ಸೋಮವಾರಪೇಟೆ, ಮಾ. ೧೨: ಸಮೀಪದ ಐಗೂರು ಗ್ರಾಮ ಪಂಚಾಯಿತಿಯಲ್ಲಿ ಕಳೆದ ೨೦೨೧ ಹಾಗೂ ೨೦೨೨ರ ಸಾಲಿನಿಂದ ೨೦೨೪ ರವರೆಗೆ ನಡೆದಿದೆ ಎನ್ನಲಾದ ರೂ. ೨೬ ಲಕ್ಷ ಅಕ್ರಮ ಹಣ ವರ್ಗಾವಣೆಗೆ ಸಂಬAಧಿಸಿದAತೆ, ಈ ಸಾಲಿನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಾಗಿ ಕರ್ತವ್ಯ ನಿರ್ವಹಿಸಿದ್ದ ಜಿ. ಬಾಲಕೃಷ್ಣ ಅವರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರಿಗೆ ದೂರು ನೀಡಿದ ದೂರುದಾರರೇ ಪ್ರಕರಣದಲ್ಲಿ ಆರೋಪಿಯಾಗಿರುವುದು ವಿಶೇಷ.
ಐಗೂರು ಗ್ರಾಮ ಪಂಚಾಯಿತಿ ಯಲ್ಲಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಆಗಿದ್ದ ಸರಿತಾ ಎಂಬಾಕೆಯ ವಿರುದ್ಧ ಈಗಾಗಲೇ ಮೊಕದ್ದಮೆ ದಾಖಲಾಗಿದೆ. ಪಂಚಾಯಿತಿಯ ಲಕ್ಷಾಂತರ ರೂಪಾಯಿ ಗೋಲ್ಮಾಲ್ ಆಗಿರುವ ಬಗ್ಗೆ ತನಿಖೆ ಕೈಗೊಂಡಿರುವ ಸೋಮ ವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಮುದ್ದು ಮಹದೇವ ಅವರು ತನಿಖೆಯ ತೀವ್ರತೆ ಹೆಚ್ಚಿಸಿ ದ್ದಾರೆ. ಈ ಪ್ರಕರಣದಲ್ಲಿ ಹಣ ದುರುಪ ಯೋಗ ಆದ ಸಂದರ್ಭದಲ್ಲಿ ಇದ್ದ ಅಧ್ಯಕ್ಷರುಗಳ ಹೊಣೆಗಾರಿಕೆ ಏನು? ಎಂಬುದು ತನಿಖೆಯಲ್ಲಿ ಬೆಳಕಿಗೆ ಬರಲಿದೆ.
ಅಕ್ರಮ-ಪೊಲೀಸ್ ದೂರು: ಗ್ರಾಮ ಪಂಚಾಯಿತಿಯಲ್ಲಿ ಹಣ ದುರುಪಯೋಗ ಆಗಿರುವ ಬಗ್ಗೆ ಸ್ವತಃ ಪಿಡಿಓ ಜಿ. ಬಾಲಕೃಷ್ಣ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಠಾಣೆಯಲ್ಲಿ ೦೦೦೪/೨೦೨೪ ಸಂಖ್ಯೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಐಗೂರು ಗ್ರಾಮ ಪಂಚಾಯಿತಿ ಯಲ್ಲಿ ಕಳೆದ ೧೫ ವರ್ಷದಿಂದ ಕ್ಲರ್ಕ್/ಡಾಟ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿರುವ ಸರಿತ ಎಂಬವರು ದಿನಾಂಕ ೦೧/೦೫/೨೦೨೨ ರಿಂದ
೧೦/೧೧/೨೦೨೩ರ
(ಮೊದಲ ಪುಟದಿಂದ) ಅವಧಿಯಲ್ಲಿ ಗ್ರಾಮ ಪಂಚಾಯಿತಿಯ ಸಿಬ್ಬಂದಿ ವೇತನ ಖಾತೆಯಿಂದ ತಮ್ಮ ತಿಂಗಳ ವೇತನವಲ್ಲದೇ ಹೆಚ್ಚುವರಿಯಾಗಿ ರೂ. ೧೫,೨೯,೩೯೧ ಗಳನ್ನು ತಮ್ಮ ವೈಯಕ್ತಿಕ ಖಾತೆಗೆ ಜಮೆ ಮಾಡಿಕೊಂಡಿರುತ್ತಾರೆ. ಇದರೊಂದಿಗೆ ನಮ್ಮ ಪಂಚಾಯಿತಿಯ ೧೫ನೇ ಹಣಕಾಸಿನ ಖಾತೆಯಿಂದ ರೂ. ೧,೧೧,೮೨೦ ಗಳನ್ನು ಗುತ್ತಿಗೆದಾರರುಗಳಿಗೆ ವಿವಿಧ ಕಂತುಗಳಲ್ಲಿ ಜಮೆಮಾಡಿ ಪುನಃ ತಮ್ಮ ವೈಯಕ್ತಿಕ ಖಾತೆಗೆ ವರ್ಗಾಯಿಸಿಕೊಂಡಿದ್ದು, ಒಟ್ಟು ರೂ. ೧೬,೪೧,೨೧೧ ದುರುಪಯೋಗಪಡಿಸಿಕೊಂಡಿರುತ್ತಾರೆ.
