ಕೂಡಿಗೆ, ಮಾ. ೧೨: ಸೋಮವಾರಪೇಟೆ ಅರಣ್ಯ ವಲಯದ ಯಡವನಾಡು, ನಿಡ್ತ ಮತ್ತು ಜೇನುಕಲ್ಲು ಬೆಟ್ಟ ಮೀಸಲು ಅರಣ್ಯ ಪ್ರದೇಶಗಳನ್ನು ಬೆಂಕಿಯಿAದ ರಕ್ಷಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಹುದುಗೂರು ಉಪ ವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಕೈಗೊಳ್ಳಲಾಗಿದೆ.
ಸಾರ್ವಜನಿಕರಲ್ಲಿ ಅರಣ್ಯ ಪ್ರದೇಶಕ್ಕೆ ಬೆಂಕಿ ಹಾಕದಂತೆ ಹಾಗೂ ಅರಣ್ಯಕ್ಕೆ ಬೆಂಕಿ ಹಾಕುವುದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಹಲವಾರು ಜನಜಾಗೃತಿ ಕಾರ್ಯಕ್ರಮಗಳನ್ನು ಈಗಾಗಲೇ. ಕೈಗೊಳ್ಳಲಾಗಿದೆ.
ಯಡವನಾಡು, ಹೆಬ್ಬಾಲೆ ಹಾಗೂ ಬಾಣಾವರ ಸರ್ಕಲ್ಗಳ ಹತ್ತಿರ ಬೀದಿ ನಾಟಕಗಳ ಮುಖಾಂತರ ಅರಣ್ಯದ ಬೆಂಕಿ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಲಾಗಿರುತ್ತದೆ. ಬೆಂಕಿಯಿAದ ಅರಣ್ಯವನ್ನು ರಕ್ಷಿಸಲು ಸ್ಥಳೀಯ ಗ್ರಾಮಸ್ಥರ, ಗ್ರಾಮ ಅರಣ್ಯ ಸಮಿತಿಯ ಸದಸ್ಯರುಗಳ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಸಹಕಾರಗಳನ್ನು ಕೋರಿ ಅರಣ್ಯದ ಬೆಂಕಿ ಬಗ್ಗೆ ಜಾಗೃತಿ ಮೂಡಿಸುವ ಬಿತ್ತಿ ಪತ್ರಗಳನ್ನು ವಿತರಿಸಲಾಗುತ್ತಿದೆ. ಈಗಾಗಲೇ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ರೇಖೆಗಳನ್ನು ನಿರ್ಮಿಸಿ ಸುಡಲಾಗಿರುತ್ತದೆ. ಅರಣ್ಯ ರಕ್ಷಣೆಗಾಗಿ ಹೆಚ್ಚಿನ ಬೆಂಕಿ ಕಾವಲುಗಾರಗಳನ್ನು ನೇಮಿಸಿಕೊಳ್ಳಲಾಗಿದೆ. ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಿನಪೂರ್ತಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಗಸ್ತುತಿರುಗುತ್ತ ಬೆಂಕಿಯಿAದ ಅರಣ್ಯ ರಕ್ಷಣೆ ಮಾಡುವ ಕರ್ತವ್ಯದಲ್ಲಿ ನಿರತರಾಗಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದ ಸಂದರ್ಭಗಳಲ್ಲಿ ಬೆಂಕಿ ನಂದಿಸಲು ನೀರಿನ ಟ್ಯಾಂಕರ್, ಬ್ಲೋವರ್ಗಳು, ನೀರಿನ ಸ್ತೆçÃಯರುಗಳು, ಮರ ಕೊಯ್ಯುವ ಯಂತ್ರಗಳು ಹಾಗೂ ಬೀಟರ್ಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡು, ಕರ್ತವ್ಯ ನಿರ್ವಹಿಸಲಾಗುತ್ತಿದೆ. ಅರಣ್ಯ ಪ್ರದೇಶ ಕಾಣುವಂತಹ ಪ್ರದೇಶಗಳಲ್ಲಿ ವೀಕ್ಷಣೆ ಗೋಪುರಗಳನ್ನು ನಿರ್ಮಿಸಲಾಗಿದ್ದು ಸದರಿ ಗೋಪುರಗಳಲ್ಲಿ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದು ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದು ಹೊಗೆ ಕಾಣಿಸುತ್ತಿದ್ದಂತಹ ಸಂದರ್ಭಗಳಲ್ಲಿ ಸ್ಥಳದ ಮಾಹಿತಿಯನ್ನು ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ತಿಳಿಸಿದಾಗ ಸಿಬ್ಬಂದಿಗಳು ವಾಹನದಲ್ಲಿ ತೆರಳಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗುತ್ತಾರೆ. ಪ್ರಸ್ತುತ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಅರಣ್ಯವನ್ನು ಬೆಂಕಿಯಿAದ ರಕ್ಷಿಸುವ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿದ್ದು, ದಿನವಿಡೀ ಶ್ರಮಿಸುತ್ತಿರುವುದು ಕಂಡುಬರುತ್ತದೆ.
ಮಳೆ ಇದ್ದರೆ ಬೆಳೆ - ಕಾಡಿದ್ದರೆ ನಾಡು ಎಂಬAತೆ, ಅರಣ್ಯ ಪ್ರದೇಶಗಳು, ಪರಿಸರದ ಸಮತೋಲನಕ್ಕೆ ಕಾರಣವಾಗಿರುತ್ತದೆ. ಆದುದರಿಂದ ಅರಣ್ಯ ಪ್ರದೇಶಕ್ಕೆ ಬೆಂಕಿ ಹಾಕದಂತೆ ಹಾಗೂ ಬೆಂಕಿ ಬಿದ್ದಂತಹ ಸಂದರ್ಭಗಳಲ್ಲಿ ಇಲಾಖೆ ಸಿಬ್ಬಂದಿಗಳಿಗೆ ಸಹಕಾರ ನೀಡುವಂತೆ ಸೋಮವಾರಪೇಟೆ ವಲಯ ಅರಣ್ಯ ಅಧಿಕಾರಿ ಎನ್. ಶೈಲೇಂದ್ರ ಕುಮಾರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.