡಗದಲ್ಲಿ ವೀರಾಜಪೇಟೆಯಿಂದ ಮೂರ್ನಾಡಿನತ್ತ ಬರುತ್ತಿದ್ದ ಸಂಜು ಎಂಬವರು ಚಾಲಿಸುತ್ತಿದ್ದ ಪಿಕ್‌ಅಪ್‌ಗೆ ಡಿಕ್ಕಿಯಾಗಿದೆ. ಪರಿಣಾಮ ಗಾಯಗೊಂಡ ಉಮೇಶ್ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.