ನAತರ ದಿನಾಂಕ ೨೯/೧೨/೨೦೨೩ ರಂದು ಸರಿತ ಅವರು ಚಲನ್ ಮುಖಾಂತರ ಗ್ರಾಮ ಪಂಚಾಯಿತಿ ಸಿಬ್ಬಂದಿ ಖಾತೆಗೆ ರೂ. ೪೯,೯೦೦ ಹಾಗೂ ರೂ. ೬,೧೦೦ ಗಳನ್ನು ಫೋನ್ ಪೇ ಮುಖಾಂತರ ಜಮೆ ಮಾಡಿರುತ್ತಾರೆ. ಅಂತಿಮವಾಗಿ ಸರಿತ ಐಗೂರು ಗ್ರಾಮ ಪಂಚಾಯತಿಯ ರೂ. ೧೫,೮೫,೨೧೧ (ಹದಿನೈದು ಲಕ್ಷದ ಎಂಬತ್ತೆöÊದು ಸಾವಿರದ ಇನ್ನೂರ ಹನ್ನೊಂದು ರೂಪಾಯಿ)ಗಳನ್ನು ದುರುಪಯೋಗಪಡಿಸಿಕೊಂಡಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಳೆದ ೧೦.೦೧.೨೦೨೪ರಂದು ಪಿಡಿಓ ಜಿ. ಬಾಲಕೃಷ್ಣ ಅವರು ನೀಡಿದ ದೂರಿನ ಮೇರೆ ಸರಿತ ವಿರುದ್ಧ ಮೊಕದ್ದಮೆ ದಾಖಲಾಗಿದೆ.
ಆರಂಭದಲ್ಲಿ ರೂ. ೧೫,೮೫,೨೧೧ ರೂಪಾಯಿಗಳ ದುರುಪಯೋಗದ ಬಗ್ಗೆ ಮಾಹಿತಿ ಹೊರಬಿದ್ದು, ಎಫ್ಐಆರ್ ದಾಖಲಾಗುತ್ತಿದ್ದಂತೆ ಸರಿತ ಅವರು ನ್ಯಾಯಾಲಯದ ಮೊರೆಹೋಗಿದ್ದು, ಜಾಮೀನಿನ ಮೇಲೆ ಹೊರಗಿದ್ದಾರೆ.
ಈ ನಡುವೆ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಹಣಕಾಸು ವಹಿವಾಟಿನ ಬಗ್ಗೆ ಸಮಗ್ರ ವರದಿ ತಯಾರಿಸಿದ್ದು, ಇದರಲ್ಲಿ ಪಂಚಾಯಿತಿಯ ೧೫ನೇ ಹಣಕಾಸು ಯೋಜನೆ ಹಾಗೂ ಸಿಬ್ಬಂದಿ ವೇತನ ಖಾತೆಯಿಂದ ಒಟ್ಟಾರೆ ರೂ. ೨೬,೩೬,೨೧೦ ರೂಪಾಯಿಗಳು ದುರುಪಯೋಗವಾಗಿರುವ ಬಗ್ಗೆ ಉಲ್ಲೇಖಿಸಿದ್ದಾರೆ.
