ಚೆಯ್ಯಂಡಾಣೆ, ಮಾ. ೧೨: ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಅನುಗ್ರಹ ಜನಸೇವಾ ಚಾರಿಟೇಬಲ್ ಟ್ರಸ್ಟ್ ಕೊಡಗು ಇದರ ವತಿಯಿಂದ ರಂಝಾನ್ ಪ್ರಯುಕ್ತ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು.

ಜಿಲ್ಲೆಯ ಕಡು ಬಡವರಿಗೆ ಜಾತಿ, ಧರ್ಮ, ಬೇಧವಿಲ್ಲದೆ ರಂಝಾನ್ ತಿಂಗಳ ಪ್ರಯುಕ್ತ ಅಗತ್ಯ ವಸ್ತುಗಳ ಆಹಾರ ಧಾನ್ಯಗಳನ್ನೊಳಗೊಂಡ ೫೦ ಕುಟುಂಬಕ್ಕೆ ಕಿಟ್ಟನ್ನು ಅನುಗ್ರಹ ಜನಸೇವಾ ಚಾರಿಟೇಬಲ್ ಟ್ರಸ್ಟ್ ಕೊಡಗು ಇದರ ಅಧ್ಯಕ್ಷರಾದ ಫತಾಯಿ ಸಿ.ಎ. ಕಡಂಗ ಹಾಗೂ ಉಪಾಧ್ಯಕ್ಷರಾದ ಉಮ್ಮರ್ ಕೆ.ಎ. ಎಡಪಾಲ ಇವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ವಿತರಿಸಲಾಯಿತು.

ಈ ಸಂದರ್ಭ ಅನುಗ್ರಹ ಜನಸೇವಾ ಚಾರಿಟೇಬಲ್ ಟ್ರಸ್ಟ್ ನಾ ಕೋಶಾಧಿಕಾರಿ ಹಾಗೂ ಪತ್ರಕರ್ತ ಅಶ್ರಫ್ ಮಾತನಾಡಿ ರಂಝಾನ್ ಪ್ರಯುಕ್ತ ಜಿಲ್ಲೆಯ ಕಡು ಬಡವರಾದ ೫೦ ಕುಟುಂಬಕ್ಕೆ ಜಾತಿ ಧರ್ಮ, ಬೇಧವಿಲ್ಲದೆ ರಂಝಾನ್ ಕಿಟ್ ವಿತರಿಸಲಿದ್ದೇವೆ. ಒಂದು ಒತ್ತು ಅನ್ನಕ್ಕಾಗಿ ಪರಿತಪ್ಪಿಸುತ್ತಿರುವ ಈ ಸನ್ನಿವೇಶದಲ್ಲಿ ಅಂತವರನ್ನು ಪರಿಗಣಿಸಿ ಕಿಟ್‌ಗಳನ್ನು ವಿತರಿಸುತ್ತಿದ್ದೇವೆ ಎಂದ ಅವರು ಹಲವಾರು ದಾನಿಗಳು ಕಿಟ್‌ಗೆ ಸಹಕರಿಸಿದ್ದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಅನುಗ್ರಹ ಜನಸೇವಾ ಚಾರಿಟೇಬಲ್ ಟ್ರಸ್ಟ್ ನ ಆಡಳಿತ ಮಂಡಳಿಯ ಸದಸ್ಯ ಸೈಫುದ್ದಿನ್ ಚಾಮಿಯಾಲ ಕಿಟ್ ವಿತರಣಾ ಕಾರ್ಯಕ್ರಮವನ್ನು ಉದ್ದೇಶೀಸಿ ಮಾತನಾಡಿದರು. ಈ ಸಂದರ್ಭ ಅನುಗ್ರಹ ಜನಸೇವಾ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ರಜಾಕ್ ಚೆಯ್ಯಂಡಾಣೆ, ಳಹ್ಯಾರಿಸ್ ಕೊಂಡAಗೇರಿ, ಸೌಕತ್ ಕಡಂಗ ಉಪಸ್ಥಿತರಿದ್ದರು.