ಪೊನ್ನಂಪೇಟೆ, ಮಾ. ೧೨: ಇತ್ತೀಚೆಗೆ ಕೊಡಗು ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ, ೨೦೨೪-೨೦೨೫ನೇ ಸಾಲಿನ ರಾಷ್ಟಿçÃಯ ಆರೋಗ್ಯ ಅಭಿಯಾನದಡಿಯಲ್ಲಿ ಜನಪದ ಕಲಾ ಪ್ರದರ್ಶನ ಹಾಗೂ ಬೀದಿ ನಾಟಕಗಳ ಮೂಲಕ ಅರೋಗ್ಯದ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸ ಲಾಯಿತು. ಪೊನ್ನಂಪೇಟೆ ಜೈ ಭೀಮ್ ಗಡಿನಾಡು ಜಾನಪದ ಕಲಾ ತಂಡದ ಕಲಾವಿದರು ಬೀದಿ ನಾಟಕವನ್ನು ನಡೆಸಿಕೊಟ್ಟರು.

ತಿತಿಮತಿ ಶಾಲೆ, ಬಾಳೆಲೆ ನಿಟ್ಟೂರು ಶಾಲೆ, ಕುಟ್ಟ ಬಸ್ಸು ನಿಲ್ದಾಣ, ಪಾಲಿಬೆಟ್ಟ ಕಾಲೋನಿ, ಅಮ್ಮತ್ತಿ ಬಸ್ಸು ನಿಲ್ದಾಣ, ಸಿದ್ದಾಪುರ ಬಸ್ಸು ನಿಲ್ದಾಣದಲ್ಲಿ ನಡೆದ ಬೀದಿನಾಟಕ ಕಾರ್ಯಕ್ರಮದಲ್ಲಿ ತಾಯಿ ಮಗುವಿನ ಆರೈಕೆ, ಹದಿ ಹರೆಯದ ವಯಸ್ಸು, ಭ್ರೂಣ ಹತ್ಯೆ, ಅಂಗಾAಗ ದಾನ, ಅನೀಮಿಯಾ, ಕ್ಷಯರೋಗ ನಿರ್ಮೂಲನೆ, ಸ್ವಚ್ಛತೆ, ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆ ಬಗ್ಗೆ ಅರಿವು ಮೂಡಿಸಲಾಯಿತು.

ಜೈ ಭೀಮ್ ಗಡಿನಾಡು ಜಾನಪದ ಕಲಾ ತಂಡದ ಕಲಾವಿದರಾದ ಎಸ್.ಟಿ. ಗಿರೀಶ್, ನಿರ್ಮಲ, ಪುಷ್ಪ, ಮಂಜುಳ, ಶಿವಯ್ಯ, ಹನುಮಯ್ಯ, ಶ್ವೇತ, ಹಾಗೂ ಗಿರಿಜಾ ಬೀದಿ ನಾಟಕ ಪ್ರದರ್ಶನ ನೀಡಿದರು.