ಇ.ಓ. ವರದಿ ವಿವರ : ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಬಾಲಕೃಷ್ಣ ಅವರನ್ನು ವಿಚಾರಿಸಲಾಗಿ ಹೆಚ್ಚುವರಿಯಾಗಿ ಪಾವತಿಯಾಗಿರುವ ಮೊತ್ತ ರೂ. ೯,೬೬,೩೧೦ ಮತ್ತು ರೂ.೫,೬೮,೨೭೭ ಗಳನ್ನು ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಆದ ಸರಿತ ಅವರ ಖಾತೆಗೆ ಜಮೆ ಮಾಡಿಕೊಂಡಿರುವುದಾಗಿ ತಿಳಿಸಿದ ಮೇಲೆ ಪರಿಶೀಲನೆ ಮಾಡಿ ನೋಡಲಾಗಿ ಸರಿತ ಅವರ ಖಾತೆಗೆ ಸದರಿ ಹಣ ಜಮೆಯಾಗಿರುವುದು ಕಂಡುಬAದಿರುತ್ತದೆ ಎಂದು ಬ್ಯಾಂಕ್ ಖಾತೆ ವಿವರಗಳನ್ನು ಲಗತ್ತಿಸಿ ವರದಿ ನೀಡಿದ್ದಾರೆ.
ಒಟ್ಟಾರೆಯಾಗಿ ೨೦೨೧-೨೨ನೇ ಸಾಲಿನಿಂದ ೨೦೨೩-೨೪ನೇ ಸಾಲಿನವರೆಗೆ ಐಗೂರು ಗ್ರಾಮ ಪಂಚಾಯಿತಿಯಲ್ಲಿ ೧೫ನೇ ಹಣಕಾಸು ಯೋಜನೆಯಡಿ ರೂ.೧೧,೦೧,೬೨೩ ಹಾಗೂ ಸಿಬ್ಬಂದಿ ವೇತನ ಖಾತೆಯಿಂದ ರೂ. ೧೫,೩೪,೫೮೭ ಸೇರಿದಂತೆ ಒಟ್ಟಾರೆಯಾಗಿ ರೂ.೨೬,೩೬,೨೧೦ ರೂಪಾಯಿಗಳು ದುರುಪಯೋಗ ಆಗಿರುವ ಬಗ್ಗೆ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ವರದಿ ನೀಡಿದ್ದಾರೆ.
ಪ್ರಕರಣದ ಬಗ್ಗೆ ತನಿಖೆ ಕೈಗೊಂಡ ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಮುದ್ದು ಮಹದೇವ ಅವರು, ಈ ಅವಧಿಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿ. ಬಾಲಕೃಷ್ಣ ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಗ್ರಾಮ ಪಂಚಾಯಿತಿಯ ಬಹುತೇಕ ಹಣದ ವ್ಯವಹಾರಗಳಿಗೆ ಪಿಡಿಓ ಹಾಗೂ ಅಧ್ಯಕ್ಷರ ಹೆಬ್ಬೆಟ್ಟು ಸಹಿ (ಥಂಬ್ ಸ್ಕಾö್ಯನ್) ಬೇಕಿರುವುದರಿಂದ, ಪ್ರಕರಣದಲ್ಲಿ ಪಿಡಿಓ ಅವರ ಪಾತ್ರ ಇರುವ ಬಗ್ಗೆ ಅಗತ್ಯ ದಾಖಲೆಗಳ ಸಹಿತ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ, ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಕಳೆದ ೨೦೨೪ರ ಆಗಸ್ಟ್ ತಿಂಗಳಿನಲ್ಲಿ ಐಗೂರು ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಪಿಡಿಓ ಬಾಲಕೃಷ್ಣ ಅವರು ವಯೋ ನಿವೃತ್ತರಾಗಿದ್ದು, ನಿವೃತ್ತರಾದ ೬ ತಿಂಗಳ ನಂತರ ಕಾನೂನು ಕ್ರಮಕ್ಕೆ ಒಳಪಟ್ಟಿದ್ದಾರೆ.
ಪೊಲೀಸರಿಗೆ ದೂರು ನೀಡಿದ ವ್ಯಕ್ತಿಯೇ ಪ್ರಕರಣದಲ್ಲಿ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡುಬAದಿರುವುದರಿAದ ಈ ಕ್ರಮ ಜರುಗಿಸಲಾಗಿದೆ. ಪ್ರಕರಣದಲ್ಲಿ ಇನ್ನೂ ಹಲವರು ಕಾನೂನು ಕ್ರಮಕ್ಕೆ ಒಳಪಡುವ ಸಾಧ್ಯತೆಯಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.