ಐಗೂರು, ಮಾ. ೧೩: ಕಳೆದ ವರ್ಷದ ಜುಲೈ ತಿಂಗಳಿನ ಮಳೆಗಾಲದಲ್ಲಿ ಐಗೂರಿನ ಚೋರನ ಹೊಳೆಯು ತುಂಬಿ ಹರಿದು ಹೊಳೆಯ ಭಾಗದಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿರುವ ನಿವಾಸಿಗಳು ಜಲ ಸಂಕಷ್ಟಕ್ಕೆ ಸಿಲುಕಿದ್ದರು. ಸಂಕಷ್ಟಕ್ಕೆ ಸಿಲುಕಿದ ನಿವಾಸಿಗಳಾದ ಐಗೂರಿನ ಮೋಹನ್ ದಾಸ್, ಹರಿದಾಸ್, ಶ್ವೇತಾ ಸುರೇಶ, ರಮೇಶ ಮತ್ತು ರೂಪಾ ದಾಮೋದರ್ ಹೊಳೆಯ ಬದಿಯಲ್ಲಿ ತಡೆಗೋಡೆ ನಿರ್ಮಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜ್ ಮತ್ತು ಕ್ಷೇತ್ರದ ಶಾಸಕ ಮಂತರ್ ಗೌಡ ಅವರಿಗೆ ಮನವಿಯನ್ನು ಸಲ್ಲಿಸಿದ್ದರು.

ಇದೀಗ ಐಗೂರಿನಲ್ಲಿ ಸಣ್ಣ ನೀರಾವರಿ ಇಲಾಖೆಯ ಅನುದಾನ ದಿಂದ ಬಿಡುಗಡೆಗೊಂಡ ರೂ. ೩೦ ಲಕ್ಷ ವೆಚ್ಚದ ೮೦ ಮೀಟರ್ ಉದ್ದದ ತಡೆಗೋಡೆಗೆ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಭೂಮಿಪೂಜೆಯನ್ನು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಕಾರ್ಯಪಾಲಕ ಅಭಿಯಂತರ ಕುಮಾರಸ್ವಾಮಿ, ಪಿಡಿಓ ಪೂರ್ಣ ಕುಮಾರ್, ಕಾಂಗ್ರೆಸ್ಸಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಚಂಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಕೆಡಿಪಿ ಸದಸ್ಯೆ ಸಬಿತ ಚೆನ್ನಕೇಶವ, ಗ್ರಾ.ಪಂ. ಮಾಜಿ ಸದಸ್ಯ ಮುತ್ತಪ್ಪ, ಮಾಜಿ ಉಪಾಧ್ಯಕ್ಷ ಗಣೇಶ್, ಎಸ್.ಎಸ್. ಯೋಗೇಶ್, ಹೊನ್ನಪ್ಪ, ಗುತ್ತಿಗೆದಾರ ರಂಗಸ್ವಾಮಿ, ದಿನೇಶ್, ಮೋಹನ್ ದಾಸ್ ಮತ್ತು ರೂಪಾ ದಾಮೋದರ ಇದ್ದರು.